ಕುಮಟಾ: ಬಾಡ ಮೂಲದ ಶಿವಕುಮಾರ ಬಟ್ಕರೆ ಅವರು ವಿನ್ಯಾಸಗೊಳಿಸಿದ `ಅಲ್-ಡ್ರೈವನ್ ಏ ರ್ ಕ್ರಾಫ್ಟ್ ಇ ನ್ ಸ್ಪೆಕ್ಷ ನ್ ಸಿಸ್ಟಮ್ ಜೋದಪುರದಲ್ಲಿ ನಡೆದ ಡಿಫೆನ್ಸ್ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡಿದೆ.
ಶಿವಕುಮಾರ ಭಟ್ಕರೆ ಪಿಯುಸಿ ನಂತರ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದು, ನಂತರ ಮಿಲಿಟರಿ ಅಕಾಡೆಮಿಯಲ್ಲಿ ಯುದ್ಧ ವಿಮಾನ ಚಾಲನಾ ತರಬೇತಿ ಪಡೆದಿದ್ದಾರೆ. ಅವರ ತಂದೆ ಶಾಂತಾರಾಮ ಭಟೈರೆ ಸಹ ಭಾರತೀಯ ವಾಯದಳದ ಅಧಿಕಾರಿ.
ಯುದ್ಧ ವಿಮಾನ ಹಾರಾಟ ನಡೆಸುವ ಮೊದಲು ಅವುಗಳ ಪರೀಕ್ಷೆ ನಡೆಯಲಿದ್ದು, ಅಲ್ಲಿನ ನ್ಯೂನ್ಯತೆ ಕಂಡು ಹಿಡಿಯುವುದಕ್ಕಾಗಿ ಶಿವಕುಮಾರ ಅವರು `ಆಲ್- ಡ್ರೈವನ್ ಏರ್‌ಕ್ರಾಫ್ಟ್ ಇನಸ್ಪೆಕ್ಷನ್ ಸಿಸ್ಟಮ್’ ಸಂಶೋಧಿಸಿದ್ದಾರೆ. ದ್ರೋಣ್ ಕ್ಯಾಮೆರಾ ಆಧಾರಿತ ಈ ತಂತ್ರಜ್ಞಾನ ನ್ಯೂನ್ಯತೆ ಪರಿಶೀಲನೆಗೆ ಸಹಾಯಕ. ಕೇಂದ್ರ ಸರ್ಕಾರದ `ಆತ್ಮ ನಿರ್ಭರ’ ಅಭಿಯಾನದ ಅಂಗವಾಗಿ ಅವರು ಈ ಸಂಶೋಧನೆ ನಡೆಸಿದ್ದಾರೆ.