6
ಅಂದರ್-ಬಾಹರ್ | ಸರ್ಕಾರಿ ಕಚೇರಿ ಎದುರೇ ನಡೆಯುತ್ತಿದೆ ಜೂಜಾಟ!

ಕುಮಟಾ: ಕಂದಾಯ ಇಲಾಖೆ ಎದುರು ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋಕರ್ಣ ಮೇಲಿನಕೇರಿಯ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸ್ ನಿರೀಕ್ಷಕ ಶಶಿಧರ್ ಕೆ ಎಚ್ ವಶಕ್ಕೆ ಪಡೆದಿದ್ದಾರೆ. ಡಿ 25ರ ರಾತ್ರಿ ಕುಮಟಾ ಕಡಿಮೆ ಬಳಿಯ…

ಪುಠಾಣಿ ಯಕ್ಷಗಾನ | ರುಕ್ಮಿಣಿ ಸ್ವಯಂವರಕ್ಕೆ ನೀವು ಸಾಕ್ಷಿಯಾಗಿ!

ಅಂಕೋಲಾ: ವಂದಿಗೆಯ ಅಯ್ಯಪ್ಪ ಸ್ವಾಮಿ ಪೂಜೆ ಅಂಗವಾಗಿ ಡಿ 27ರ ಶುಕ್ರವಾರ ರಾತ್ರಿ 9.30ಕ್ಕೆ `ಗಣೇಶ ಯಕ್ಷಗಾನ ಮಂಡಳಿ’ಯ ಬಾಲ ಕಲಾವಿದರಿಂದ ‘ರುಕ್ಮಿಣಿ ಸ್ವಯಂವರ’ ಮತ್ತು ‘ಧರ್ಮಾಂಗದ ದಿಗ್ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಉಳವರೆಯ ಇಂದ್ರ ಗೌಡ ಅವರ ರಂಗಸಜ್ಜಿಕೆಯಲ್ಲಿ…

ನೋಟಿಸಿಗೆ ಬೆದರಿತು ಬಡ ಜೀವ!

ಶಿರಸಿ: ಅರಣ್ಯ ಅಧಿಕಾರಿಗಳ ಕಚೇರಿಯಿಂದ ಬಡ ಅತಿಕ್ರಮಣದಾರರಿಗೆ ಒಂದಿಲ್ಲೊ0ದು ನೋಟಿಸ್ ಬರುತ್ತಿದೆ. `ಮೂರು ತಲೆಮಾರಿನ ದಾಖಲೆ ಒದಗಿಸಿ’ `ದಂಡದ ಪ್ರತಿ ಹಾಜರುಪಡಿಸಿ’ ಎಂಬುದನ್ನು ಸೇರಿ ಹಲವು ಬಗೆಯ ನೋಟಿಸ್’ಗಳು ಜನರ ನಿದ್ದೆಕೆಡಿಸಿವೆ. ಕೆಲ ನೋಟಿಸುಗಳು ಸ್ಥಳೀಯ ಗ್ರಾಮ ಪಂಚಾಯತದ ಮೂಲಕ ಅರಣ್ಯ…

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇನ್ನಷ್ಟು ದಿನ ಗ್ರಹಣ?!

ಶಿರಸಿ: ಹಸಿದ ಹೊಟ್ಟೆಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಯಾಗಿ ಏಳು ವರ್ಷದ ನಂತರ ಶಿರಸಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಊಟ ವಿತರಣೆಗೆ ತರಲಾಗಿದ್ದ ಬಟ್ಟಲು-ತಟ್ಟೆಗೆ ತುಕ್ಕು ಹಿಡಿಯುವ ದಿನ ಸಮೀಪಿಸಿದರೂ ಕ್ಯಾಂಟೀನ್ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ! ಉತ್ತರ ಕನ್ನಡ ಜಿಲ್ಲೆಯ…

ಹೊಟ್ಟೆಯೊಳಗಿನ ದ್ವೇಷಕ್ಕೆ ಹಣ್ಣಿನ ಅಂಗಡಿ ಹೊಗೆ!

ಭಟ್ಕಳ: ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ನಸುಕಿನಲ್ಲಿ ತಗುಲಿದ ಬೆಂಕಿಗೆ ಇಡೀ ಅಂಗಡಿ ಭಸ್ಮವಾಗಿದೆ. ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು ಗ್ರಾಮದ ಕೋಟೆಮನೆಯ ರಾಮಚಂದ್ರ ನಾಯ್ಕ ಅವರು ಇಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಿಸಿಕೊಂಡಿದ್ದರು. ಅಲ್ಲಿ…

ಅಧಿಕ ಬಾರ.. ಅತ್ಯಧಿಕ ಶುಲ್ಕ: ಪ್ರಯಾಣಿಕರಿಗೆ ಇಲ್ಲ ಸುರಕ್ಷತೆ!

ಕುಮಟಾ: ತದಡಿ -ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ನೀರಿನಲ್ಲಿ ಸಂಚರಿಸುವಾಗ ನೀಡಬೇಕಿದ್ದ ಲೈಫ್ ಜಾಕೆಟ್’ನ್ನು ಇಲ್ಲಿ ನೀಡುವುದಿಲ್ಲ. ಕರ್ನಾಟಕ ಸರ್ಕಾರದ ಬಂದರು ಇಲಾಖೆ ಅಧೀನದಲ್ಲಿ ಈ ಬಾರ್ಜ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಇದನ್ನು ಬಂದರು…

ಕೆಳಗಿನ ಗುಡ್ಡ | ಹಾರಿಹೊಯ್ತು ಹಾರಿಸ್ ಪಾಲಿನ ಅಡಿಕೆ!

ಶಿರಸಿ: `ಸಲಾಮತ್ ಆರ್ಕನೆಟ್ ಟ್ರೇಡರ್ಸ’ ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ ಎರಡು ಚೀಲ ಅಡಿಕೆ ಕಳ್ಳರ ಪಾಲಾಗಿದೆ. ಹಾರಿಸ್ ಖಾನ್ ಮಾಲಿಕತ್ವದ ಮಳಿಗೆಯ ಶೆಟರ್ಸ್ ಒಡೆದು ಕಳ್ಳರು ಅಡಿಕೆ ದೋಚಿದ್ದಾರೆ. ಶಿರಸಿ ಕೆಳಗಿನಗುಡ್ಡದ ಹಾರಿಸ್ ಖಾನ್ (26) ಅಡಿಕೆ ವ್ಯಾಪಾರಿ. ಅವರು ಸಲಾಮತ್…

ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!

ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬೈಕ್ ಮೇಲೆ ಹೊರಟ ಅವರು ಮಾವಿನಹೊಳೆ ಹೆದ್ದಾರಿಯನ್ನು…

ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!

ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದ ಸಾಧಕರ ಬರಹ ಪ್ರಕಟಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ `ಕರ್ನಾಟಕ ಕಲಾ ಸನ್ನಿಧಿ’ ಇದೀಗ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಯಾವುದೇ ಪ್ರತಿಫಲ ಬಯಸದೇ ಪ್ರಚಾರದ ಹಂಗಿಲ್ಲದೇ ಸೇವೆ ಸಲ್ಲಿಸುತ್ತಿರುವವರಿಗಾಗಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಕಳೆದ…

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

ಯಲ್ಲಾಪುರ: ನಿತ್ಯ ಬಳಕೆಯಲ್ಲಿದ್ದ ಸ್ಯಾಮಸಂಗ್ ಮೊಬೈಲ್ ಏಕಾಏಕಿ ಸ್ಪೋಟವಾಗಿದೆ. ಸ್ಪೊಟದ ಸದ್ದಿಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರು ಆರು ವರ್ಷದ ಹಿಂದೆ ಸ್ಯಾಮಸಂಗ್ ಕಂಪನಿಯ ಮೊಬೈಲ್ ಖರೀದಿಸಿದ್ದರು. ಈವರೆಗೆ ಮೊಬೈಲಿನಲ್ಲಿ ಯಾವುದೇ ಸಮಸ್ಯೆ…

You cannot copy content of this page