ಯಲ್ಲಾಪುರ: ನಾಯ್ಕನಕೆರೆಯ ದತ್ತ ಮಂದಿರದ ನೂತನ ಶಿಲಾಮಯ ದೇವಸ್ಥಾನಕ್ಕೆ ಅಡಿಪಾಯದ ಕೆಲಸ ಮುಗಿದಿದೆ. ಕಟ್ಟಡದ ಕೆತ್ತನೆಯ ಶಿಲಾನ್ಯಾಸವನ್ನು ಗಣಪತಿ ಪೂಜೆಯ ಮೂಲಕ ನೆರವೇರಿಸಲಾಯಿತು.
ಸತಿಶ ಭಟ್ಟ ಗುಂಡ್ಯಾನಕೊಪ್ಪ ಅವರ ವೈದಿಕತ್ವದಲ್ಲಿ ಪೂಜೆ ನೆರವೇರಿಸಿ ಶಿಲಾಮಯ ಕಟ್ಟಡದ ಮೊದಲ ಕೆತ್ತನೆಯ ಕಲ್ಲನ್ನು ಇಡಲಾಯಿತು. ಈ ವೇಳೆ ರಾಮಚಂದ್ರಾಪುರ ಮಠದ ಪ್ರತಿನಿಧಿಗಳಾದ ಮಹೇಶ ಚಟ್ನಳ್ಳಿ, ಎಸ್.ವಿ.ಯಾಜಿ, ಸ್ಥಳೀಯ ಪ್ರಮುಖರಾದ ಕೆ.ಟಿ.ಭಟ್ಟ, ಪ್ರಶಾಂತ ಹೆಗಡೆ, ಶಾಂತಾರಾಮ ಹೆಗಡೆ, ಹರಿಪ್ರಕಾಶ ಕೋಣೆಮನೆ, ಅರ್ಚಕ ಅಶೋಕ ಹೆಗಡೆ, ಸಿ.ಜಿ.ಹೆಗಡೆ, ನಾಗರಾಜ ಮದ್ಗುಣಿ, ನರಸಿಂಹ ಗಾಂವ್ಕರ್, ನಾಗೇಶ ಯಲ್ಲಾಪುರಕರ್, ಅನಂತ ಬಾಂದೇಕರ್, ಸತೀಶ ದಾನಗೇರಿ ಇದ್ದರು.
ಧರ್ಮಸ್ಥಳ ಸಂಘಕ್ಕೆ ಬೇಕು ಮಹಿತಿ ಕೇಂದ್ರ
ಹೊನ್ನಾವರ: `ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕೇಂದ್ರ ಆರಂಭಿಸುವ ಮೂಲಕ ಕಾರ್ಯಕ್ರಮದ ಹೆಚ್ಚಿನ ಮಾಹಿತಿಯು ಜನರಿಗೆ ಲಭ್ಯವಾಗುವಂತಾಗಬೇಕಿದೆ’ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಅಭಿಪ್ರಾಯಪಟ್ಟರು.
ಗ್ರಾಮಾಭಿವೃದ್ದಿ ಯೋಜನಾ ಕಛೇರಿಯಲ್ಲಿ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು `ಯೋಜನೆಯು ಹಿಂದಿನಿAದಲೂ ಪತ್ರಕರ್ತರೊಂದಿಗೆ ಒಡನಾಟವಿದ್ದು, ಯೋಜನೆಯ ಹಲವು ಕಾರ್ಯಕ್ರಮಗಳು ಮಾಧ್ಯಮದಲ್ಲಿ ವರದಿಯಾಗಿದೆ. ರಚನಾತ್ಮಕ ಪತ್ರಿಕೊದ್ಯಮದ ಅಂಗವಾಗಿ ನಿರಂತರ ಪ್ರಗತಿ ಪತ್ರಿಕೆಯ ಮೂಲಕ ದೊಡ್ಡ ಸಂಚಲನ ಮೂಡಿಸುತ್ತಿದೆ’ ಎಂದರು.
ಯೋಜನೆಯ ಜಿಲ್ಲಾ ನಿರ್ದೆಶಕರಾದ ಮಹೇಶ ಎಂ.ಡಿ ಮಾತನಾಡಿ `ಯೋಜನೆಯ ಕಾರ್ಯಕ್ರಮ ಜನತೆಗೆ ತಲುಪಿಸುವ ಕಾರ್ಯ ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ಯೋಜನೆಯ ಜನಪರ ಕಾರ್ಯಕ್ರಮಗಳು ಜನರ ಬದುಕಿಗೆ ದಾರಿ ದೀಪವಾಗಿದೆ’ ಎಂದರು,
ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ್, ಕಾರ್ಯದರ್ಶಿ ವಿಶ್ವನಾಥ ಸಾಲ್ಕೋಡ್ ಮಾತನಾಡಿದರು.
ಯೋಜನಾಧಿಕಾರಿ ವಾಸಂತಿ ಅಮಿನ್ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನಯಾ ಶೆಟ್ಟಿ ನಿರ್ವಹಿಸಿದರು.
ಲವಲವಿಕೆಯ ಜೀವನಕ್ಕೆ ಹಾಸ್ಯ ಅಗತ್ಯ
ಯಲ್ಲಾಪುರ: `ಲವಲವಿಕೆಯ ಜೀವನಕ್ಕೆ ಹಾಸ್ಯ ಅಗತ್ಯ’ ಎಂದು ಎಂದು ಸಾಹಿತಿ ಅರುಣಕುಮಾರ ಹಬ್ಬು ಹೇಳಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದಿ.ವೆಂಕಣ್ಣಾಚಾರ್ಯ ಕಟ್ಟಿ ಅವರ `ಸಂದೇಶ ರಾಮಾಯಣ’ ಮತ್ತು ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಅವರ `ಬ್ಯಾಸರಕಿ ಬ್ಯಾಡೋ ನಗುವಾಗ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
`ಹಾಸ್ಯ ಸಾಹಿತ್ಯದ ಮೂಲಕ ಜೀವನದಲ್ಲಿ ನಗುವಿನ ಮಹತ್ವವನ್ನು ತಿಳಿಸುತ್ತಿರುವ ಕೃತಿಕಾರ ಶ್ರೀರಂಗ ಕಟ್ಟಿ ಅವರು ನಗುವು ಮಾಯವಾಗುತ್ತಿರುವ ಈ ಕಾಲದಲ್ಲಿ ಮನದ ಬೇಸರವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದವರು ಹೇಳಿದರು. `ಒತ್ತಡ ಮತ್ತು ಧಾವಂತದ ಸಂದರ್ಭದಲ್ಲಿ ನಗು ಅಪರೂಪವಾಗಿದೆ. ಬಿಗುವಿನ ಮೊಗದಲ್ಲಿ ನಗೆ ಅರಳಿಸುವ ಕೆಲಸ ಸಾಹಿತ್ಯದಿಂದ ಆಗಬೇಕು’ ಎಂದರು,.
ವಿಶ್ರಾoತ ಪ್ರಾಂಶುಪಾಲ ಮತ್ತು ಕೃತಿಕಾರ ಶ್ರೀರಂಗ ಕಟ್ಟಿ ಮಾತನಾಡಿ `ಸಾಮಾಜಿಕ ಜಾಲತಾಣಗಳ ಮೂಲಕ ನಗೆ ಸಂದೇಶವನ್ನು ನಿರಂತರವಾಗಿ ಬಿತ್ತರಿಸಿದ್ದು, ಈಗ ಅದನ್ನು ಸೇರಿಸಿ `ಬ್ಯಾಸರಕಿ ಬ್ಯಾಡೋ ನಗುವಾಗ’ ಕೃತಿಯ ಮೂಲಕ ಓದುಗರಿಗೆ ನಗೆ ಹಂಚುವ ಪ್ರಯತ್ನ ಮಾಡಿದ್ದೇನೆ’ ಎಂದರು.
ಸಾಹಿತಿ ವನರಾಗ ಶರ್ಮಾ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಆರ್.ಡಿ ಜನಾರ್ಧನ ಇದ್ದರು. ಕಲಾವಿದ ಸತೀಶ ಯಲ್ಲಾಪುರ ಮತ್ತು ಪ್ರಾಂಶುಪಾಲ ದತ್ರಾತ್ರಯ ಗಾಂವ್ಕಾರ ಅವರು ಕೃತಿಗಳನ್ನು ಪರಿಚಯಿಸಿದರು. ಶರಾವತಿ ಶಿರ್ನಾಲಾ ಕಾವ್ಯ ಗಾಯನ ಪ್ರಸ್ತುತಪಡಿಸಿದರು.
ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅವರು ಸ್ವಾಗತಿಸಿದರು. ವಿದ್ಯಾರ್ಥಿ ವೇದಾ ಭಟ್ಟ ಪ್ರಾರ್ಥಿಸಿದರು. ಪತ್ರಕರ್ತ ಸುಬ್ರಾಯ ಬಿದ್ರೆಮನೆ ನಿರ್ವಹಿಸಿದರು. ಉಪನ್ಯಾಸಕಿ ಸವಿತಾ ನಾಯ್ಕ ಅವರು ವಂದಿಸಿದರು.
ವಿದ್ಯಾರ್ಥಿಗಳಿಗೆ ಸಾಫ್ಟವೇರ್ ಜ್ಞಾನ ಅಗತ್ಯ
ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಸಾಫ್ಟವೇರ್ ಕ್ಷೇತ್ರದಲ್ಲಿನ ನೂತನ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿ ಕಾರ್ಯಗಾರವನ್ನು ಫಿನಾಸ್ತ್ರ ಸಾಫ್ಟವೇರ್ ಸಂಸ್ಥೆ ಉದ್ಯೋಗಿ ನಿವೇದಿತಾ ರಾಣೇಬೆನ್ನೂರು ಉದ್ಘಾಟಿಸಿದರು.
`ಸಾಫ್ಟವೇರ್ ಉದ್ಯಮ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಬಳಕೆಯಾಗುತ್ತಿರುವ ನೂತನ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ’ ಎಂದವರು ಹೇಳಿದರು.
ಪ್ರಾಚಾರ್ಯ ಡಾ.ವಿ.ಎ ಕುಲಕರ್ಣಿ ಮಾತನಾಡಿ `ಮಹಾವಿದ್ಯಾಲಯವು ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆಗಳೊAದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿಗೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ಶಂಕರ್ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥೆ ಡಾ.ಪೂರ್ಣಿಮ ರಾಯ್ಕರ್ ವಂದಿಸಿದರು. ಪ್ರೊ.ಜಯಶ್ರೀ ಇಂಚಲ್ ಕಾರ್ಯಕ್ರಮ ಸಂಯೋಜಿಸಿದ್ದರು.
ಪ್ರತಿಭಟನೆ ತಡೆದ ಪೊಲೀಸರು: ಸ್ವಾಮೀಜಿ ಬೆಂಬಲಿಗರಿ0ದ ಆಕ್ರೋಶ
ಹೊನ್ನಾವರ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬ0ಧಿಸಿದ0ತೆ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಪ್ರತಿಭಟನೆ ಮುಂದುವರೆದಿದ್ದು, `ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ’ ಎಂದವರು ಘೋಷಿಸಿದರು.ಶಿರೂರು ಸಂತ್ರಸ್ತರ ನ್ಯಾಯಕ್ಕಾಗಿ ಹಾಗೂ ನಾಮಧಾರಿ, ಈಡಿಗ, ಹಾಲಕ್ಕಿ ಸಮಾಜದ ಕುಲಭಾಂದವರಿ0ದ, ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಶರಾವತಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ಬ್ಯಾರಿಕೆಟ್ ಹಾಕುವ ಮೂಲಕ ತಡೆದರು. ಪ್ರತಿಭಟನಾ ನಿರತರು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಎನ್.ಎಚ್.ಎ.ಐ ಕಚೇರಿಗೆ ಮುತ್ತಿಕ್ಕಿ ಹಾಕಲು ಬ್ಯಾರಿಕೇಟ್ ತೆರವು ಗೊಳಿಸುವಂತೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರ ಮನವಿ ಆಲಿಸಲು ಸ್ಥಳಕ್ಕೆ ತಹಶೀಲ್ದಾರ್ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.
ಈ ವೇಳೆ ಪ್ರಣವಾನಂದ ಸ್ವಾಮೀಜಿ ಮಾಧ್ಯಮದವರೊಂದಿಗೆ ಮಾತನಾಡಿ `ಐ.ಆರ್.ಬಿ ಅಥವಾ ಎನ್.ಎಚ್.ಎ.ಐ ಅಧಿಕಾರಿಗಳು ದುರಂತದಿ0ದ ಮೃತಪಟ್ಟ ಮನೆಗೆ ಹೋಗಿ ಸಾತ್ವಂನ ಹೇಳುವ ಕರ‍್ಯ ಮಾಡಿಲ್ಲ. ಜಿಲ್ಲೆಯ ರಾಜಕಾರಣಿಗಳು ಜನರನ್ನು ಮಂಗ ಮಾಡಲು ಹೋರಟಿದ್ದಾರೆ. ನಮ್ಮ ಜೊತೆ ನಿಲ್ಲದ ರಾಜಕಾರಣಿಗಳಿಗೆ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. `ಮುಂದಿನ ದಿನದಲ್ಲಿ ಶಾಸಕರು ಸಚೀವರು ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದರು.
ಅಂಕದ ಜೊತೆ ಕೌಶಲ್ಯವೂ ಅಗತ್ಯ : ವಿದ್ಯಾರ್ಥಿಗಳಿಗೆ ಕಿವಿಮಾತು
ಶಿರಸಿ: ಎಂಇಎಸ್ ಎಂಎ0 ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ `ಮಂಜರಿ’ಯನ್ನು ಆಯೋಜಿಸಲಾಗಿತ್ತು.
ಗಿಡಕ್ಕೆ ನೀರು ಎರೆಯುವ ಮೂಲಕ ಕಾಲೇಜಿನ ಪ್ರಾಚಾರ್ಯ ಪ್ರೊ ಜಿ.ಟಿ.ಭಟ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಇಂದು ಶಿಕ್ಷಣದಲ್ಲಿ 99 ಪ್ರತಿಶತ ಅಂಕ ಪಡೆದರೆ ಸಾಲದು, ಅಂಕಗಳೊAದಿಗೆ ಕೌಶಲ್ಯ, ಸಾಮಾನ್ಯ ಜ್ಞಾನ, ಚಾಕಚಕ್ಯತೆ ಇದ್ದಲ್ಲಿ ಮಾತ್ರ ಉದ್ಯೋಗ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ನಿಮ್ಮ ಪದವಿ ಜೀವನದಲ್ಲಿ ಕಾರ್ಯಪ್ರವೃತ್ತರಾಗಿ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಮಾನದಂಡಗಳನ್ನು, ವಾತಾವರಣವನ್ನು ನಾವು ಒದಗಿಸಲಿದ್ದು, ನಮ್ಮಲ್ಲಿ ನುರಿತ ಪ್ರಾಧ್ಯಾಪಕ ವೃಂದ ನಿಮ್ಮನ್ನು ಸಜ್ಜುಗೊಳಿಸಲಿದೆ’ ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.