ಜುಲೈ 16: ಜಲಾಶಯಗಳ ನೀರಿನ ಮಟ್ಟ ಹಾಗೂ ಮಳೆ ವಿವರ
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಜಲಾಶಯಗಳು ಭರ್ತಿಯಾಗಿದೆ. ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ. ಜೂಮ್ ಮಾಡಿ ನೋಡಿ.. ಕಳೆದ 24 ತಾಸಿನ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ಮಳೆ ವರದಿ ಇಲ್ಲಿದೆ. ಜೂಮ್ ಮಾಡಿ…
ಮಳೆ ಮತ್ತು ಮರಣ: ಮಣ್ಣಿನಡಿ ಸಿಲುಕಿದ ಕುಟುಂಬವೇ ನಾಶ
ಅಂಕೋಲಾ: ಶಿರೂರು ಬಳಿ ಮಂಗಳವಾರ ಭಾರೀ ಪ್ರಮಾಣದ ಗುಡ್ಡ ಕುಸಿದ ಕಾರಣ ಮಣ್ಣಿನ ಅಡಿ ಸಿಲುಕಿ 7 ಜನ ಸಾವನಪ್ಪಿದ್ದಾರೆ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ಟ್ಯಾಂಕರ್ ಸಹ ನದಿ…
ಗುಡ್ಡ ಕುಸಿತ: ಮಣ್ಣಿನ ಅಡಿಗೆ ಸಿಲುಕಿದ್ದ ವ್ಯಕ್ತಿ ಸಾವು
ಕಾರವಾರ: ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಗುಡ್ಡ ಕುಸಿದಿದ್ದರಿಂದ ಮಣ್ಣಿನ ಅಡಿಗೆ ಸಿಲುಕಿದ್ದ ತಿರ್ಕಸ್ ಗುರವ್ ಎಂಬಾತ ಸಾವನಪ್ಪಿದ್ದಾನೆ. ಬೆಳಗ್ಗೆ 7.30ಕ್ಕೆ ಗುಡ್ಡ ಕುಸಿದಿದೆ. ಪರಿಣಾಮ ಅಲ್ಲಿಯೇ ಇದ್ದ ಹಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಮಾಲಕ ತಿಕರ್ಸ ಗುರವ್…
ಗುಡ್ಡ ಕುಸಿತ: ಮಣ್ಣಿನ ಅಡಿ ಸಿಲುಕಿದ ಮನೆ ಮಾಲಕ
ಕಾರವಾರ: ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಜುಲೈ 16ರ ಮಂಗಳವಾರ ಬೆಳಗ್ಗೆ 7.30ಕ್ಕೆ ಗುಡ್ಡ ಕುಸಿದಿದೆ. ಪರಿಣಾಮ ಅಲ್ಲಿಯೇ ಇದ್ದ ಹಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಮಾಲಕ ತಿಕರ್ಸ ಗುರವ್ ಮನೆಯೊಳಗೆ ಸಿಲುಕಿಗೊಂಡಿದ್ದು, ಊರಿನವರು ಅವರ ರಕ್ಷಣೆಗೆ ಧಾವಿಸಿದ್ದಾರೆ.
ಪ್ರಯಾಣಿಕರೇ ಇಲ್ಲಿ ಗಮನಿಸಿ: ಶಿರಸಿ-ಕುಮಟಾ ಗುಡ್ಡ ಕುಸಿತ
ಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತಡೆ ಉಂಟಾಗಿದೆ. ರಾಗಿ ಹೊಸಳ್ಳಿ ಬಳಿ ಸಹ ರಸ್ತೆ ಮೇಲೆ ಇನ್ನೊಂದು ಗುಡ್ಡ ಕುಸಿದಿದೆ. ಜುಲೈ 16ರ ನಸುಕಿನ 2 ಗಂಟೆ…
ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ!
ಜುಲೈ 18ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದೆ. ಹೀಗಾಗಿ ಈ ಅವಧಿಯನ್ನು `ರೆಡ್ ಅಲರ್ಟ’ ಎಂದು ಘೋಷಿಸಲಾಗಿದೆ. ತುರ್ತು ನೆರವಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸು ಕೆಲಸ ನಿರ್ವಹಿಸುವ ಕೇಂದ್ರ ತೆರೆಯಲಾಗಿದೆ. ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಹಾಗೂ…
ಮದುವೆಗೆ ಹೋಗಿದ್ದ ಮಹಿಳೆಗೆ ಆಘಾತ: ಮಗಳ ಶವ ನೋಡಿ ನೇಣಿಗೆ ಶರಣಾದ ತಾಯಿ
ಭಟ್ಕಳದ ಯಲ್ವಡಿಕವೂರು ಬಳಿಯ ಗೋರಿಕಲ್ಲು ಮನೆಯಲ್ಲಿ ವಾಸವಾಗಿದ್ದ ಮಾದೇವಿ ನಾಯ್ಕ ನೇಣಿಗೆ ಶರಣಾಗಿದ್ದು, ಇದನ್ನು ನೋಡಿದ ಆಕೆಯ ಕೃಷ್ಣಮ್ಮ ನಾಯ್ಕ ಸಹ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ. ಕೃಷ್ಣಮ್ಮ ಹಾಗೂ ಅವರ ಮಗಳು ಮಾದೇವಿ ಒಂದೇ ಊರಿನಲ್ಲಿ ವಾಸವಾಗಿದ್ದರು. ಸೋಮವಾರ ಮನೆಯವರೆಲ್ಲರೂ ಮದುವೆಗೆ ಹೋಗಿದ್ದು,…
ಮಾಯದಂತ ಮಳೆ ಬಂತಣ್ಣ…
ಮಲೆನಾಡು ಹಾಗೂ ಕರಾವಳಿಯನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದೆ. ಒಂದೆರಡು ದಿನಗಳ ಕಾಲ ಬಿಡುವು ಪಡೆದಿದ್ದ ವರುಣ ಶುಕ್ರವಾರದಿಂದ ಮತ್ತೆ ಅಬ್ಬರಿಸುತ್ತಿದ್ದು, ಇನ್ನು ಎರಡು ದಿನ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ ಜನ ಜೀವನ…
ಕದ್ರಾ ಅಣೆಕಟ್ಟು: ನೀರು ಹೊರಬಿಡುವಿಕೆಗೆ ಕ್ಷಣಗಣನೆ!
ಕಾರವಾರ: ರಭಸ ಮಳೆಗೆ ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಕದ್ರಾ ಅಣೆಕಟ್ಟು ಭರ್ತಿಯಾಗಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರಗಳಾಗಿದ್ದು, ಪ್ರಸ್ತುತ ಜಲಾಶಯದ ಮಟ್ಟವು 29.70 ಮೀಟರ್ ತಲುಪಿದೆ. ಅಣೆಕಟ್ಟಿಗೆ 30 ಸಾವಿರ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರಿನ ಒಳಹರಿವಿದ್ದು, ಯಾವುದೇ…
ಬೈಕಿಗೆ ಗುದ್ದಿದ ಬುಲೇರೋ: ಇಬ್ಬರಿಗೆ ಗಾಯ
ಮುಂಡಗೋಡ: ಶಿರಸಿಯಿಂದ ಬುಲೇರೋ ಓಡಿಸಿಕೊಂಡು ಬಂದ ಪೈರೋಜ್ ಖಾನ್ ಎಂಬಾತ ಕಾತೂರಿನಲ್ಲಿ ಬೈಕಿಗೆ ಗುದ್ದಿದ್ದು, ಇದರಿಂದ ಬೈಕ್ ಸವಾರ ಬಸವರಾಜ ಸಾಳುಂಕೆ ಗಾಯಗೊಂಡಿದ್ದಾರೆ. ಶಿರಸಿಯ ರಾಮನಬೈಲ್’ನಲ್ಲಿ ಚಾಲಕನಾಗಿರುವ ಪೈರೋಜ್ ಖಾನ್ ಜುಲೈ 13ರಂದು ಮುಂಡಗೋಡು ಕಡೆ ಹೊರಟಿದ್ದ. ಇದೇ ವೇಳೆ ಬಸವರಾಜ…







