ಕೆಲಸದಾಕೆಗೆ ಗಂಡು ಮಗು: ಮನೆ ಮಾಲಕನಿಗೆ 10 ವರ್ಷ ಜೈಲು!
ಕುಮಟಾ: ಕೆಲಸದಾಕೆಯನ್ನು ಪುಸಲಾಯಿಸಿ ಆಕೆಗೆ ಗಂಡು ಮಗುವನ್ನು ದಯಪಾಲಿಸಿದ ಹಳಕಾರಿನ ಮಹೇಶ ಕಿಣಿಗೆ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಕುಮಟಾ ಹಳಕಾರಿನ ಮಹೇಶ ಮನೋಹರ ಕಿಣಿ ಅಲ್ಪ ಪ್ರಮಾಣದ ಬುದ್ದಿಮಾಂದ್ಯರಾಗಿರುವ ಶಮತಿ ಹರಿಕಂತ್ರ (ಹೆಸರು ಬದಲಿಸಿದೆ) ಎಂಬಾತರನ್ನು…
ಆನ್‌ಲೈನ್ ಆಮೀಷ: ಮೊದಲು ಮಾಹಿತಿ.. ನಂತರ ಮೋಸ!
ಶಿರಸಿ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ದುಡ್ಡು ಸಂಪಾದನೆ ಆಮೀಷಕ್ಕೆ ಒಳಗಾದ ಮದರಸಾ ಶಿಕ್ಷಕರೊಬ್ಬರು ಕೂಡಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ. ಬನವಾಸಿ ಹಂಚಿನಕೇರೆ ಬಳಿಯ ವಸೀ ಅಹ್ಮದ್ ಮದರಸಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ತಾವು ದುಡಿದ ಹಣದಲ್ಲಿ ಅವರು 14 ಲಕ್ಷ ರೂಪಾಯಿ…
ನಿಮ್ಮೊಂದಿಗೆ ನಾವಿದ್ದೇವೆ: ನಿರಾಶ್ರಿತ ಮೀನುಗಾರರಿಗೆ ಉಳ್ವೇಕರ್ ಅಭಯ!
ಕಾರವಾರ: ಚಿತ್ತಾಕುಲಾ ಗ್ರಾಮದ ಸೀಬರ್ಡ ನಿರಾಶ್ರಿತರ ಕಾಲೋನಿಗೆ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಧ್ವನಿ ಎತ್ತಿದ್ದಾರೆ. ಅಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಬುಧವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರೀಯಾ ಅವರೊಂದಿಗೆ ಬುಧವಾರ ಚರ್ಚೆ ನಡೆಸಿದರು. 1999ರಲ್ಲಿ…
ಊಟ ಮಾಡಿ ಕಾಸು ಕೊಡಲು ತಕರಾರು: 20 ರೂಪಾಯಿಗಾಗಿ ನಡೆದ ಹೊಡೆದಾಟ!
ಕುಮಟಾ: ಅಶೋಕ ಹೊಟೇಲಿನಲ್ಲಿ ಹೊಟ್ಟೆ ತುಂಬ ಊಟ ಮಾಡಿದ ಮೂವರು ಹೆಚ್ಚುವರಿಯಾಗಿ ಅನ್ನ ಪಡೆದಿದ್ದು, ಅದಕ್ಕೆ 20 ರೂಪಾಯಿ ಪಾವತಿಸಲು ತಕರಾರು ಮಾಡಿದ್ದಾರೆ. ಈ ವೇಳೆ `20 ರೂಪಾಯಿಗಾಗಿ ಯಾಕೆ ಜಗಳ ಮಾಡುತ್ತೀರಿ?’ ಎಂದು ಪ್ರಶ್ನಿಸಿದ ಗ್ರಾಹಕರಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ…
ಜಾತ್ರೆಗೆ ಬಂದವರಿಗೆ ಬಡಿದ ಕಾರು: ಮಹಿಳೆ ಸಾವು
ಸಿದ್ದಾಪುರ: ಮದ್ಯದ ನಶೆಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ಅಯ್ಯಪ್ಪ ಸ್ವಾಮಿ ಜಾತ್ರೆ ನಡೆಯುವ ಪ್ರದೇಶಕ್ಕೆ ಕಾರು ನುಗ್ಗಿಸಿದ್ದು ಅಲ್ಲಿ ನಡೆದ ಅಪಘಾತದಿಂದ ಮಹಿಳೆಯೊಬ್ಬರು ಸಾವನ್ನಪಿದ್ದಾರೆ. ಇದರ ಜೊತೆ 9 ಭಕ್ತರು ಗಾಯಗೊಂಡಿದ್ದಾರೆ. ಮಂಗಳವಾರ ಸಿದ್ದಾಪುರದ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ…
ಭಂಗಿ ಸೇದಿದವರ ಬಂಧನ!
ಶಿರಸಿ: ಕಸ್ತೂರಬಾ ನಗರದ ಇಬ್ಬರು ಗಾಂಜಾ ಸೇದಿ ಸಿಕ್ಕಿ ಬಿದ್ದಿದ್ದಾರೆ. ಆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶೊರಸಿ ಕಸ್ತೂರಬಾ ನಗರದ ನಿಯಾಜ್ ಅಹಮ್ಮದ್ ದಾವುಲ್ ಸಾಬ್ ಕೊಳಗಿಬೀಸ್ ಹಾಗು ಜೀಶಾನೆ ಅಹಮ್ಮದ್ ಫಜಲ್ ಖಾಜಿ ಗಾಂಜಾ ನಶೆಯಲ್ಲಿದ್ದರು.…
ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!
ಶಿರಸಿ: ಕರಾವಳಿ ಕಾವಲು ಪಡೆಯ ರಾಘವೇಂದ್ರ ನಾಯ್ಕ ಅವರ ಹಲ್ಲು ಮುರಿದಿದೆ. ಹೊನ್ನಾವರದ ಮಂಕಿಯ ರಾಘವೇಂದ್ರ ನಾಯ್ಕ ಅವರು ಕರಾವಳಿ ಕಾವಲು ಪಡೆಯ ಸಿಬ್ಬಂದಿ. ಜನವರಿ 13ರ ಸಂಜೆ ಅವರು ಶಿರಸಿ ಐದು ರಸ್ತೆ ಸರ್ಕಲ್ ಬಳಿ ಸ್ಕೂಟಿಯಲ್ಲಿ ಚಲಿಸುತ್ತಿದ್ದರು. ಈ…
ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!
ಅಂಕೋಲಾ: ಮನೆ ಮುಂದೆ ಬೆಂಕಿ ಹಾಕಿ ಚಳಿ ಕಾಸುತ್ತಿದ್ದ ಕೃಷ್ಣ ಸಿದ್ದಿ ಬೆಂಕಿಗೆ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾ ಯಲ್ಲಾಪುರ ಗಡಿಭಾಗದ ಶೇವಕಾರಿನ ಕೃಷ್ಣ ಸಿದ್ದಿ (27) ಜನವರಿ 3ರ ರಾತ್ರಿ ಮನೆ ಮುಂದೆ ಬೆಂಕಿ ಹಾಕಿಕೊಂಡಿದ್ದರು. ರಾತ್ರಿ ಚಳಿ ಕಾಸುತ್ತಿದ್ದ ಅವರಿಗೆ…
ಹುಲಿ ಬಂತು ಹುಲಿ: ಹಗಲಿನಲ್ಲಿಯೇ ಕಾಣಿಸಿಕೊಳ್ಳುವ ಪಟ್ಟೆ ಹುಲಿ!
ಜೊಯಿಡಾ: ಬಾಜಾರಕೊಣಂಗ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಗಂಡು ಹುಲಿ ಓಡಾಟ ಜೋರಾಗಿದೆ. ಜನವಸತಿ ಪ್ರದೇಶಗಳಿಗೂ ಈ ಹುಲಿಯ ಆಗಮನವಾಗುತ್ತಿದೆ. ರಸ್ತೆ ಅಂಚಿನಲ್ಲಿ ಓಡಾಡುವವರು ಸಹ ಹುಲಿಯ ನಡೆ ನೋಡಿ ಹೌಹಾರಿದ್ದಾರೆ. ಹುಲಿ ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಸಕ್ರಿಯವಾಗಿರುವ ಪ್ರಾಣಿ. ರಾತ್ರಿ ವೇಳೆಯಲ್ಲಿಯೇ…
ಮರದಡಿ ನಿಲ್ಲಿಸಿದ ಬೈಕ್ ಮಾಯ!
ಯಲ್ಲಾಪುರ: ಬೈಲಂದುರು ಗ್ರಾಮದ ಮರದ ಅಡಿ ನಿಲ್ಲಿಸಿದ ಬೈಕ್ ಕಾಣೆಯಾಗಿದೆ. ಬೈಕ್ ಕಳೆದುಕೊಂಡ ದೂಳು ಕೊಕ್ಕರೆ ಪೊಲೀಸ್ ದೂರು ನೀಡಿದ್ದಾರೆ. ಮುಂಡಗೋಡ ಬಸನಾಳದ ದೂಳು ಕೊಕ್ಕರೆ ಜನವರಿ 4ರ ಮಧ್ಯಾಹ್ನ ಬೈಲಂದೂರಿಗೆ ಬಂದಿದ್ದರು. ಮಧ್ಯಾಹ್ನ 3 ಗಂಟೆಗೆ ಅಲ್ಲಿನ ಮರದ ಅಡಿ…







