ಮಣ್ಣಿನಡಿ ಕಾಣಿಸಿದ ಟೀ ಅಂಗಡಿ ಅವಶೇಷ
ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಭಾಗಶಃ ತೆಗಿಯಲಾಗಿದ್ದು, ಅಲ್ಲಿನ ಮಣ್ಣಿನ ರಾಡಿಯಲ್ಲಿ ಲಕ್ಷಣ ನಾಯ್ಕ ಅವರು ನಡೆಸುತ್ತಿದ್ದ ಚಹಾ ಅಂಗಡಿಯ ಅವಶೇಷಗಳು ಪತ್ತೆಯಾಗಿದೆ. ಚಹಾ ಅಂಗಡಿಯಲ್ಲಿ ಬಳಸುತ್ತಿದ್ದ ಬಕೆಟ್ ಹಾಗೂ ಕೆಲ ಪಾತ್ರೆಗಳು ಮಣ್ಣಿನ ರಾಡಿಯಲ್ಲಿ ಕಾಣಿಸಿವೆ.…
ಜುಲೈ 27: ಮಳೆ ಮಾಹಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಲೆನಾಡು ಭಾಗದಲ್ಲಿ ಜೋರಾದ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ನಸುಕಿನ ಅವಧಿಯಲ್ಲಿ ರಭಸ ಮಳೆ ಸುರಿದಿದೆ. ಕಳೆದ 24 ಗಂಟೆ ಅವಧಿಯ ಲೆಕ್ಕಾಚಾರದಲ್ಲಿ ಜಿಲ್ಲೆಯಲ್ಲಿ ಸರಾಸರಿ 57.58ರಷ್ಟು ಮಳೆಯಾಗಿದೆ. ಈವರೆಗಿನ…
ಶಿರೂರು ದುರಂತ: ಸಾವಿನಲ್ಲಿಯೂ ಒಂದಾದ ಅಣ್ಣ-ತಂಗಿ
ಅವಂತಿಕಾಳ ಪಾಲಿಗೆ ಅಣ್ಣನೇ ಸರ್ವಸ್ವ. ನಿತ್ಯ ಊಟ ಮಾಡಿಸುವುದರಿಂದ ಹಿಡಿದು ರಾತ್ರಿ ತಟ್ಟಿ ಮಲಗಿಸಲು ಸಹ ಆಕೆಗೆ ಅಣ್ಣ ರೋಷನ್ ಬೇಕಿತ್ತು. ಹೀಗಾಗಿ ಅಣ್ಣ ಕಿಲಾಡಿ ಮಾಡಿದರೂ ಆತನಿಗೆ ಯಾರೂ ಗದರಿಸುವಂತಿರಲಿಲ್ಲ. ಅಣ್ಣನಿಗೆ ಯಾರಾದರೂ ಬೈದರೆ ಅವಂತಿಕಾ ಅಳುತ್ತಿದ್ದಳು. ರೋಷನ್’ಗೆ ಸಹ…
ನಿರಂತರ ವಿದ್ಯುತ್’ಗಾಗಿ ಪ್ರತಿಭಟಿಸೋಣ.. ನೀವು ಬನ್ನಿ!
ಯಲ್ಲಾಪುರ: ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗುಳ್ಳಾಪುರದ ಜನ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಜುಲೈ 30ರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಅನೇಕರು ತಯಾರಿ ನಡೆಸಿದ್ದು, ಜನರ ಸಮಸ್ಯೆ ಆಲಿಸಲು ಅಧಿಕಾರಿಗಲು ಸಹ ಭಾಗವಹಿಸುವ…
ನೊಂದವರ ನೆರವಿಗೆ ನಿಂತ ರಾಮಚಂದ್ರಾಪುರ ಮಠ
ಕುಮಟಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ನೆರವು ನೀಡಿದೆ. ಮಠದ ಪರವಾಗಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು,…
ಕ್ಯಾಮರಾ ಹಿಡಿದು ದುಡ್ಡುಗಳಿಸುವುದು ಹೇಗೆ? ಇಲ್ಲಿ ಹೇಳಿಕೊಡ್ತಾರೆ ನೋಡಿ!
`ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿ’ ವೃತ್ತಿ ನಡೆಸುವ ಉದ್ದೇಶ ಹೊಂದಿದವರಿಗೆ ರುಡ್‌ಸೆಟ್ ಸಂಸ್ಥೆ 30 ದಿನದ ತರಬೇತಿ ನಡೆಸುತ್ತಿದೆ. ಅಗಷ್ಟ 1ರಿಂದ ಈ ತರಬೇತಿ ಶುರುವಾಗಲಿದ್ದು, ಊಟ-ವಸತಿ ಎರಡೂ ಉಚಿತ! ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್’ನ ಸಹಯೋಗದಲ್ಲಿ…
ದೇವಾಲಯದ ಮೇಲೆ ಧುಮುಕುವ ಜಲಪಾತ…
ಜೋಗ ಜಲಪಾತದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಭೀಮೇಶ್ವರ ಎಂಬ ಕ್ಷೇತ್ರವಿದೆ. ವನವಾಸದ ಅವಧಿಯಲ್ಲಿ ಭೀಮ ಕಟ್ಟಿಸಿದ ಕ್ಷೇತ್ರ ಎಂಬ ಪ್ರತಿಥಿಯಿದೆ. ಈ ದೇವಸ್ಥಾನ ಶರಾವತಿ ಕೊಳ್ಳದ ಅಚ್ಚರಿ. ದೇವಸ್ಥಾನದ ಮೇಲೆ ಇಲ್ಲಿ ಜಲಪಾತ ಧುಮುಕುತ್ತದೆ. ಜಲಪಾತ ಹಾಗೂ ದೇವಸ್ಥಾನ ಎರಡೂ ಒಂದೆ…
ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ…
ಪಶ್ಚಿಮಘಟ್ಟದ ದಟ್ಟಕಾಡಿನ ನಡುವೆ ಬರುವ ಊರುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಹ ಒಂದು. ಈ ಕಳಸದ ಬಳಿ ಸೂರ್ಮನೆ ಎಂಬ ಸುಂದರ ಜಲಪಾತವಿದ್ದು, ಪ್ರವಾಸಿಗರ ಪಾಲಿಗೆ ಅದು ಖುಷಿ ಕೊಡುವ ತಾಣ. ಸೂರ್ಮನೆ ಸೊಬಗು ಇಲ್ಲಿ ನೋಡಿ..
ಹಳಿಯಾಳಕ್ಕೂ ಮಳೆ ರಜೆ ವಿಸ್ತರಣೆ
ಹಳಿಯಾಳದಲ್ಲಿ ಸಹ ಮಳೆಯಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿರ ಜುಲೈ 27ರಂದು ರಜೆ ಘೋಷಿಸಿದೆ. ಈ ಹಿಂದೆ ಹಳಿಯಾಳ ಹಾಗೂ ಮುಂಡಗೋಡು ಹೊರತುಪಡಿಸಿ ರಜೆ ಘೋಷಿಸಲಾಗಿದ್ದು, ರಾತ್ರಿ 9.30ರ ವೇಳೆಗೆ ಹಳಿಯಾಳದ ಶಾಲಾ ಮಕ್ಕಳಿಗೂ ರಜೆ ನೀಡಲಾಗಿದೆ. ಅಲ್ಲಿ ಸಹ ಅಂಗನವಾಡಿಯಿoದ…
40 ವರ್ಷದ ನಂತರ ಫೋನ್ ಮಾಡಿದ ಪತ್ನಿ: ಮಾತನಾಡದೇ ಜೀವಬಿಟ್ಟ ಅಲೆಮಾರಿ!
ಜೊಯಿಡಾ: 40 ವರ್ಷಗಳಿಂದ ಪತ್ನಿ ಬಿಟ್ಟು ಬದುಕಿದ ರಾಮನಗರದ ಲುಯಿಸ್ ಫರ್ನಾಂಡಿಸ್ (75) ಎಂಬಾತ ಕೊನೆಘಳಿಗೆಯಲ್ಲಿ ಪತ್ನಿ ಫೋನ್ ಮಾಡಿದರೂ ಸಿಟ್ಟಿನಿಂದ ಮಾತನಾಡದೇ ಜುಲೈ 25ರ ಸಂಜೆ ಗಾಳಿ, ಮಳೆ, ಚಳಿಗೆ ನಡುಗಿ ಸಾವನಪ್ಪಿದ್ದಾನೆ. ಕೂಲಿ ಕೆಲಸದ ಜೊತೆ ಜೊತೆ ಪ್ಲಾಸ್ಟಿಕ್…









