ಯಲ್ಲಾಪುರ-ಮುಂಡಗೋಡು ರಸ್ತೆ | ಹೊಂಡಕ್ಕೆ ಹಾರಿದ ಅಕ್ಕಿ ಲಾರಿ: ಹೊರ ತೆಗೆಯಲು ಹರಸಾಹಸ!
ಯಲ್ಲಾಪುರದಿಂದ ಮುಂಡಗೋಡಿಗೆ ತೆರಳುವ ರಸ್ತೆ ಹೊಂಡಗಳಿoದ ಕೂಡಿದ್ದು, ಹುಲಿಮನೆಯ ಬಳಿ ನಿತ್ಯ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಮಳೆಗಾಲದ ಅವಧಿಯಲ್ಲಿ ವಾಹನ ಚಾಲಕರಿಗೆ ಹೊಂಡದ ಆಳ-ಅಗಲ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ! ಸೋಮವಾರ ಸಂಜೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಹೊಂಡದಲ್ಲಿ ಸಿಕ್ಕಿಬಿದ್ದಿದ್ದು, ಅದನ್ನು ಹೊರತೆಗೆಯಲು…
199ರೂಪಾಯಿ ಅಕ್ರಮಕ್ಕೆ ಕೋರ್ಟು ತಿರುಗಾಟ: ಶರಾಬು ಮಾರಿ ಸಿಕ್ಕಿಬಿದ್ದ 72ರ ವೃದ್ಧ!
ಸಿದ್ದಾಪುರ: ನಿಲ್ಕುಂದದ ಮಳ್ಗುಂದ ಸರ್ಕಲ್’ನಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಅಬ್ಬಾಸ್ ಇಬ್ರಾಹಿ ಖಾನ್ (72) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಇದೀಗ ಅಕ್ರಮವಾಗಿ ಸರಾಯಿ ಮಾರಾಟಕ್ಕಿಳಿದಿದ್ದ. ಜೊತೆಗೆ ಮದ್ಯಪ್ರಿಯರಿಗೆ ಸಾರ್ವಜನಿಕ ಸ್ಥಳದಲ್ಲಿ…
ಬಲೆಯೊಳಗೆ ಸಿಲುಕಿ ಜೀವಬಿಟ್ಟ ಮೀನುಗಾರ!
ಕುಮಟಾ: ಬೆಟ್ಟುಳ್ಳಿ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ದಾವುದ್ ಅಲಿ ಫಾರಿಯಾ (68) ಎಂಬಾತರು ಮೀನಿನ ಬಲೆಯೊಳಗೆ ಸಿಲುಕಿ ಸಾವನಪ್ಪಿದ್ದಾರೆ. ಗಜನಿ ಪ್ರದೇಶದಲ್ಲಿ ಗೇಟ್ ಹಾಕುವುದು ಹಾಗೂ ಮೀನುಗಾರಿಕೆ ನಡೆಸಲು ದಾವುದ್ ಅಲಿ ಫಾರಿಯಾ ಟೆಂಡರ್ ಪಡೆದಿದ್ದರು. ಅದರಂತೆ ಸೆ 1ರ…
ಪ್ರವಾಸಿ ತಾಣದಲ್ಲಿ ಮೈ ಮಾರಾಟ ದಂಧೆ: ಅಶ್ವಿನಿ ರೌದ್ರಾವತಾರಕ್ಕೆ ನಲುಗಿದ ಕಾಳಿ!
ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯತಾಣವಾದ ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರವಾರ ಸಿಎನ್‌ಸಿ ಅಪರಾಧ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಬಿ ಅಶ್ವಿನಿ ನೇತ್ರತ್ವದಲ್ಲಿ ಹೈ ಲ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ.…
ಬರಿಗೈಯಲ್ಲಿ ಬಂದವನಿಗೆ ಬೊಗಸೆ ತುಂಬ ಪ್ರೀತಿ: ಶಿಕ್ಷಕನ ಜೋಳಿಗೆ ತುಂಬ ಉಡುಗರೆಗಳ ರಾಶಿ!
ಬರಿಗೈಯಲ್ಲಿ ಯಲ್ಲಾಪುರಕ್ಕೆ ಬಂದ ಶಿಕ್ಷಕ ಸಂತೋಷ ಕೊಳಗೇರಿ ಮಕ್ಕಳಿಗೆ ತಮ್ಮ ವೃತ್ತಿ ಜೀವನದ ಕೊನೆಯ ಪಾಠ ಮಾಡಿದ್ದು, ಇದಾದ ನಂತರ ಬೊಗಸೆ ತುಂಬ ಪ್ರೀತಿಯೊಂದಿಗೆ ನಿವೃತ್ತರಾದರು. ನೂರಾರು ಸಂಖ್ಯೆಯ ಅಭಿಮಾನಿಗಳು ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಬಂದು ಬೆಳೆಬಾಳುವ ಉಡುಗರೆಗಳನ್ನು ನೀಡಿದರು. ಬಂಗಾರದ…
ಎಲೆಮಾನವರ ಮೇಲೆ ಪೊಲೀಸರ ಬಾಣ!
ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇದೀಗ ನಿರಂತರವಾಗಿ ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಳೆದ ಮೂರು ದಿನದ ಅವಧಿಯಲ್ಲಿ ಹೊನ್ನಾವರ, ಕಾರವಾರ ಹಾಗೂ ಕುಮಟಾದಲ್ಲಿ ಪೊಲೀಸ್ ದಾಳಿ ನಡೆದಿದ್ದು, ಹಲವರ ಬಂಧನವಾಗಿದೆ. ದೇಗುಲ ಪಕ್ಕ ಜೂಜಾಟ ಶನಿವಾರ ಕಾರವಾರ ನಂದನಗದ್ದಾದ…
ಸಮಾಜದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ
ಯಲ್ಲಾಪುರ: `ಎಲ್ಲಾ ವರ್ಗದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಭಾನುವಾರ ಎಪಿಎಂಸಿ ಆವಾರದಲ್ಲಿ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಸಮಾಜದ ಎಲ್ಲಾ ವರ್ಗದವರನ್ನು ಗೌರವಿಸಿ ಪುರಸ್ಕರಿಸುವ ಕಾರ್ಯ ಇತರರಿಗೆ…
ಗಮನ ಸೆಳೆದ ಮಾತೆಯರ ಸಸ್ಯ ಸಂಭ್ರಮ
ಯಲ್ಲಾಪುರ: ಎಪಿಎಂಸಿ ಆವಾರದಲ್ಲಿ ಭಾನುವಾರ `ಸಸ್ಯ ಸಂಭ್ರಮ’ ನಡೆದಿದ್ದು ಉತ್ತಮ ಗಿಡಗಳ ಆರೈಕೆ ಮಾಡಿದ ಗೀತಾ ಭಟ್ ಆನಗೋಡ, ಶ್ವೇತಾ ಗೇರಗದ್ದೆ, ಪ್ರೇಮ ಹೆಗ್ಗಾರ್ ಹಾಗೂ ರಶ್ಮಿ ಹೆಗಡೆ ಕುಂಬ್ರಿ ಅವರಿಗೆ ಸಂಘಟಕರು ಬಹುಮಾನ ನೀಡಿ ಗೌರವಿಸಿದರು. ನಿವೃತ್ತ ಪ್ರಾಚಾರ್ಯ ಶ್ರೀರಂಗ…
ಮಕ್ಕಳ ಮೇಲೆ ಹೆಚ್ಚಿದ ದೌರ್ಜನ್ಯ: ನ್ಯಾಯಾಧೀಶರ ಕಳವಳ
`ಶಿಶು ಮಂದಿರ, ಬಾಲ ಮಂದಿರ ಹಾಗೂ ವಿವಿಧ ಶಾಲೆಗಳಲ್ಲಿ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣ ವರದಿಯಾಗುತ್ತಿದ್ದು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ನಡವಳಿಕೆ ಹಾಗೂ ವರ್ತನೆ ಬಗ್ಗೆ ಪೊಲೀಸ್ ಸಿಬ್ಬಂದಿ ಗಮನಿಸುತ್ತಿರಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್…
ಶಿಖಾರಿಗೆ ಹೋಗಿ ಸಿಕ್ಕಿಬಿದ್ದ: ಮಾಂಸದ ಆಸೆಗೆ ಮುಗ್ದ ಜೀವಿ ಬಲಿ
ಶಿರಸಿ: ಕಾಡಿನಲ್ಲಿ ಸ್ವಚ್ಚಂದವಾಗಿ ಮೇಯುತ್ತಿದ್ದ ಕಾಡು ಕುರಿಯನ್ನು ಕೊಂದ ಮಂಜುನಾಥ ಉಮೇಶ್ ನಾಯ್ಕ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಗಸ್ಟ 31ರ ರಾತ್ರಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪಿ ಅಲ್ಲಿ ವಿಹರಿಸುತ್ತಿದ್ದ ಕಾಡು ಕುರಿಗೆ ಗುರಿಯಿಟ್ಟಿದ್ದು, ಬಂದೂಕಿನ ಶಬ್ದಕ್ಕೆ ಆ…







