ಗೋಕರ್ಣ: ಭಟ್ಟರ ಮನೆಹಾಳು ಮಾಡಿದ ಮಟ್ಕಾ ಚೀಟಿ!
ಗೋಕರ್ಣ ಬಳಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವಾಸುದೇವ ಭಟ್ಟರ ಮೇಲೆ ಸಿಪಿಐ ಶ್ರೀಧರ್ ಎಸ್ ಆರ್ ದಾಳಿ ಮಾಡಿದ್ದಾರೆ. ವಾಸುದೇವ ಭಟ್ಟರು ಮಟ್ಕಾ ದಂಧೆಯಿoದ ಸಂಗ್ರಹಿಸಿದ್ದ 720ರೂ ಹಣವನ್ನು ಅವರು ಮುಟ್ಟುಗೋಲು ಹಾಕಿದ್ದಾರೆ. ಗೋಕರ್ಣ ಬಳಿಯ ಮಾದನಚಿಟ್ಟಿಯ ಹನೆಹಳ್ಳಿ ಅಂಗಡಿ…
ಅಂಕೋಲಾ: ಜೂಜಾಡಿ ಸಿಕ್ಕಿಬಿದ್ದ ಸರ್ಕಾರಿ ನೌಕರ!
ಅಂಕೋಲಾದ ಹೊಸಗದ್ದೆಯ KSRTC ನೌಕರ ರಾಜೇಶ ಗೌಡ ಜೂಜಾಟದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಪೊಲೀಸರು ರಾಜೇಶ ಗೌಡ ಜೊತೆ ಇನ್ನೂ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಜೂನ್ 7ರಂದು ರಾಜೇಶ ಗೌಡ ಅವರು ಹುಲಿದೇವರವಾಡದ ಬೆಳೆಸೆ ಗ್ರಾಮದ…
ಮರಕ್ಕೆ ಮೈ ಉಜ್ಜಿದ ಆನೆಗೆ ವಿದ್ಯುತ್ ಸ್ಪರ್ಶ: ಮರಣ!
ದಾಂಡೇಲಿಯ ಕುಳಗಿ ಅಂಬಿಕಾನಗರ ರಸ್ತೆ ಅಂಚಿನಲ್ಲಿ ಆನೆಯೊಂದು ಸಾವನಪ್ಪಿದೆ. ಈ ವಿಷಯ ಅರಿತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವನ್ಯಜೀವಿ ಪ್ರದೇಶ ವ್ಯಾಪ್ತಿಯಲ್ಲಿ ಈ ಆನೆ ಸಾವನಪ್ಪಿದೆ. ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಆನೆ ಮಲಗಿರುವಂತೆ…
ಭಟ್ಕಳ: ಕಾರ್ಪರೆಂಟರ್ ಮನೆಯಲ್ಲಿ ಲಕ್ಷ ಲಕ್ಷ ದರೋಡೆ
ಭಟ್ಕಳದಲ್ಲಿ ಕಾರ್ಪರೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಜಗದೀಶ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮಣಕುಳಿಯ ತಲಾಂದ ರಸ್ತೆಯಲ್ಲಿ ಜಗದೀಶ ನಾಯ್ಕ ಅವರು ವಾಸವಾಗಿದ್ದರು. ಜೂನ್ 14ರಿಂದ ಜಗದೀಶ್ ಅವರು ಮನೆಯಲ್ಲಿರಲಿಲ್ಲ. ಜೂನ್ 16ಕ್ಕೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಯಿತು.…
ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!
ಗೋವಾದಿಂದ ಅಗ್ಗದ ಸರಾಯಿ ತಂದು ಮಾರಾಟ ಮಾಡುವ ಮೂಲಕ ಕಾರವಾರದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಪೊಲೀಸರಿಗೆ ಒಪ್ಪಿಸಿ ತಾವು ಪರಾರಿಯಾಗಿದ್ದಾರೆ! ಕಾರವಾರದ ಕಡವಾಡ…
ಜನಸಾಮಾನ್ಯರ ದೂರು: ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದಿರುವುದೇ ರೋಗ!
`ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಹಾಗೂ ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಅವುಗಳ ನೇಮಕಾತಿ ನಡೆಯಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್…
ವೈದ್ಯ ದಂಪತಿ ವರ್ಗಾವಣೆಗೆ ವಿರೋಧ: ಬಿಜೆಪಿ ಪ್ರತಿಭಟನೆಗೆ ಜನ ಬೆಂಬಲ
ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಕೆ ವಿ ದಂಪತಿ ವರ್ಗಾವಣೆ ವಿರೋಧಿಸಿ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಅನೇಕರು ಬೆಂಬಲವ್ಯಕ್ತಪಡಿಸಿದ್ದು, ಗ್ರಾಮೀಣ ಭಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿ…
ಗೋವಾದಲ್ಲಿ ಕನ್ನಡ ಕಲರವ: ಭರತನಾಟ್ಯ ಪ್ರದರ್ಶಿಸಿದ ಕಾರವಾರ ಪ್ರತಿಭೆ
60 ವಸಂತ ಪೂರೈಸಿದ ಗೋವಾದ ಕನ್ನಡ ಸಂಘ ಮಡಗಾಂವದ ವೀರಶೈವ ಲಿಂಗಾಯತ ಮಠ ಸಭಾಂಗಣದಲ್ಲಿ ಅದ್ಧುರಿ ಕಾರ್ಯಕ್ರಮ ಆಯೋಜಿಸಿದ್ದು, ಕಾರವಾರದ ಪ್ರತಿಭೆ ಅರುಣಾ ಬಿಷ್ಟಣ್ಣನವರ ಪ್ರದರ್ಶಿಸಿದ ಭರತನಾಟ್ಯಕ್ಕೆ ಪ್ರೇಕ್ಷಕರು ತಲೆತೂಗಿದರು. ಮಕ್ಕಳಿಗಾಗಿ ನಡೆದ ರಸಪ್ರಶ್ನೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು…
ಅತಿ ಆಸೆ ಗತಿ ಗೇಡು: ಆ ಉದ್ಯೋಗಿಗೆ ಕಾಸು ಕಳೆದ ಮೇಲೆ ಬುದ್ದಿ ಬಂತು!
ಕಾರವಾರ ಅಶ್ವಿನ್ ಗುಡಿನೋ ಅವರು ಅಪರಿಚಿತ ಕಂಪನಿಯಲ್ಲಿ ಹಣ ಹೂಡಿ 11.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಮೋಸ ಹೋದ ಬಗ್ಗೆ ಅವರು ಇದೀಗ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರವಾರದ ನಂದನಗದ್ದಾ ಪಾದ್ರಿಭಾಗದಲ್ಲಿ ಅಶ್ವಿನ್ ಗುಡಿನೋ ಅವರು ವಾಸವಾಗಿದ್ದರು.…
ಬೈಕಿನಿಂದ ಬಿದ್ದವ ಗುರಾಯಿಸಿದವನ ವಿರುದ್ಧ ದೂರು ನೀಡಿದ!
ಸಿದ್ದಾಪುರದಲ್ಲಿ ಗ್ಯಾಸ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ತನ್ವೀರ ಶೇಖ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಡಕಾಯಿತರು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಬೈಕಿನಿಂದ ಬಿದ್ದಿದ್ದಾರೆ. ಸಿದ್ದಾಪುರದ ಹಳದಕಟ್ಟಾದಲ್ಲಿ ತನ್ವೀರ ಶೇಖ್ ಅವರು ವಾಸವಾಗಿದ್ದಾರೆ. ಗ್ಯಾಸ್…
















