ಮಳೆಗಾಲದ ಮನೆ ಹಾನಿ: ಕಾಸು ಕೊಡಲು ಕಂಜೂಸ್ ಈ ಸರ್ಕಾರ!
ವರ್ಷದಿಂದ ವರ್ಷಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿದೆ. ಈ ಹಿಂದೆ ಮಳೆಯಿಂದ ಪೂರ್ತಿ ಮನೆಗೆ ಹಾನಿ ಆಗಿದ್ದರೆ ಸರ್ಕಾರ 5 ಲಕ್ಷ ರೂ ಪರಿಹಾರ ವಿತರಿಸುತ್ತಿತ್ತು. ಆದರೆ, ಈ…
ಒಂದೇ ದಿನ 22 ಮನೆಗಳಿಗೆ `ಮಳೆ ಹಾನಿ’
ಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿನ 22 ಮನೆಗಳಿಗೆ ಮಳೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 18 ಮನೆಗಳ ಬಹುತೇಕ ಭಾಗ ಕಳಚಿ ಬಿದ್ದಿದೆ. ಕಾರವಾರದಲ್ಲಿ ಒಬ್ಬರು ಹಾಗೂ ಅಂಕೋಲಾದಲ್ಲಿ 7 ಜನ ಮಳೆ ಕಾರಣದಿಂದ ಸಾವನಪ್ಪಿದ್ದಾರೆ.…
ಕಾಳಜಿ ಕೇಂದ್ರದಲ್ಲಿ ಪಾಯಸದ ಊಟ: ಸಂತ್ರಸ್ತರ ಜೊತೆ ಸಡಗರ ಹಂಚಿಕೊoಡ ಯುವಕ
ಹೊನ್ನಾವರ: ಗುಂಡಿಬೈಲ್ ಶಾಲೆಯಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ಜೈರಾಮ್ ನಾಯ್ಕ ಎಂಬಾತರು ಪಾಯಸದ ಊಟ ಹಾಕಿಸಿದ್ದಾರೆ. ಪಾಯಸದ ಊಟ ಹಾಕಿಸಿರುವ ಜೈರಾಮ್ ನಾಯ್ಕ ಸಹ ನೆರೆ ಸಂತ್ರಸ್ತರು. ತಮ್ಮ ಹುಟ್ಟುಹಬ್ಬದ ಹಿನ್ನಲೆ ಅವರು ಕಾಳಜಿ ಕೇಂದ್ರದಲ್ಲಿರುವವರಿಗೆ ಸಿಹಿ ತಿನಿಸಿದರು. ಆ…
ಈ ಊರಲ್ಲಿ ಹೊಂಡ ಹುಡುಕುವುದು ಸುಲಭ: ರಸ್ತೆ ಹುಡುಕುವುದೇ ಕಷ್ಟ!
ಜೊಯಿಡಾ: ಗಣೇಶಗುಡಿ – ದಾಂಡೇಲಿ ತೆರಳುವಾಗ ರಸ್ತೆಗಿಂತಲೂ ಹೆಚ್ಚಿನ ಭಾಗ ಹೊಂಡಗಳು ಕಾಣುತ್ತಿವೆ. ಇಲ್ಲಿ ಹೊಂಡ ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಸಾಹಸ ಮಾಡುತ್ತಿದ್ದಾರೆ. ಗಣೇಶಗುಡಿ ಗೌಳಿವಾಡಾ ಹತ್ತಿರ ಹೆಚ್ಚಿನ ಹೊಂಡಗಳಿವೆ. ಯಾವ ಹೊಂಡ ದೊಡ್ಡು? ಯಾವ ಹೊಂಡ ಚಿಕ್ಕದು ಎಂದು…
`ಉತ್ತರ ಕನ್ನಡಿಗರಿಗೆ ಬೇಕು ಉದ್ಯೋಗ’
ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾ ನಲೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಠಿಸುವಂತೆ ಕರ್ನಾಟಕ ಕೌಶಲ್ಯ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಇ.ವಿ.ರಮಣರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ನಡೆಸಿದ…
ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ: ನೌಕಾನೆಲೆಗೆ ಸಂಸದ ಕಾಗೇರಿ ತಾಕೀತು
ಕಾರವಾರ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, `ನೌಕಾನೆಲೆಯ ಅಧಿಕಾರಿಗಳು ಜಿಲ್ಲಾಡಳಿತದ ಈ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ತಾಕೀತು ಮಾಡಿದರು. `ಸೀಬರ್ಡ್ ನೌಕಾನೆಲೆ ಬಳಿಯ ಹೆದ್ದಾರಿಯಲ್ಲಿ ಕಂಡು ಬರುವ ಕೃತಕ ನೆರೆಯನ್ನು…
ಅಂಗವೈಕಲ್ಯದ ನಡುವೆಯೂ ಸಾಧನೆ: ಇಂಡಿಯಾ ರೆಕಾಡ್ಸ್’ನಲ್ಲಿ ಯಲ್ಲಾಪುರದ ಪೋರ
ಯಲ್ಲಾಪುರ: ಎಂಡೋಸಲ್ಫಾನ್’ನಿoದ ಬಳಲುತ್ತಿರುವ 14 ವರ್ಷದ ಅಬ್ದುಲ್ ಮಥೀನ್ ಶೇಖ್ ಸಲೀಮ್ 72 ಇಂಗ್ಲಿಷ್ ಪದಗಳನ್ನು ಹಿಂದೆ-ಮುoದೆ ಉಚ್ಚರಿಸುವ ಮೂಲಕ `ಇಂಡಿಯಾ ಬುಕ್ ಆಫ್ ರೆಕಾಡ್ಸ್’ನಲ್ಲಿ ಹೆಸರು ದಾಖಲಿಸಿದ್ದಾನೆ. ಶಾರದಾ ಗಲ್ಲಿಯ ಈತ ಪ್ರಸ್ತುತ ಬೆಂಗಳೂರಿನ ಪ್ರೆಸಿಡೆಂಸಿ ಶಾಲೆಯಲ್ಲಿ ಓದುತ್ತಿದ್ದು `ಗಿನ್ನೆಸ್…
ಗುಡ್ಡ ಕುಸಿತ ಸ್ಥಳಕ್ಕೆ ಸಂಸದರ ಭೇಟಿ
ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಮಾಂದ್ರಾಳಿ ಬಳಿ ಗುಡ್ಡ ಕುಸಿತವಾಗಿದ್ದು, ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಗೆ ತೆರಳಿ ಮಣ್ಣು ತೆರವು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಸ್ಥಳೀಯರು ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕರಾವಳಿ…
ಜುಲೈ 16: ಜಲಾಶಯಗಳ ನೀರಿನ ಮಟ್ಟ ಹಾಗೂ ಮಳೆ ವಿವರ
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಜಲಾಶಯಗಳು ಭರ್ತಿಯಾಗಿದೆ. ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ. ಜೂಮ್ ಮಾಡಿ ನೋಡಿ.. ಕಳೆದ 24 ತಾಸಿನ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ಮಳೆ ವರದಿ ಇಲ್ಲಿದೆ. ಜೂಮ್ ಮಾಡಿ…
ಮಳೆ ಅವಾಂತರ: ದೇವರ ಮೊರೆ ಹೋದ ಸಂಸದ!
`ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಶ್ರಮಿಸುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿದರೂ ಅಲ್ಲಲ್ಲಿ ಕೆಲ ಅವಾಂತರ ನಡೆದಿದ್ದು, ಯಾರಿಗೂ ತೊಂದರೆ ಆಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಂಗಳವಾರ…







