6
ಯಲ್ಲಾಪುರದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ: ಕಾರಣ ಏನು?

ಯಲ್ಲಾಪುರ ತಾಲೂಕಿನ ವಿವಿಧ ಸಾರ್ವಜನಿಕ ಗಣೇಶೋತ್ಸವಗಳಿಗೆ ಶುಕ್ರವಾರ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ, ತಪಾಸಣೆ ನಡೆಸಿದರು. ಗಜಾನನೋತ್ಸವಗಳಲ್ಲಿ ಅವಘಡಗಳು ಸಂಭವಿಸದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ಉಪವಿಭಾಗಕ್ಕೆ ಒಂದು ಬಾಂಬ್ ನಿಷ್ಕ್ರಿಯ ದಳವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರ ಭಾಗವಾಗಿ ಶಿರಸಿ ಉಪವಿಭಾಗ…

ಕಾಣೆಯಾಗಿದ್ದ ಪಂಪ್ ಸೆಟ್ ಪ್ರತ್ಯಕ್ಷ!

ಯಲ್ಲಾಪುರದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಲೆಕ್ಕಾಚಾರದ ವಿಷಯವೇ ಪ್ರಸ್ತಾಪವಾಗದೇ ದಾಖಲೆ ಸೃಷ್ಟಿಯಾಯಿತು. ಕಳೆದ 9 ಸಭೆಗಳಲ್ಲಿ ಹೆಚ್ಚಿನ ಸಮಯ ನುಂಗಿದ್ದ ಜಾತ್ರೆ ಲೆಕ್ಕಾಚಾರದ ವಿಷಯ ಈ ಬಾರಿ ಪ್ರಸ್ತಾವಾಗಲಿಲ್ಲ. ಉದ್ಯಮನಗರ ವಾರ್ಡ್ ಸದಸ್ಯ ನಾಗರಾಜ ಅಂಕೋಲೆಕರ್…

ಉಚಗೇರಿ-ಚಿಪಗೇರಿಯಲ್ಲಿ ಗಜಾನನೋತ್ಸವದ ರಜತ ಸಂಭ್ರಮ

ಯಲ್ಲಾಪುರ ತಾಲೂಕಿನ ಉಚಗೇರಿ-ಚಿಪಗೇರಿಯಲ್ಲಿ 25 ನೇ ವರ್ಷದ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಗಣೇಶೋತ್ಸವ ಸೆ.2 ರಂದು ಸಮಾರೋಪಗೊಳ್ಳಲಿದೆ. ಅಂದು ಸಂಜೆ 5 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾರಾಯಣ ಚಿಪಗೇರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಶಿವರಾಮ…

ಇದ್ದಕ್ಕಿದ್ದಂತೆ ಮಾಯವಾಯ್ತು ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ

ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಇದ್ದಕ್ಕಿದ್ದಂತೆ ಮಾಯವಾದ ಬಗ್ಗೆ ಹಳಿಯಾಳದ ಗೋಪಾಲ ಭಾಗ್ವತಕರ ಎಂಬವರು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಶೇಖನಕಟ್ಟಾದ ಗೋಪಾಲ ಅವರು ಹಳಿಯಾಳದ ಎಸ್.ಬಿ.ಐ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 1.65 ಲಕ್ಷ ರೂ ಹಣವಿತ್ತು. ಅದರಲ್ಲಿ…

ದೇವಿ ಮೈದಾನದಲ್ಲಿ 43 ನೇ ವರ್ಷ ಗಜಾನನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ

ಯಲ್ಲಾಪುರದ ಶ್ರೀ ದೇವಿ ಮೈದಾನ ಗಜಾನನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗದ್ದುಗೆಯಲ್ಲಿ ಬೆಳ್ಳಿ ಪ್ರಭಾವಳಿಯ ಅಲಂಕಾರದೊಂದಿಗೆ ಗಣಪತಿ ಶೋಭಿಸುತ್ತಿದ್ದಾನೆ.‌ ದೇವಿ ಮೈದಾನ ಉತ್ಸವ ಸಮಿತಿಯ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಈ ಬಾರಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ…

ಸಂಭ್ರಮದ ಗಣೇಶ ಚತುರ್ಥಿ: ಘಂಟೆ ಗಣಪನ ದರ್ಶನಕ್ಕೆ ಭಕ್ತ ಸಾಗರ

ಯಲ್ಲಾಪುರ ತಾಲೂಕಿನಾದ್ಯಂದ ಗಣೇಶ ಚತುರ್ಥಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನೆಯಲ್ಲಿ ಗಣೇಶನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಗಣಹವನ ಸೇರಿದಂತೆ ವಿವಿಧ…

ಅಧಿಕಾರಿಗಳ ತಪ್ಪಿಗೆ ರೈತರಿಗೆ ಶಿಕ್ಷೆ: ಬೆಳೆ ವಿಮೆಯಿಂದ ವಂಚಿತರಾಗುತ್ತಿರುವ ರೈತರು

ಅಕಾಲಿಕ ಮಳೆ , ಕೊಳೆ ರೋಗ , ಪ್ರಾಣಿಗಳಿಂದ ಬಾಧೆ…ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನ ಹಾಗೂ ಸರ್ಕಾರದ ಕುರುಡುತನದಿಂದ ಮತ್ತೊಂದು ಪೆಟ್ಟು ಬಿದ್ದಿದೆ. ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಕೃಷಿಕರು ಭತ್ತ , ಅಡಿಕೆ…

ಚಿಕಿತ್ಸೆ ನೀಡುವ ಕೈ, ಮೂರ್ತಿ ತಯಾರಿಸಲೂ ಸೈ

ವೈದ್ಯರೆಂದರೆ ಸದಾ ಕರ್ತವ್ಯದಲ್ಲಿರುವವರು, ಹಬ್ಬ-ಹರಿದಿನಗಳನ್ನು ಆಚರಿಸಲೂ ಸಮಯ ಇಲ್ಲದ ಸೇವೆ ಅವರದು. ಅಂತಹ ಒತ್ತಡದ ಕಾರ್ಯದ ನಡುವೆಯೂ ಬಿಡುವು ಮಾಡಿಕೊಂಡು ಗಣಪತಿಯ ಮೂರ್ತಿಯನ್ನು ತಾವೇ ತಯಾರಿಸಿ ಗಮನ ಸೆಳೆದಿದ್ದಾರೆ ಯಲ್ಲಾಪುರದ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್. ಪ್ರತಿ ವರ್ಷ ಗಣೇಶ ಚತುರ್ಥಿಯಂದು…

ಕಾಂಗ್ರೆಸಿಗರೇ, ನೀವೆಲ್ಲ ‘ನಮಸ್ತೆ ಸದಾ ವತ್ಸಲೇ….’ ಹಾಡಿ: ರಾಮು ನಾಯ್ಕ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ‘ ನಮಸ್ತೇ ಸದಾ ವತ್ಸಲೇ…., ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಡಿಕೆಶಿ ಕಾಂಗ್ರೆಸ ಪಕ್ಷ ಅಥವಾ ಸರಕಾರದಲ್ಲಿ ಏನೇ ಆಗಿದ್ದರೂ, ಅದಕ್ಕೂ ಮೊದಲು ಅವರೊಬ್ಬ “ಹಿಂದು ಹಾಗೂ ಹಿಂದುಸ್ತಾನಿ” ಆಗಿದ್ದಾರೆ. ತಾನು ಬದುಕಿ ಬಾಳುವ ಈ ಭೂಮಿತಾಯಿಗೆ…

ಸ್ವರ್ಣವಲ್ಲೀ ಯಕ್ಷೋತ್ಸವ: ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ನಾಲ್ಕು ತಂಡಗಳಿಗೆ ಪ್ರಶಸ್ತಿ

ಸ್ವರ್ಣವಲ್ಲೀ ಮಠದಲ್ಲಿ ನಡೆದ ಯಕ್ಷೋತ್ಸವದ ತಾಳಮದ್ದಲೆ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಮಾಗೋಡಿನ ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ವಿವಿಧ ವಿಭಾಗಗಳ ನಾಲ್ಕು ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಸಾಂಸ್ಥಿಕ ವಿಭಾಗದಲ್ಲಿ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಪ್ರಥಮ, ಕಿರಿಯರ ವಿಭಾಗದಲ್ಲಿ ಕಟ್ಟಿಗೆ ಸರ್ಕಾರಿ…

You cannot copy content of this page