ಕಾರವಾರ: ಬ್ಯಾಂಕ್ ಎಟಿಎಂ ಒಳಗೆ ನುಗ್ಗಿ ಹಣ ಕದಿಯಲು ಯತ್ನಿಸಿದವನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳನೊಬ್ಬ ಬೆಳಗ್ಗೆ 4.30ರ ಸುಮಾರಿಗೆ ಬಿ ಎಸ್ ಎನ್ ಎಲ್ ಕಟ್ಟಡದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ ಒಳಗೆ ನುಗ್ಗಿದ್ದಾನೆ. ಆತ ಕಳ್ಳತನಕ್ಕೆ ಮುಂದಾಗ ಎಟಿಎಂ ಸೈರನ್ ಸದ್ದು ಮಾಡಿದೆ. ಜೊತೆಗೆ ಎಟಿಎಂ ಬಾಗಿಲು ಸಹ ಲಾಕ್ ಆಗಿದ್ದು, ಕಳ್ಳ ಹೊರಬರಲಾಗದೇ ಅಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ. ಆಗ ಸಮೀಪದ ಎಸ್‌ಬಿಐ ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಅಲ್ಲಿ ಸೇರಿದ್ದ ಜನ ಕಳ್ಳನಿಗೆ ಥಳಿಸಿದ್ದು ಪೊಲೀಸರು ಆತನನ್ನು ಬರಿ ಮೈಯಲ್ಲಿ ಎಳೆದೊಯ್ದಿದ್ದಾರೆ. ಎಟಿಎಂನಿoದ ಯಾವುದೇ ಹಣ ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಕಳ್ಳನ ಬಗ್ಗೆ ವಿಚಾರಣೆ ನಡೆಯುತ್ತಿದೆ.