ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ.
ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9 ತಿಂಗಳಿನಿoದ ಮೀನುಗಾರಿಕೆಗೆ ತೆರಳಿರಲಿಲ್ಲ. ಆಗಾಗ ಮಾತ್ರ ಬೇರೆಯವರ ಜೊತೆ ಸಹಾಯಕರಾಗಿ ಅವರು ಹೋಗುತ್ತಿದ್ದರು. ಕಾರವಾರದ ಬಾವ ರಾಜು ತಾಂಡೇಲ್’ರ ಮನೆಯಲ್ಲಿ ವಾಸವಾಗಿದ್ದ ಅವರು ಸೆ 10ರಂದು ಬೆಳಗ್ಗೆ 4 ಗಂಟೆಗೆ ಏಕಾಏಕಿ ಪಾತಿದೋಣಿ ಮೂಲಕ ಕಾರವಾರದ ಮೀನುಗಾರಿಕೆಗೆ ತೆರಳಿದ್ದು, ಎದೆ ನೋವಿನಿಂದ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮುದುಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ನಂತರ ಕುಮಟಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಉಮೇಶ್ ಸಾವನಪ್ಪಿದ ಬಗ್ಗೆ ಘೋಷಿಸಿದರು.