ಟಿ ಎಂ ಎಸ್ ಸಭೆ | ಅಧ್ಯಕ್ಷ-ಉಪಾಧ್ಯಕ್ಷರಿಗೆ ಬಂಪರ್ ಲಾಟರಿ!
ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಿಗೆ ಇನ್ಮುಂದೆ ಪ್ರತಿ ತಿಂಗಳು 7500ರೂ ಹಾಗೂ ಉಪಾಧ್ಯಕ್ಷರಿಗೆ 5 ಸಾವಿರ ರೂ ಗೌರವಧನ ಸಿಗಲಿದೆ. ಈ ಹಿಂದೆ ಅಧ್ಯಕ್ಷರಿಗೆ ಮಾತ್ರ ಮಾಸಿಕ 5 ಸಾವಿರ ರೂ ಗೌರವಧನ ನೀಡಲಾಗುತ್ತಿತ್ತು. ಕಳೆದ…
ಸಾಲ ತೀರಿಸಲಾಗದೇ ಸಾವನಪ್ಪಿದ ಯುವಕ!
ಶಿರಸಿ: ಬಿಸಲಕೊಪ್ಪ ಕುತ್ಬುದ್ಧೀನ್ ವಡಗೇರಿ ಎಂಬ 28 ವರ್ಷದ ಯುವಕ ಸಾಲ ತೀರಿಸಲಾಗದೇ ಸಾವನಪ್ಪಿದ್ದಾನೆ. ವಡಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗುತ್ತಿಲ್ಲ ಎಂದು ನೊಂದಿದ್ದ. ಇದೇ ನೋವಿನಲ್ಲಿ ಸೆ 17ರಂದು ರಾತ್ರಿ ಈತ ಕಳೆನಾಶಕ…
ಮಳೆ ಕಡಿಮೆ.. ಕೆಲಸ ಜಾಸ್ತಿ!
ಕಾರವಾರ: `ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಎಲ್ಲಾ ಗ್ರಾ ಪಂ ವ್ಯಾಪ್ತಿಯಲ್ಲಿ ನರೆಗಾ ಯೋಜನೆ ಕೆಲಸ ಶುರು ಮಾಡಬೇಕು’ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಹೇಳಿದರು. ಅವರು ಬುಧವಾರ ನರೆಗಾ ಸಭೆ ನಡೆಸಿದ ಅವರು…
ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!
ಭಟ್ಕಳ: ಎಲ್ಲಾ ಕಡೆ 1ರೂಪಾಯಿಗೆ 80 ರೂ ನೀಡುವುದಾಗಿ ಮಟ್ಕಾ ಚೀಟಿ ಪಡೆದರೆ ಮುರುಡೇಶ್ವರದಲ್ಲಿ 1 ರೂಪಾಯಿಗೆ 70 ರೂ ಕೊಡುವುದಾಗಿ ತಿಳಿಸಿ ಇಬ್ಬರು ಮಟ್ಕಾ ಆಡಿಸುತ್ತಿದ್ದರು. ಕಾನೂನುಬಾಹಿರ ಜೂಜಾಟದಲ್ಲಿಯೂ ಮೋಸ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದರು! ಪಿಎಸ್‌ಐ…
ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!
ಶಿರಸಿ: ಕುಮಟಾ ರಸ್ತೆಯಲ್ಲಿದ್ದ ಚಾದರ ವ್ಯಾಪಾರ ಮಾಡುವ ರಫಿಕ್ ಬುಡನಸಾಬ್ ಎಂಬಾತರ ಅಂಗಡಿ ಮೇಲೆ ಅಬ್ದುಲ್ ಹಸನಸಾಬ್ ಹಾಗೂ ಇನ್ನಿಬ್ಬರು ದಾಳಿ ನಡೆಸಿದ್ದಾರೆ. ಮುಸ್ಲಿಂಗಲ್ಲಿಯ ರಫಿಕ್ ಬುಡನ್‌ಸಾಬ್ ಚಾದರ ವ್ಯಾಪಾರ ಮಾಡಿಕೊಂಡಿದ್ದು, ಸೆ 17ರ ಮಧ್ಯಾಹ್ನ 4.30ಕ್ಕೆ ಅವರು ಅಂಗಡಿಗೆ ಬೀಗ…
ಕೃಷಿಕನಿಗೆ ಇಲ್ಲ ವಿವಾಹ ಭಾಗ್ಯ: ಈ ಸಾವಿಗೆ ಆ ಹೆಣ್ಮಕ್ಕಳೇ ಹೊಣೆ!
37 ವರ್ಷ ಕಳೆದರೂ ಮದುವೆಯಾಗದ ಕಾರಣ ಜೊಯಿಡಾ ಚಾಂದೇವಾಡಿಯ ಬಾಲಚಂದ್ರ ಚೌದರಿ ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಮಾತುಕಥೆಗೆ ಬಂದ ಹೆಣ್ಮಕ್ಕಳು ಆತನಿಗೆ ನಿಂದಿಸುತ್ತಿರುವುದೇ ಆತ್ಮಹತ್ಯೆಗೆ ಮುಖ್ಯ ಕಾರಣ. ಕೃಷಿ ಜೊತೆ ಪೇಂಟಿoಗ್ ಕೆಲಸವನ್ನು ಮಾಡುತ್ತಿದ್ದ ಬಾಲಚಂದ್ರ ಚೌದರಿಗೆ ಕಳೆದ 5…
ಬಡ ಬಲೆಗಾರರ ಮೇಲೆ ನೌಕಾನೆಲೆ ಬಾಣ
ಕಾರವಾರ: ಮುದುಗಾ ಬಂದರು ಬಳಿ ಮೀನುಗಾರಿಕೆಗೆ ತೆರಳಿದ ಮೀನುಗಾರರ ಮೇಲೆ ಭಾರತೀಯ ನೌಕಾ ಸಿಬ್ಬಂದಿ ದರ್ಪ ತೋರಿದ್ದಾರೆ. ಮೀನುಗಾರಿಕೆಗೆ ಬಳಸುವ ಬಲೆಗಳನ್ನು ತುಂಡರಿಸುವ ಮೂಲಕ ಬಡ ಮೀನುಗಾರರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಬುಧವಾರ ದಾಮೋದರ ತಾಂಡೇಲ್ ಅವರು ತಮ್ಮ ವೀರ ಗಣಪತಿ…
ಜನಮೆಚ್ಚಿದ ಶಿಕ್ಷಕನಿಗೆ ಜನಪ್ರಿಯ ಪ್ರಶಸ್ತಿ
ಅಂಕೋಲಾ: ವಿಜ್ಞಾನ ವಿಷಯವಾಗಿ ಅರಿವು ಮೂಡಿಸುತ್ತಿರುವ ಶಿಕ್ಷಕ ಎಂ ರಾಜಶೇಖರ ನಂದೂಳ್ಳಿ ಅವರ ಸೇವೆ ಗುರುತಿಸಿದ ಲಯನ್ಸ ಕ್ಲಬ್ ಅವರನ್ನು ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಳೆದ 22 ವರ್ಷಗಳಿಂದ ಯಲ್ಲಾಪುರದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ಎಂ ರಾಜಶೇಖರ್…
ಹೆದ್ದಾರಿ ಹೊಂಡಕ್ಕೆ ಹೊಣೆಯಾರು? ಚಾಲಕರ ಪ್ರಶ್ನೆಗೆ ಇಲ್ಲ ಉತ್ತರ
ಯಲ್ಲಾಪುರ: ಗುಳ್ಳಾಪುರ ಬಳಿ ಚಿಕ್ಕುಮನೆ ತಿರುವಿನಲ್ಲಿ ಲಾರಿಯೊಂದು ಬುಧವಾರ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳೇ ತುಂಬಿಕೊoಡಿದ್ದು, ಅಪಘಾತಕ್ಕೆ ಮೂಲ ಕಾರಣ. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಬರುವ ಲಾರಿ ಹೆದ್ದಾರಿಯಲ್ಲಿನ ಹೊಂಡಕ್ಕೆ ಇಳಿದಿದ್ದು, ಆ ವೇಳೆ ವಾಹನ ಚಾಲಕನ ನಿಯಂತ್ರಣ…
ಪಾದಚಾರಿಗೆ ಗುದ್ದಿದ ಕಾರು: ಮಣಿಪಾಲಿಗೆ ಹೋದರೂ ಬದುಕದ ಸೋಮು
ಅಂಕೋಲಾ: ವಂದಿಗೆಯ ಪರ‍್ಲಕ್ಕಿಬೇಣದ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಸೋಮಾ ಕಡಬಾ ಗೌಡ (65) ಅವರಿಗೆ ಬೆಂಗಳೂರಿನ ರವಿಕುಮಾರ ಎಂಬಾತರು ಕಾರು ಗುದ್ದಿದ್ದು, ಸೋಮಾ ಗೌಡ ಅವರು ಸಾವನಪ್ಪಿದ್ದಾರೆ. ಸೆ 16ರಂದು ಸೋಮಾ ಗೌಡ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದರು. ಜೋರಾಗಿ…









