ಶಿರಸಿ: ಓದಿಗೆ ತಕ್ಕ ಉದ್ಯೋಗ ಸಿಗದ ಕಾರಣ ನೀಡಗೋಡ ಸದಾಶಿವಳ್ಳಿಯ ಶಿವ ಮಹಾಬಲೇಶ್ವರ ಭಟ್ಟ (32) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅತ್ಯಂತ ಕಡಿಮೆ ಸಂಬಳಕ್ಕೆ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಶಿವ ಭಟ್ಟ ಅವರು ಆ ಕೆಲಸವನ್ನು ಬಿಟ್ಟು ಊರಿಗೆ ಮರಳಿದ್ದರು. ಇಲ್ಲಿ ಊದಬತ್ತಿ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಆದರೆ, `ತನಗೆ ಯೋಗ್ಯ ಉದ್ಯೋಗ ಇಲ್ಲ’ ಎಂದು ಯಾವಾಗಲೂ ಕೊರಗುತ್ತಿದ್ದರು. ಇದೇ ವಿಷಯವಾಗಿ ಸಾಕಷ್ಟು ಸಲ ಸಿಟ್ಟು ಮಾಡಿಕೊಂಡಿದ್ದರು.
`ಯಾವುದಾದರೂ ಒಂದು ಉದ್ಯೋಗವನ್ನು ಸರಿಯಾಗಿ ಮಾಡು’ ಎಂದು ಕೆಲವರು ಬುದ್ದಿ ಹೇಳಿದ್ದರು. ಮಾನಸಿಕವಾಗಿ ಕುಗ್ಗಿದ್ದ ಅವರು ಸದಾ ಒಂಟಿಯಾಗಿರುತ್ತಿದ್ದರು. ಸೆ 12ರಂದು ಸಂಜೆ ಮನೆಯಲ್ಲಿದ್ದ ಶಾಲು ತೆಗೆದುಕೊಂಡು ಹೋಗಿ ಕಬ್ಬಿಣದ ಪಕಾಸಿಗೆ ಕಟ್ಟಿದ ಅವರು ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇತಾಡಿ ಸಾವನಪ್ಪಿದ್ದಾರೆ.



