ಈ ಸರ್ಕಾರಿ ಶಾಲೆಗೆ ಶಿಕ್ಷಕರೇ ಇಲ್ಲ!
ಜೊಯಿಡಾದ ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರೇ ಇಲ್ಲ. ಇರುವ ಒಬ್ಬ ಅತಿಥಿ ಶಿಕ್ಷಕರೇ 1ರಿಂದ 7ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೂ ಪಾಠ ಮಾಡುತ್ತಾರೆ! ಪ್ರಸ್ತುತ 25 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಕಲಿಸುವ ಜೊತೆ ವಿವಿಧ ಗಣತಿ, ಮನೆ…
ಸೇನಾ ನೇಮಕಾತಿ: ತರಬೇತಿ ನೀಡುವವರಿಗಾಗಿ ಹುಡುಕಾಟ
ಕಾರವಾರದ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆ ಕುರಿತು ಲಿಖಿತ ಪರೀಕ್ಷೆಗೆ ತರಬೇತಿ ನೀಡಲು ತರಬೇತಿದಾರರ ಆಯ್ಕೆಗಾಗಿ ಅರ್ಹ ತರಬೇತಿ ಸಂಸ್ಥೆಗಳಿoದ ಅರ್ಜಿ ಆಹ್ವಾನಿಸಲಾಗಿದೆ. ಸೇನಾ ಆಯ್ಕೆ ಪೂರ್ವ…
ವಿಶ್ವಶಾಂತಿಗಾಗಿ ಯಕ್ಷನೃತ್ಯ: ಶಿರಸಿಯ `ತುಳಸಿ’ದಳಕ್ಕೆ ಅಂತರಾಷ್ಟ್ರೀಯ ಮನ್ನಣೆ
ತನ್ನ ಮೂರನೇ ವಯಸ್ಸಿನಲ್ಲಿಯೇ ಯಕ್ಷನೃತ್ಯದ ಮೂಲಕ ಪ್ರಸಿದ್ಧಿ ಪಡೆದಿದ್ದ ಶಿರಸಿಯ ತುಳಸಿ ಹೆಗಡೆ ಅವರು ಇದೀಗ ವಿಶ್ವ ದಾಖಲೆಯ ಪಟ್ಟಿಯಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ. ಪ್ರಸ್ತುತ 10ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ಅವರು ಕಳೆದ ಐದುವರೆ ವರ್ಷಗಳಿಂದ `ವಿಶ್ವಶಾಂತಿ’ಗಾಗಿ ಯಕ್ಷನೃತ್ಯ…
ಮತ್ತೆ ಗದಿಗೆದರಿದ ಹುಬ್ಬಳ್ಳಿ-ಅಂಕೋಲಾ ರೈಲು ಪ್ರಸ್ತಾಪ
ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸ್ಸು ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಯೋಜನೆ ಈ ಬಾರಿಯಾದರೂ ನನಸಾಗಲಿ ಎಂದು ಜನ ಆಶಿಸಿದ್ದಾರೆ. ಈ ಬಾರಿ ರೈಲ್ವೆ ಸಚಿವರಾಗಿ ರಾಜ್ಯದ ಸೋಮಣ್ಣ ಆಯ್ಕೆಯಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕ…
ಶಿರಸಿಯ ಶೃತಿ ಇದೀಗ ಸೌಂದರ್ಯ ದೇವತೆ!
ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದ ಶಿರಸಿಯ ಡಾ ಶೃತಿ ಹೆಗಡೆ ಇದೀಗ `ವಿಶ್ವಸುಂದರಿ’ಯಾಗಿ ಹೊರ ಹೊಮ್ಮಿದ್ದು, ಅಮೇರಿಕಾ ಜೊತೆ ಇಡೀ ವಿಶ್ವದ ಜನ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಡಾ ಶೃತಿ ಹೆಗಡೆ ಶಿರಸಿಯ ಮುಂಡಿಗೆಸರದ ಅಜ್ಜೋರಮನೆಯವರು. ಕೃಷ್ಣ…
ತಂದೆ ನೆನಪನ್ನು ಹಸಿರಾಗಿಸಿದ ಸಂಸದ
ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ತಂದೆಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡಿದ್ದಾರೆ. ಶಿರಸಿಯ ಕಾಗೇರಿಯಲ್ಲಿನ ತಮ್ಮ ಮನೆ ಹಿಂದೆ ಅವರು ಔಷಧಿಯ ಗಿಡ ನಾಟಿ…
ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!
ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ. ರಾಘವೇoದ್ರ ನಾಯ್ಕ ನೌಕಾನೆಲೆಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಅರಿತ ಪ್ರಸಾದ ಪೆಡ್ನೇಕರ್, `ತನಗೆ ಅಲ್ಲಿ…
ಪ್ರತಿ ಗ್ರಾಮದಲ್ಲಿಯೂ ಕೂಸಿನ ಮನೆ ನಿರ್ಮಾಣ
ಕಾರವಾರ: `ನಗರ ಪ್ರದೇಶಗಳಲ್ಲಿ ಇರುವಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಶು ಪಾಲನಾ ಕೇಂದ್ರಗಳ ಅವಶ್ಯಕತೆಯನ್ನು ಅರಿತು ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಅನುಷ್ಠಾನ ಮಾಡಿದ್ದು, ಅಧಿಕಾರಿಗಳೆಲ್ಲರೂ ಕೂಸಿನ ಮನೆ ಯೋಜನೆ ಯಶಸ್ಸಿಗೆ ಕೈಜೋಡಿಸಬೇಕು’ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ…
ಯುದ್ಧ ವಿಮಾನ ಸಂಗ್ರಹಾಲಯ: ಬೆಳಗ್ಗೆ ಉದ್ಘಾಟನೆ – ಸಂಜೆ ಸಮಾರೋಪ!
ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮೈಲುಗಲ್ಲು ಎಂದು ಭಾವಿಸಲಾಗಿದ್ದ `ಟುಪಲೇವ್ 142-ಎಂ’ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾದ ಕೆಲವೇ ಕ್ಷಣದಲ್ಲಿ ಮುಕ್ತ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಕಡಲತೀರದಲ್ಲಿ ಯುದ್ಧನೌಕೆ ಹಾಗೂ ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣ…
ಕೋಳಿ ಸಾಕಣೆಗೆ ಕನ್ನಡ ಕಡ್ಡಾಯ!
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ಕೆನರಾ ಬ್ಯಾಂಕಿನವರು `ಕೋಳಿ ಸಾಕುವ ತರಬೇತಿ’ ನೀಡಲು ಸಿದ್ಧತೆ ನಡೆಸಿದ್ದಾರೆ. ಅವರು ವಿಧಿಸಿದ ನಿಯಮಗಳಲ್ಲಿ `ಕನ್ನಡ ಕಡ್ಡಾಯ’ ಎಂದಿದೆ. ಅಂದರೆ ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಮಾತ್ರ ಇಲ್ಲಿ ತರಬೇತಿ ನೀಡಲಾಗುತ್ತದೆ. 10…









