ಗಾಳಿ-ಮಳೆಯಿಂದ ಹೆಸ್ಕಾಂ ಆದಾಯಕ್ಕೆ ಹೊಡೆತ
ಏ 1ರಿಂದ ಜೂ 17ರವರೆಗೆ ಸುರಿದ ಗಾಳಿಸಹಿತ ಮಳೆಯಿಂದ ಹೆಸ್ಕಾಂ’ಗೆ 31.81 ಕೋಟಿ ರೂ ನಷ್ಟವಾಗಿದೆ. ಈವರೆಗೆ ಸುರಿದ ಮಳೆಯಿಂದ ವಿವಿಧ ಕಡೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ತಂತಿಗಳು ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಧಾರವಾಡ, ಬೆಳಗಾವಿ,…
ಫೈರ್‌ಬ್ಯಾಂಡ್ ಮನೆಗೆ ತಗುಲಿದ ಬೆಂಕಿ!
ಹಿoದೂತ್ವದ ಫೈರ್‌ಬ್ಯಾಂಡ್ ಎಂದು ಗುರುತಿಸಿಕೊಂಡಿರುವ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಮನೆಯಲ್ಲಿ ಅಗ್ನಿ ಅವಘಡ ಉಂಟಾಗಿದೆ. ಶಿರಸಿಯ ಕೆ ಎಚ್ ಬಿ ಕಾಲೋನಿಯಲ್ಲಿ ಅವರ ಮನೆಯಿದ್ದು, ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅನಾಹುತ ನಡೆದಿದೆ. ಬೆಂಕಿಯ ಜ್ವಾಲೆಗೆ ಮನೆ ಮೇಲ್ಬಾಗದ ಚಾವಣಿ…
ಪಶ್ಚಿಮಘಟ್ಟದಲ್ಲಿ ಮಳೆ ಕೊರತೆ: ಅರಬ್ಬಿ ಸಮುದ್ರದಲ್ಲಿ ಮೀನು ಅಭಾವ!
ಮೀನುಗಾರಿಕೆ ಉತ್ತರ ಕನ್ನಡ ಪ್ರಮುಖ ಆದಾಯದ ಮೂಲ. ಪ್ರತಿ ವರ್ಷ 1 ಸಾವಿರ ಕೋಟಿಗೂ ಅಧಿ ವಹಿವಾಟು ಮೀನುಗಾರಿಕೆಯಿಂದ ನಡೆಯುತ್ತದೆ. ಲಕ್ಷಕ್ಕೂ ಅಧಿಕ ಕುಟುಂಬಗಳು ಈ ವೃತ್ತಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರದ ಬೈತಖೋಲ್, ಮುದಗಾ, ಬೇಲೆಕೇರಿ, ತದಡಿ, ಹೊನ್ನಾವರ, ಕಾಸರಕೋಡು,…
ಮೈಸೂರು ದೊರೆಯ ಮೆಚ್ಚುಗೆ ಪಡೆದ ಸಿದ್ದಾಪುರದ ಕಲಾವಿದ
ಮೈಸೂರಿನ ದೊರೆ ಯುದುವೀರ್ ಒಡೆಯರನ್ನು ಅವರನ್ನು ಭೇಟಿ ಮಾಡಿದ ಸಿದ್ದಾಪುರದ ಕಲಾವಿದ ರವೀಂದ್ರ ಹೆಗಡೆ ಅವರು ಯದುವೀರ್ ಅವರ ಭಾವಚಿತ್ರ ಬಿಡಿಸಿ ನೀಡಿದರು. ರವೀಂದ್ರ ಹೆಗಡೆ ನಾಡಿನ ಹಿರಿಯ ಕಲಾವಿದ ಆಡಿ ಬಿ ಕೆ ಎಸ್ ವರ್ಮಾ ಅವರ ಶಿಷ್ಯರು.
ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!
ದಾಂಡೇಲಿಯ ಹುಸೇನ್ ಸಾಬ್ ಲತಪ್ಪನವರ್ ಎಂಬಾತರ ಪತ್ನಿ ಸಾವನಪ್ಪಿದಾಗ ಅವರಿಗೆ ಸಾಂತ್ವಾನ ಹೇಳಲು ಆಗಮಿಸಿದ್ದ ಭಟ್ಕಳದ ಮೂವರು ಅವರ ಬಳಿಯಿದ್ದ 7 ತಿಂಗಳ ಹಸುಗೂಸನ್ನು ಅಪಹರಿಸಿದ್ದಾರೆ. ಹುಸೇನ್‌ಸಾಬ್ ಅವರ ಪತ್ನಿ 8 ತಿಂಗಳ ಹಿಂದೆ ಸಾವನಪ್ಪಿದ್ದರು. ಆಗ, ಅವರ ಮನೆಗೆ ಇಬ್ಬರು…
ಕೊನೆಗೂ ಫಲಿಸಲಿಲ್ಲ ಹಲವರ ಪ್ರಾರ್ಥನೆ: ಆರೈಕೆಗೂ ಸಹಕರಿಸದೇ ಅಧಿಕಾರಿಗಳ ಕ್ರೂರ ವರ್ತನೆ
ಗೋಕರ್ಣದಲ್ಲಿ ಬಸ್ ಅಪಘಾತದಿಂದ ಗಾಯಗೊಂಡು ಐದು ದಿನಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ದನ ಭಾನುವಾರ ಸಂಜೆ ಸಾವನಪ್ಪಿದೆ. ಸ್ಥಳೀಯ ಗ್ರಾ ಪಂ ಸದಸ್ಯ ಸುಜಯ ಶೆಟ್ಟಿ ಹಾಗೂ ಅಲ್ಲಿನ ರಿಕ್ಷಾ ಮಾಲಕರು ಜಾನುವಾರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಬಸ್ ನಿಲ್ದಾಣದ ಮೂಲೆಯಲ್ಲಿ…
ಸಾತೊಡ್ಡಿ ಪ್ರವಾಸಿಗರ ಹುಚ್ಚಾಟ: ಪೊಲೀಸರಿಗೆ ತಲೆಬಿಸಿ!
ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದ್ದು, ಭಾನುವಾರ ರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಪಡ್ಡೆ ಹುಡುಗರ ಬೆವರಿಳಿಸಿದರು. ಯಲ್ಲಾಪುರದ ಬಿಸಗೋಡು ತಿರುವಿನಲ್ಲಿ ಕಾವಲು ನಿಂತ ಪೊಲೀಸರು ಅಡ್ಡಾದಿಡ್ಡಿ ವಾಹನ ಚಲಾಯಿಸುವವರನ್ನು ತಡೆದರು. ಅವರ ಬಳಿಯಿದ್ದ ಮದ್ಯದ ಬಾಟಲಿಗಳನ್ನು…
ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ
ಆತ ನೋಡಲು ಸುಂದರವಾಗಿದ್ದ. ವೃತ್ತಿಯಲ್ಲಿ ಪೊಲೀಸ್ ಬೇರೆ. ಆದರೆ, ಆನ್ ಲೈನ್ ಗೇಮ್ ಚಟಕ್ಕೆ ಆತ ಅಂಟಿಕೊoಡಿದ್ದರಿoದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ. ರಮ್ಮಿ ಆಡಿ ಹಣ ಕಳೆದುಕೊಂಡ ಕಾರಣ ಆತನ ಪ್ರೇಯಸಿಯೇ ಇದೀಗ ತಿರುಗಿ ಬಿದ್ದಿದ್ದಾಳೆ. ಹಾಸನದ ಚನ್ನರಾಯಪಟ್ಟಣದಲ್ಲಿನ ಗಿರೀಶ್ ಎಂ…
ಅರಬ್ಬಿ ಸಮುದ್ರದ ಅಬ್ಬರ: ಕರಾವಳಿಗೆ ನಡುಕ!
ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಅರಬ್ಬಿ ಸಮುದ್ರದ ಅಬ್ಬರ, ಏಕಾಏಕಿ ಬೀಸುವ ಗಾಳಿಯಿಂದಾಗಿ ಕಡಲ ತೀರದಲ್ಲಿನ ವಾತಾವರಣದಲ್ಲಿ ಏರುಪೇರಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಕಡಲ ಕೊರೆತ ಮುಂದುವರೆದಿದ್ದು, ಸಮುದ್ರದ ಅಂಚಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಲ್ಲಿ ನಡುಕ ಶುರುವಾಗಿದೆ. ಜೊತೆಗೆ ಸಮುದ್ರ…
ರಾಮನ ಹೆಸರಿನಲ್ಲಿ ಮೋಸ ಮಾಡಿದವನಿಗೆ ಕೃಷ್ಣ ಜನ್ಮಸ್ಥಾನ ದರ್ಶನ
ಭಟ್ಕಳದ ಶ್ರೀರಾಮ ಫೈನಾನ್ಸಿನಲ್ಲಿನ ಹಣ ದುರುಪಯೋಗಪಡಿಸಿಕೊಂಡು ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಕುಂದಾಪುರದ ರಾಘವೇಂದ್ರ ರಾಜೀವ ಸ್ವಾಮಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದು, ಆತನನ್ನು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬoಧಿಸಿದoತೆ ಕಳೆದ ವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಫೈನಾನ್ಸಿನಲ್ಲಿ ಸಾಲ…







