6
  • Latest

ಪ್ರಾಣಿಪ್ರಿಯ ಪೊಲೀಸರಿಗೆ ಗೋ ಪ್ರೇಮಿಗಳ ಜೈಕಾರ: ಅಕ್ರಮ ಸಾಗಾಟದ ಸುಳಿವು ನೀಡಿದ ಸಗಣಿ ವಾಸನೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರಾಣಿಪ್ರಿಯ ಪೊಲೀಸರಿಗೆ ಗೋ ಪ್ರೇಮಿಗಳ ಜೈಕಾರ: ಅಕ್ರಮ ಸಾಗಾಟದ ಸುಳಿವು ನೀಡಿದ ಸಗಣಿ ವಾಸನೆ!

AchyutKumar by AchyutKumar
in ಸ್ಥಳೀಯ

ಕುಮಟಾ: ಕಾರು ಹಾಗೂ ಬೈಕು ಸೇರಿ ವಿವಿಧ ಸರಕು ಸಾಗಾಣಿಕೆ ಮಾಡುವ ಕಂಟೇನರ್ ವಾಹನದಲ್ಲಿ ಕದ್ದುಮುಚ್ಚಿ ಜಾನುವಾರು ಸಾಗಿಸುತ್ತಿದ್ದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಹಾರಾಷ್ಟ್ರ ಕೊಲ್ಲಾಪುರದಿಂದ ಕೇರಳದ ಪಲಕ್ಕಾಡ್’ಗೆ ಕಂಟೇನರ್ ವಾಹನ ತೆರಳುತ್ತಿದ್ದು, ಶನಿವಾರ ಬೆಳಗ್ಗೆ ಕುಮಟಾ ಪೊಲೀಸರು ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದ್ದರು. ಆಗ ಕಂಟೇನರ್ ಚಾಲಕ ಎಲ್ಲಾ ಕಾಗದ ಪತ್ರಗಳೊಂದಿಗೆ ಪೊಲೀಸರ ಎದುರು ಬಂದಿದ್ದು, ಕಂಟೇನರ್ ಒಳಗೆ ಸರಕು ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಹೇಳಿಕೊಂಡಿದ್ದ. ಇದನ್ನು ನಂಬಿದ ಪೊಲೀಸ್ ಸಿಬ್ಬಂದಿ ಆ ವಾಹನವನ್ನು ಬಿಟ್ಟು ಕಳುಹಿಸುವ ತಯಾರಿಯಲ್ಲಿದ್ದರು. ಅದಾಗಿಯೂ ಸಣ್ಣ ಅನುಮಾನದ ಹಿನ್ನಲೆ ಪಿಎಸ್‌ಐ ರವಿ ಗುಡ್ಡಿ ಕಂಟೇನರ್ ಒಳಗೆ ತಪಾಸಣೆ ನಡೆಸಿದರು.

ಅಕ್ರಮದ ಸುಳಿವು ನೀಡಿದ ಸಗಣಿ ವಾಸನೆ!
ಕಂಟೇನರ್ ಒಳಭಾಗದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಜಾನುವಾರುಗಳನ್ನು ಬಂಧಿಸಲಾಗಿತ್ತು. ಜಾನುವಾರುಗಳ ಅರೆಚಾಟ ಸಹ ಹೊರಕೇಳದ ರೀತಿಯಲ್ಲಿತ್ತು. ಹೀಗಾಗಿ 26 ದಷ್ಟಪುಷ್ಟವಾದ ಎಮ್ಮೆ ಹಾಗೂ 1 ಕೋಣವನ್ನು ಕೊಲ್ಲಾಪುರದಿಂದ ಕುಮಟಾವರೆಗೆ ಸಾಗಿಸಿದರೂ ಯಾವ ಪೊಲೀಸರಿಗೂ ಗೊತ್ತಾಗಿರಲಿಲ್ಲ. ಆದರೆ, ತಪಾಸಣೆ ವೇಳೆ ಸಣ್ಣದಾಗಿ ಸಗಣಿ ವಾಸನೆ ಬಂದಿದ್ದು ಕಂಟೇನರ್ ಬಾಗಿಲು ತೆರೆದಾಗ ಎಮ್ಮೆಗಳ ಕೂಗಾಟ ಕೇಳಿಸಿತು. ಪೊಲೀಸರ ಸೂಕ್ಷ್ಮತೆಯಿಂದ ಬಹುದೊಡ್ಡ ಅಕ್ರಮ ಜಾನುವಾರು ಸಾಗಾಟ ಜಾಲ ಪತ್ತೆಯಾಯಿತು.

ಈ ಎಲ್ಲಾ ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಸಾಗಾಟಕ್ಕೆ ಬಳಸಿದ 8 ಲಕ್ಷ ರೂ ಮೌಲ್ಯದ ಕಂಟೇನರ್ ಜೊತೆ 8.8 ಲಕ್ಷ ರೂ ಮೌಲ್ಯದ 26 ಎಮ್ಮೆ ಹಾಗೂ ಒಂದು ಕೋಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿದ್ದ ಮೈಸೂರಿನ ಅಯಲ್ ಅಹ್ಮದ್, ಕೇರಳ ಕಾಸರಗೋಡಿನ ಅಬುಬಕರ್ ಚರಕಾಳ, ಅಬ್ದುಲ್ ರೆಹಮಾನ್, ಹೊಳೆ ನರಸಿಂಹಪುರದ ಅಸ್ಗರ ಹುಸೇನ್ ಎಂಬಾತರನ್ನು ಬಂಧಿಸಿದ್ದಾರೆ. ಲಾರಿಯ ಮಾಲಕ ದಾವಣಗೆರೆಯ ಚಮನ್ ಮಹಮದ್ ಪರಾರಿಯಾಗಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಪಿಎಸ್‌ಐ ಮಂಜುನಾಥ ಗೌಡರ್ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.

ಕಂಟೇನರ್ ಒಳಗೆ ಎಮ್ಮೆಗಳ ಸಾಗಾಟ ಹೇಗಿತ್ತು? ಪೊಲೀಸರು ವಶಕ್ಕೆ ಪಡೆದ ಜಾನುವಾರುಗಳು ಹೇಗಿವೆ? ವಿಡಿಯೋ ಇಲ್ಲಿ ನೋಡಿ..

ShareSendTweetShare
Previous Post

ರೈತರಿಗೆ ನೆರವಾದ ಸವಣಗೇರಿ ಹಾಲು ಉತ್ಪಾದಕ ಸಂಘ

Next Post

ಪ್ರವಾಸಿಗರ ಪಾಲಿಗೆ ಖುಷಿ ಸುದ್ದಿ: ಪ್ರಸಿದ್ಧ ಜಲಪಾತ ವೀಕ್ಷಣೆಗೆ ಸಿಗಲಿದೆ ಅವಕಾಶ!

Next Post
Good news for tourists You will get a chance to see the famous waterfall

ಪ್ರವಾಸಿಗರ ಪಾಲಿಗೆ ಖುಷಿ ಸುದ್ದಿ: ಪ್ರಸಿದ್ಧ ಜಲಪಾತ ವೀಕ್ಷಣೆಗೆ ಸಿಗಲಿದೆ ಅವಕಾಶ!

ಸಾಧಕ ಕೃಷಿಕರಿಗೆ ಮಲೆನಾಡು ಸಂಘದ ಗೌರವ

ಅಸ್ತಮಾದಿಂದ ಸಾವನಪ್ಪಿದ ಹೋಟೆಲ್ ಕಾರ್ಮಿಕ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.