ಯಲ್ಲಾಪುರ: ಶಿರನಾಳದ ಸುಬ್ರಾಯ ನಾರಾಯಣ ಹೆಗಡೆ ಎಂಬಾತರು ಚಲಿಸುತ್ತಿದ್ದ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸುಬ್ರಾಯ ಹೆಗಡೆ ಅವರ ಕೈ ಹಾಗೂ ತಲೆಗೆ ಪೆಟ್ಟಾಗಿದೆ.
ಪ್ರಸ್ತುತ ಧಾರವಾಡದ ಅಶೋಕ ನಗರದಲ್ಲಿ ವಾಸವಾಗಿರುವ ಸುಬ್ರಾಯ ಹೆಗಡೆ ಅಗಸ್ಟ 9ರಂದು ಯಲ್ಲಾಪುರಕ್ಕೆ ಆಗಮಿಸಿದ್ದರು. ಸಂಜೆ 5.45ರ ವೇಳೆಗೆ ಹುಬ್ಬಳ್ಳಿ ಕಡೆಯಿಂದ ಕಂಟೇನರ್ ಲಾರಿ ಓಡಿಸಿಕೊಂಡು ಬಂದ ಬೆಳಗಾವಿಯ ಸೌದತ್ತಿಯ ಪಕೀರಪ್ಪ ನಾಯ್ಕರ್ ಎಂಬಾತ ಸುಬ್ರಾಯ ಹೆಗಡೆ ಅವರ ಕಾರಿನ ಬಲಬದಿಗೆ ಗುದ್ದಿದ್ದು, ಕಾರು ಜಖಂ ಆಗಿದೆ. ಕೆ ಮಿಲನ್ ಹೋಟೆಲ್ ಬಳಿ ನಡೆದ ಅಪಘಾತ ಇದಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.








