ಆರೋಗ್ಯ ಕೇಂದ್ರದ ಜಾಗಕ್ಕೆ ಅನಾರೋಗ್ಯ
ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಇದೀಗ ಅನಾರೋಗ್ಯ ಕಾಡುತ್ತಿದೆ. ಈ ಕೇಂದ್ರ ಅಕ್ರಮ ಚಟುವಟಿಕೆಯ ತಾಣವಾಗಿದೆ. ಗುರುತು ಪರಿಚಯ ಇಲ್ಲದ ಅನೇಕರು ಇಲ್ಲಿ ಆಗಮಿಸಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದಾರೆ. ಸೂಕ್ತ ಭದ್ರತೆಯೂ ಇಲ್ಲ, ಗೋಡೆಯೂ ಇಲ್ಲ ಎಂಬAತಾಗಿದ್ದರಿAದ ಕಾರಣ…
ಗೋಕರ್ಣದಿಂದ ಪಂಡರಾಪುರಕ್ಕೆ ಪಾದಯಾತ್ರೆ
ಕಳೆದ 35 ವರ್ಷಗಳಿಂದ ಗೋಕರ್ಣದಿಂದ ಪಂಡರಾಪುರಕ್ಕೆ ಪಾದಯಾತ್ರೆ ನಡೆಯುತ್ತಿದೆ. ಇದನ್ನು ಆಷಾಢ ದಿಂಡಿಯಾತ್ರೆ ಎಂದು ಕರೆಯುತ್ತಾರೆ. ಈ ಬಾರಿ 36ನೇ ವರ್ಷದ ಯಾತ್ರೆಗೆ ಚಾಲನೆ ದೊರೆತಿದೆ. ಮುಂಡಗೋಡ, ಹಳಿಯಾಳ, ಬೆಳಗಾವಿ, ಸವದತ್ತಿ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇಲ್ಲಿಂದ…
ಯುವನಿಧಿ ಹಣ ಪಡೆಯಲು ಹೀಗೆ ಮಾಡಿ…
ಯುವನಿಧಿ ಯೋಜನೆಯ ಅರ್ಹ ಫಲಾನುಭವಿಗಳು ಮಾಸಿಕ ನಿರುದ್ಯೋಗ ಭತ್ಯೆ ಪಡೆಯಲು ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಪ್ರತಿ ತಿಂಗಳು 25ನೇ ತಾರೀಖಿನ ಒಳಗಾಗಿ ಸ್ವಯಂ ಘೋಷಣೆ ಸಲ್ಲಿಸಬೇಕು. ಕಳೆದ ತಿಂಗಳುಗಳಲ್ಲಿ ಸ್ವಯಂ ಘೋಷಣೆ ಮಾಡಲು ಸಾಧ್ಯವಾಗದೇ ಇರುವ ಫಲಾನುಭವಿಗಳು ಈ ತಿಂಗಳು ಜೂನ್…
ರೈತರ ಸಮಸ್ಯೆಗೆ ಜಿಲ್ಲಾಧಿಕಾರಿ ಸ್ಪಂದನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ರೈತ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಬೇಕು ಎಂದು ಕರೆ ನೀಡಿದೆ. `ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಮಾಡಬಾರದು. ರೈತರ…
ಉತ್ತರ ಕನ್ನಡದಲ್ಲಿ ಹೆಚ್ಚಾದ ರೈತ ಆತ್ಮಹತ್ಯೆ
2019ರಿಂದ 2023ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 43 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಂಕ್ ಅಧಿಕಾರಿಗಳ ಒತ್ತಡದಿಂದ ಸಾವನಪ್ಪಿದವರ ಸಂಖ್ಯೆಯೇ ಜಾಸ್ತಿ. ಈ…
ಸರ್ಕಾರಿ ಯೋಜನೆಗೆ ಸಾವಿರ ಮರ ಬಲಿ!
ಕೆನರಾ ಸರ್ಕಲ್’ನಲ್ಲಿ ಮರಗಳ ಬುಡ ಬಿಟ್ಟು ಶಿರ ಮಾತ್ರ ಕಡಿದರೆ ಅದು ಅಪರಾಧವೇ ಅಲ್ಲ! ಮುಂಡಗೋಡಿನ ಏತ ನೀರಾವರಿ ಯೋಜನೆಗೆ ಸಂಬoಧಿಸಿ ವಿದ್ಯುತ್ ಒಯ್ಯಲು ಮರಗಳ ಶಿರ ಕಡಿಯಲಾಗಿದೆ. ಶಿರಸಿ-ಯಲ್ಲಾಪುರ-ಉಮ್ಮಚ್ಗಿ-ಕಾತೂರು ಮಾರ್ಗವಾಗಿ ರಸ್ತೆ ಪಕ್ಕದಲ್ಲಿ ಮರಗಳ ಮಾರಣಹೋಮ ನಡೆದಿದ್ದು, ಮರಕ್ಕೆ ಇರುವ…
ಸಂಪಿಗೆಯ ಕಂಪಿಗೆ ಮನಸೋತ ಜನ
ಮಂಗಳೂರು: ಕಲೆ, ಸಾಹಿತ್ಯದ ಜೊತೆ ಸಾಂಸ್ಕೃತಿಕ ಸಂಘಟನೆಯಲ್ಲಿಯೂ ಪ್ರಸಿದ್ಧಿ ಪಡೆದಿರುವ ಮೂಡಬಿದರೆಯ ಪುತ್ತಿಗೆ ಬಳಿಯ ಸಂಪಿಗೆಯ ಡಾ ಪಿ ಯೋಗಿ ಸುಧಾಕರ ತಂತ್ರಿಗಳು ಇದೀಗ ಇನ್ನೊಂದು ಸಾಹಸ ಮಾಡಿದ್ದಾರೆ. ಪೌರಹಿತ್ಯ, ಜ್ಯೋತಿಷ್ಯದಲ್ಲಿಯೂ ಪ್ರಸಿದ್ಧಿ ಹೊಂದಿರುವ ಅವರು ಇದೀಗ `ಪಂಚಮುಖೀ ರುದ್ರಾಕ್ಷಿ ಮಹಿಮೆ’…
ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ
ಶಿವಮೊಗ್ಗ: ಹೃದಯಘಾತದಿಂದ ನಿಧನರಾದ ಬಿಜೆಪಿ ನಾಯಕ ಎಂ ಬಿ ಭಾನುಪ್ರಕಾಶ್ ಅವರ ಕಣ್ಣುಗಳನ್ನು ಸಂಬoಧಿಕರು ದಾನ ಮಾಡಿದ್ದಾರೆ. ಆ ಮೂಲಕ ಭಾನುಪ್ರಕಾಶ್ ಅವರ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗಿದೆ. ಸಾವಿನ ನೋವಿನಲ್ಲಿದ್ದರೂ ಅವರ ಕುಟುಂಬಸ್ಥರು ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗದ…
ದೇವರ ಹೆಸರಲ್ಲಿ ನಕಲಿ ಖಾತೆ!
ಮಂಗಳೂರು: ಆನ್ ಲೈನ್ ವಂಚಕರು ಇದೀಗ ದೇವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಭಕ್ತರನ್ನು ಯಾಮಾರಿಸುತ್ತಿದ್ದಾರೆ. ಕೊರಗಜ್ಜನ ಹೆಸರಿನಲ್ಲಿ ಖಾತೆ ತೆರೆದು ಹಣ ಯಾಚಿಸಿರುವ ಬಗ್ಗೆ ಅರಿತ ಕುತ್ತಾರು ದೇವಸ್ಥಾನ ಆಡಳಿತ ಮಂಡಳಿಯವರು ಭಕ್ತರಿಗೆ ಆನ್ ಲೈನ್ ಮೂಲಕ ಹಣ ಪಾವತಿಸದಂತೆ ಮನವಿ…
ಕನ್ನಡ ಮಕ್ಕಳ ಕಲರವ ಆಲಿಸಿದ ಸನ್ನಿ ಲಿಯೋನ್
ಹಾಸನ: ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಹಾಸನ ಬಂದಿದ್ದು, ಇಲ್ಲಿನ ಸರ್ಕಾರಿ ಶಾಲೆ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಚೆನ್ನರಾಯಪಟ್ಟಣದ ಕಬ್ಬಳ್ಳಿ ಗ್ರಾಮ ಪ್ರವೇಶಿಸಿದ ಸನ್ನಿಯನ್ನು ನೋಡಲು ಪಡ್ಡೆ ಹುಡುಗರು ಮುಗಿ ಬಿದ್ದಿದ್ದಾರೆ. ಕೆಲ ಹೊತ್ತು ಮಕ್ಕಳ ಜೊತೆ…







