ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆ: ಸಾವನಪ್ಪಿದರೆ 15 ಲಕ್ಷ ರೂ ಪರಿಹಾರ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 112 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 9 ಜನ ಸಾವನಪ್ಪಿದ್ದಾರೆ. ಕಾಡು ಪ್ರಾಣಿಯಿಂದ ಮರಣ ಹೊಂದಿದವರಿಗೆ ಅರಣ್ಯ ಕಾಯ್ದೆಯಡಿಯಲ್ಲಿ 15 ಲಕ್ಷ ರೂ ಪರಿಹಾರ ನೀಡಲು ಅವಕಾಶವಿದೆ. ಅದರಂತೆ ಇದೀಗ ಮಂಗನ ಕಾಯಿಲೆಯಿಂದ ಮರಣ…
ಮಗನಿಗೆ ಬೈಕ್ ಕೊಡಿಸಿ ಹಣ ಕಳೆದುಕೊಂಡ ತಾಯಿ!
ಕುಮಟಾ: ಮೂರು ದಿನದ ಹಿಂದೆ ಬಸ್ ನಿಲ್ದಾಣದ ಬಳಿ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಹಿಡಿದು ಪ್ರಕರಣ ದಾಖಲಿಸಿದ ಪೊಲೀಸರು ಬುಧವಾರ ನ್ಯಾಯಾಲಯದ ಆದೇಶದ ಪ್ರಕಾರ ಆತನ ಪಾಲಕರಿಂದ 30 ಸಾವಿರ ರೂ ದಂಡ ವಸೂಲಿ ಮಾಡಿದ್ದಾರೆ. ಭಾನುವಾರ ಪಟ್ಟಣದಲ್ಲಿ ತಪಾಸಣೆಗೆ…
ಉತ್ತರ ಕನ್ನಡಕ್ಕೆ ಬರುವ ವೈದ್ಯರಿಗೆ ವಿಚಿತ್ರ ರೋಗ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸರ್ಕಾರದಿಂದ 61 ವೈದ್ಯರ ನೇಮಕಾತಿ ನಡೆದಿದ್ದು, ಅದರಲ್ಲಿ 24 ವೈದ್ಯರು ಯಾರಿಗೂ ಹೇಳದೇ ಕೆಲಸ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್ ಉಸ್ತುವಾರಿ ಸಚಿವರಿಗೆ ಮಾಹಿತಿ…
ಗುತ್ತಿಗೆದಾರರ ಎದೆಯಲ್ಲಿ ಡವ ಡವ!
ಕಾರವಾರ: `ಅಭಿವೃದ್ದಿ ಕಾಮಗಾರಿಗಳ ಗುತ್ತಿಗೆವಹಿಸಿಕೊಂಡಿರುವ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಬೇಕು. ಯಾರಿಗೆ ಅವಧಿಯೊಳಗೆ ಕೆಲಸ ಮುಗಿಸುವ ಅರ್ಹತೆ ಇಲ್ಲವೋ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ” ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
ಸರ್ಕಾರಿ ಜಾಗ ಅತಿಕ್ರಮಣ: ರಸ್ತೆ ಬಂದ್ ಮಾಡಿದ ಕಂದಾಯ ಇಲಾಖೆ
ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶ ನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಅತಿಕ್ರಮಿಸಿದ ರಸ್ತೆಯ ಮದ್ಯಭಾಗದಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಿದ್ದಾರೆ. `ಇದು ಸರ್ಕಾರಿ ಜಮೀನು ಆಗಿದ್ದು, ಅತಿಕ್ರಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು…
ಶುದ್ಧ ನೀರಿಗೆ ಚರಂಡಿ ನೀರು ಮಿಶ್ರಣ: ರೈತರ ಜೊತೆ ಲೇಔಟ್ ನಿವಾಸಿಗಳಿಗೂ ಆತಂಕ
ಯಲ್ಲಾಪುರ: ಪಟ್ಟಣದ ದಾತ್ರಿ ನಗರಕ್ಕೆ ಹೊಂದಿಕೊoಡಿರುವ ಹಿತ್ಲಕಾರಗದ್ದೆಯಲ್ಲಿ ಶುದ್ಧ ನೀರಿನ ಜೊತೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ದಾತ್ರಿ ನಗರದಲ್ಲಿ ವಾಸಿಸುವವರಿಗೆ ನಿತ್ಯ ತೊಂದರೆ ಆಗುತ್ತಿದ್ದು, ಈ ಬಗ್ಗೆ ಬುಧವಾರ ಸಂಜೆ ಜಮಾಯಿಸಿದ ಜನ ಇದಕ್ಕೆ ಕಾರಣರಾದವರ ವಿರುದ್ಧ ಕಿಡಿಕಾರಿದರು. ಕೆಲವರು ಅನಾಧಿಕಾಲದಿಂದಲೂ…
ಅರಣ್ಯ ಅತಿಕ್ರಮಣ: ಶೆಡ್’ಗೆ ಅಳವಡಿಸಿದ್ದ ತಗಡು ಇಲಾಖೆ ಪಾಲು!
ಯಲ್ಲಾಪುರ: ಚಿಪಗೇರಿಯಿಂದ ಕಂಚಿಕೊಪ್ಪಕ್ಕೆ ಹೋಗುವ ರಸ್ತೆ ಪಕ್ಕದ ಅರಣ್ಯದಲ್ಲಿ ಪ್ರೀತಿ ಸಿದ್ದಿ ಹಾಗೂ ಮಬ್ಲೆಶ್ವರ ಸಿದ್ದಿ ನಿರ್ಮಿಸುತ್ತಿದ್ದ ಶೆಡ್’ನ್ನು ಅರಣ್ಯಾಧಿಕಾರಿಗಳು ಧ್ವಂಸ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಅವರು ಅಲ್ಲಿ ಶೆಡ್ ನಿರ್ಮಿಸುತ್ತಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು,…
ನಿದ್ದೆಯ ಮಂಪರು: ನಿಂತ ಲಾರಿಗೆ ಬಸ್ ಗುದ್ದಿದ ಚಾಲಕ
ಯಲ್ಲಾಪುರ: ಉಡುಪಿಯಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್ ಡೊಮಗೇರಿ ತಿರುವಿನ ಬಳಿ ಅಪಘಾತವಾಗಿದೆ. ಇದರಿಂದ ಬಸ್ಸಿನಲ್ಲಿದ್ದ 12 ಜನ ಗಾಯಗೊಂಡಿದ್ದಾರೆ. ಜೂ 19ರ ಬೆಳಗ್ಗೆ 3.30ಕ್ಕೆ ಈ ಅಪಘಾತ ನಡೆದಿದ್ದು, ಬಸ್ ಚಾಲಕ ಶಿವಮೊಗ್ಗದ ಪ್ರದೀಪ ಜಿ ನಿದ್ರೆಯ ಮಂಪರಿನಲ್ಲಿ ಬಸ್ ಓಡಿಸಿರುವುದು…
ಯಲ್ಲಾಪುರದ ಇಬ್ಬರಿಗೆ ಶಿರಸಿಯಲ್ಲಿ ಪೆಟ್ಟು
ಶಿರಸಿ: ಇಲ್ಲಿನ ಸಾರಿಗೆ ಇಲಾಖೆ ಕಚೇರಿಗೆ ಹೊರಟಿದ್ದ ಯಲ್ಲಾಪುರ ತಾಲೂಕಿನ ಕೋಳಿಕೆರೆಯ ಅನಿಲ ಗೊಂದಲ ಹಾಗೂ ಅವರ ಚಿಕ್ಕಪ್ಪನ ಮಗ ಪರಶುರಾಮ ಜಂಬೂರು ಎಂಬಾತರ ಬೈಕ್ ಅಪಘಾತವಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಶೃoಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಾನಗಲ್ಲಿನ ಪರಶುರಾಮ ಮಲ್ಲಪ್ಪ ಬಂಜೂರು…
ಅಂಕೋಲಾ ಬಸ್ ನಿಲ್ದಾಣದಲ್ಲಿ ಬೈಕ್ ಕದಿಯುವುದು ದೇವಸ್ಥಾನದಲ್ಲಿ ಚಪ್ಪಲಿ ಕದಿಯುವುದಕ್ಕಿಂತ ಸಲೀಸು!
ಅಂಕೋಲಾ: ಅಲ್ಲಿ ಇಲ್ಲಿ ತಡಕಾಡಿ 18 ಸಾವಿರ ರೂ ಒಟ್ಟು ಮಾಡಿದ್ದ ಅಲಗೇರಿಯ ಅಕ್ಷಯ್ ಆಚಾರಿ (21) ಒಂದು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ. ನಿತ್ಯ ಅದೇ ಬೈಕಿನಲ್ಲಿ ಆತ ಕಾಲೇಜಿಗೆ ಹೋಗುತ್ತಿದ್ದ. ಆದರೆ, ಆ ಬೈಕನ್ನು ಇದೀಗ ಕಳ್ಳರು ಅಪಹರಿಸಿದ್ದಾರೆ.…







