6
ಮಣ್ಣಿನ ಮಡಿಕೆಯೊಳಗೆ ಮಟ್ಕಾ ಚೀಟಿ!

ಸಿದ್ದಾಪುರ: ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಕಿರಣ್ ಫರ್ನಾಂಡಿಸ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ವಾಸಿಸುವ ಕಿರಣ್ ಆಗ್ನೇಲ್ ಫರ್ನಾಂಡಿಸ್ ಅಲ್ಲಿಯೇ ಮಣ್ಣಿನ ಮಡಿಕೆ ಮಾರಾಟ ಮಾಡುತ್ತಾರೆ. ಇದರೊಂದಿಗೆ ಜೂಜಾಡಿಸುವುದು ಅವರ ಉಪಆದಾಯ. ಹೀಗಾಗಿ…

ಊಟಕ್ಕೆ ಹೋಗಿ ಒದೆ ತಿಂದ ನೆಂಟ!

ಕುಮಟಾ: ಸೋದರ ಮಾವನ ಜೊತೆ ಸಂಬoಧಿಕರ ಮನೆಗೆ ಊಟಕ್ಕೆ ಹೋಗಿದ್ದ ಸಜ್ಜಾದ ಯೂಸೂಪ್ ಬೇಗ್ ಎಂಬಾತರಿಗೆ ಐವರು ಸೇರಿ ಥಳಿಸಿದ್ದಾರೆ. ಕುಮಟಾ ಹಳಕಾರಿನ ಸಜ್ಜಾದ ಯೂಸೂಪ್ ಬೇಗ್ ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ನ 11ರಂದು ಅವರು ತಮ್ಮ ಸೋದರ ಮಾವನ ಜೊತೆ…

ಅಪರೂಪ ವ್ಯಕ್ತಿತ್ವದ ವಕೀಲನಿಗೆ ಜನಸಾಮಾನ್ಯ ಕೇಂದ್ರದ ಗೌರವ

ಕುಮಟಾ: ಕಾರವಾರದ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಸಕ್ರಿಯವಾಗಿರುವ ನ್ಯಾಯವಾದಿ ವೆಂಕಟೇಶ್ ಕರಿಯಪ್ಪ ಗೌಡ ಅವರನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ವಕೀಲರ ದಿನಾಚರಣೆ ಅಂಗವಾಗಿ ನ್ಯಾಯವಾದಿಗಳ ಸೇವೆಯನ್ನು ಸ್ಮರಿಸಿ ಈ ಸನ್ಮಾನ ನಡೆಯಿತು. ವೆಂಕಟೇಶ ಗೌಡ ಅವರು…

ಪಿಗ್ಮಿ ಕಲೆಕ್ಟರ್’ಗೆ ಗುದ್ದಿದ ಅಪರಿಚಿತ ಬೈಕು

ಅಂಕೋಲಾ: ಪಿಗ್ಮಿ ಕಲೆಕ್ಟರ್ ದಯಾನಂದ ನಾಯಕ ಅವರ ಸ್ಕೂಟಿಗೆ ಬೈಕು ಗುದ್ದಿದೆ. ಪರಿಣಾಮ ಅವರು ಮೈ-ಕೈ ಗಾಯ ಮಾಡಿಕೊಂಡಿದ್ದಾರೆ. ಅoಕೋಲಾದ ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಬಳಿ ಈ ಅಪಘಾತ ನಡೆದಿದೆ. ಡಿ 5ರ ಸಂಜೆ ದಯಾನಂದ ನಾಯಕ ಅವರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ…

ಈತನ ಮನೆಯೇ ಮದ್ಯ ಆಲಯ!

ಸಿದ್ದಾಪುರ: ಮನೆಗೆ ಬರುವ ಅತಿಥಿಗಳಿಗೆ ಮದ್ಯ ಕುಡಿಸಿ ಕಾಸು ಪಡೆಯುತ್ತಿದ್ದ ಗಣೇಶ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡೊಂಬೆ ಸರಕುಳಿಯ ಗಣೇಶ ನಾಯ್ಕ ಮನೆ ಮೇಲೆ ಡಿಸೆಂಬರ್ 7ರಂದು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ದಾಳಿ ನಡೆಸಿದರು.…

ಶಾಸಕರ ಕಾರಿಗೆ ಗುದ್ದಿದ ಬೈಕು: ಗಾಯಾಳುವಿನ ಸ್ಥಿತಿ ಚಿಂತಾಜನಕ!

ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ ಕರ್ಕಿ ನಾಕದಲ್ಲಿನ ಹೊಟೇಲ್ ಬಳಿ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾರನ್ನು ಹಿಂದೆ ತೆಗೆಯುತ್ತಿದ್ದು,…

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

ಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ ಗಾರ್ಡನ್’ನ ಮದೀನಾ ಕಾಲೋನಿಯಿಂದ ಅವರು ಗುಡಲಕ್ ರಸ್ತೆಯಲ್ಲಿರುವ ಹುರಳಿಸಾಲಕ್ಕೆ ತೆರಳಿದ್ದರು. ಅಲ್ಲಿ ಅವರ…

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

ಭಟ್ಕಳ: ಸಮುದ್ರ ತೀರದಲ್ಲಿ ವೀಲಿಂಗ್ ಮಾಡಿದ ಬೆಂಗಳೂರು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನದ ಮಾಲಕನಿಗೆ ದಂಡ ವಿಧಿಸಿದ್ದಾರೆ. ಮುರುಡೇಶ್ವರ ಸಮುದ್ರ ತೀರದಲ್ಲಿ ಬೆಂಗಳೂರಿನ ಗಣೇಶ ಎನ್ ವಿ ತಮ್ಮ ಇಕೋ ವಾಹನ ಓಡಿಸಿದ್ದರು. ಅತಿಯಾದ ವೇಗದೊಂದಿಗೆ ಅಲೆಗಳ ಅಬ್ಬರದಲ್ಲಿ ವೀಲಿಂಗ್…

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

ದುಡಿಯುವ ಮಗ, ಬಾಣಂತನಕ್ಕೆ ಸಜ್ಜಾದ ಸೊಸೆ, ಹೊಸ ಮನೆ ನಿರ್ಮಾಣದ ಸಿದ್ಧತೆ, ಅಡಿಕೆ ಕೆಲಸದಿಂದ ಸಿಗುವ ಆದಾಯ.. `ನೆಮ್ಮದಿಯಿಂದ ಬದುಕಲು ಸದ್ಯಕ್ಕೆ ಇಷ್ಟು ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದ ವೃದ್ಧೆ ಮಂಗಲಾ ಸಿದ್ದಿ ಅವರ ಬದುಕಿಗೆ ಬಡಿದಿದ್ದು ದೊಡ್ಡ ಸಿಡಿಲು. ಬಾಲ್ಯದಿಂದಲೂ…

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

ಅಂಕೋಲಾ: ಪೆಟ್ರೊಲ್ ಬಂಕಿಗೆ ಇಂಧನ ಸಾಗಿಸುತ್ತಿದ್ದ ಲಾರಿ ಹಟ್ಟಿಗೇರಿ ಬಳಿ ಅಪಘಾತವಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಪೆಟ್ರೋಲ್ ಮೋರಿ ಪಾಲಾಗಿದೆ. ಅಂಕೋಲಾದಿoದ ಕಾರವಾರಕ್ಕೆ ಸಂಚರಿಸುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಚಲಿಸುತ್ತಿತ್ತು. ಈ ಟ್ಯಾಂಕರನ್ನು ಪುತ್ತೂರಿನ ರಕ್ಷಿತ ಆಚಾರ್ಯ ಓಡಿಸುತ್ತಿದ್ದರು. ಚೇತನ್ ಎಂಬಾತರು ಈ…

You cannot copy content of this page