ಪತಿ ನೆನಪಿನಲ್ಲಿ ಪ್ರಾಣ ತ್ಯಾಗ ಮಾಡಿದ ಪತ್ನಿ!
ಅನಾರೋಗ್ಯಕ್ಕೆ ಒಳಗಾಗಿ ಸಾವನಪ್ಪಿದ ಪತಿಯ ನೆನಪಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾದ ಹಳೆ ಮೀನು ಮಾರುಕಟ್ಟೆ ಬಳಿ ಪ್ರದೀಪ ಮುರುಡೇಶ್ವರ ಹಾಗೂ ಜ್ಯೋತಿ ಮುರುಡೇಶ್ವರ ವಾಸವಾಗಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರದೀಪ ಮುರುಡೇಶ್ವರ ಅವರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.…
ನೌಕಾನೆಲೆಗೆ ಬಿಗಿ ಭದ್ರತೆ: ಹೆದ್ದಾರಿ ಪ್ರಯಾಣಿಕರಿಗೆ ಅಭದ್ರತೆ!
ನೌಕಾನೆಲೆ ಭದ್ರತೆಗಾಗಿ ಕಾರವಾರದಲ್ಲಿ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಜನರ ಜೀವದ ಜೊತೆ ಆಟವಾಡುತ್ತಿದೆ. ಕಪೌಂಡ್ ನಿರ್ಮಾಣ ನೆಪದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಹಿಡಿದ ಕಂಬವನ್ನು ಜೆಸಿಬಿ ಯಂತ್ರಗಳ ಮೂಲಕ ಗುತ್ತಿಗೆ ಕಂಪನಿ ನೆಲಕ್ಕುರುಳಿಸಿದೆ.…
ಭಿಕ್ಷಾಟನೆಗೂ ಬಂತು ಫೋನ್ ಫೇ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಇ-ಹುಂಡಿ ಸೇವೆ ಬಂದು ಹಲವು ವರ್ಷ ಕಳೆದಿದೆ. ಆದರೆ, ದೇವಾಲಯಗಳ ಮುಂದೆ ಕೂರುವ ಭಿಕ್ಷುಕರಿಗೆ ಆನ್‌ಲೈನ್ ಹಣ ಪಾವತಿ ಜಿಲ್ಲೆಯಲ್ಲಿರಲಿಲ್ಲ. ಇದೀಗ, ಗೋಕರ್ಣದಲ್ಲಿ ಆನ್‌ಲೈನ್ ಮೂಲಕ ಪಾವತಿಸಬಹುದಾದ `ಭಿಕ್ಷು ಕರ’ ಜಾರಿಗೆ ಬಂದಿದೆ! ಶಿವರಾತ್ರಿ…
ಭಿಕ್ಷುಕಿ ಬದುಕಿಗೆ ಆಧಾರ್ ಭಾಗ್ಯ!
ನಿರಂತರ ಹೋರಾಟದ ಪರಿಣಾಮವಾಗಿ ಭಿಕ್ಷೆ ಬೇಡಿ ಜೀವನ ನಡೆಸುವ ರೇಣುಕಾ ಗೌಡ ಅವರಿಗೆ ಆಧಾರ್ ಕಾರ್ಡ ಸಿಕ್ಕಿದೆ. ಕುಮಟಾದ ಮಾಸೂರು ಕ್ರಾಸಿನ ಜನತಾ ಪ್ಲೋಟಿನ ಬಳಿ ರೇಣುಕಾ ಗೌಡ ವಾಸವಾಗಿದ್ದಾರೆ. ಭಿಕ್ಷೆ ಬೇಡಿ ಜೀವನ ನಡೆಸುವ ಅವರ ಬಳಿ ಆಧಾರ್ ಕಾರ್ಡ…
ದೃಢೀಕರಣ ನೀಡಲು ಹಿಂದೇಟು: ಪಿಡಿಓ ವಿರುದ್ಧ ಮತ್ತೊಂದು ದೂರು!
ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಮೂಜಿಬ್ ಉಸ್ಮಾನ್ ಷರೀಫ್ ಎಂಬಾತರು ಲೋಕಾಯುಕ್ತ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಯಾವುದೇ ಹಿಂಬರಹ ನೀಡದಿರುವುದೇ ದೂರಿನ ಸಾರಾಂಶ! ಜನತಾ ಪ್ಲೋಟಿನ ಮಾಸೂರು ಕ್ರಾಸಿನಲ್ಲಿ ಮೂಜಿಬ್…
ಏಳು ಸಾವಿರ ಹಣ ಬಿಡಿಸಲು 6 ಸಾವಿರ ರೂ ಲಂಚ!
ನ್ಯಾಯಾಲಯದ ವಶದಲ್ಲಿದ್ದ 7 ಸಾವಿರ ರೂ ಹಣ ಬಿಡಿಸಿಕೊಡಲು ಸರ್ಕಾರಿ ವಕೀಲರೊಬ್ಬರು 6 ಸಾವಿರ ರೂ ಲಂಚ ಬೇಡಿದ್ದಾರೆ. ಇದನ್ನು ಸಹಿಸದ ದಾಸನಕೊಪ್ಪದ ಪವನಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಹಣ ಸ್ವೀಕರಿಸುವ ವೇಳೆ ಶಿರಸಿ ಜೆಎಂಎಫ್‌ಸಿ ನ್ಯಾಯಾಲಯದ ಎಪಿಪಿ ಪ್ರಕಾಶ ಲಮಾಣಿ…
ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!
ಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ ದೇವಸ್ಥಾನದ ಜಾತ್ರೆ ಗದ್ದುಗೆಯ ಬಳಿ ಏಳು ಜನ ಅಂದರ್ ಬಾಹರ್ ಆಡುತ್ತಿದ್ದರು. ಹಸಿರು…
ಬನವಾಸಿ: ದೇವಿ ಜಾತ್ರೆಗೆ ಸಕಲ ಸಿದ್ಧತೆ
ಶಿರಸಿ ತಾಲೂಕಿನ ಬನವಾಸಿ ಸೀಮಾ ದೇವತೆಯಾದ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾ 4ರಿಂದ 12ರವರೆಗೆ ನಡೆಯಲಿದೆ. ಒಂದೇ ಮಂದಿರದಲ್ಲಿನ ಒಂದೇ ಪೀಠದಲ್ಲಿ ಮಾತೆ ಹಕ್ಕಲ ಮಾರಿಕಾಂಬೆ, ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ಹಿರೇಕೆರೂರಿನ ಶ್ರೀ ದುರ್ಗಾದೇವಿಯರು ಆಸೀನರಾಗಿರುವುದು ಈ ದೇಗುಲದ…
ಕಾರ್ಮಿಕರಿದ್ದ ವಾಹನ ಪಲ್ಟಿ: ಒಂದು ಸಾವು-ಹಲವರಿಗೆ ನೋವು!
ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ಪಿಕಪ್ ಜೊಯಿಡಾದ ಕುಂಬಾರವಾಡದಲ್ಲಿ ಪಲ್ಟಿಯಾಗಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ 15ಕ್ಕೂ ಅಧಿಕ ಕಾರ್ಮಿಕರನ್ನು ಬುಲೆರೋ ಪಿಕಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಕುಂಬಾರವಾಡದ ಡೊಣಪ ಬಳಿ ಆ ವಾಹನ ಚಾಲಕನ…
ಕಡಲ ರಾಜನಿಗೆ ಆಕರ್ಷಕ ಆರತಿಯ ಸಿಂಗಾರ!
ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ ನೆರೆದಿದ್ದವರ ಗಮನಸೆಳೆಯಿತು. ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವದ ಅಂಗವಗಿ ಮಹಾಶಿವರಾತ್ರಿ ದಿನ ಸಾಗರ…









