ಶಿರಸಿ: ಐದು ರಸ್ತೆ ಬಳಿ ನಿಂತಿದ್ದ ಅರ್ಜುನ ಕಾಂತು (33) ಎಂಬಾತರ ಮೇಲೆ ಪ್ರಥ್ವಿ ನಾರ್ವೇಕರ್ ಹಾಗೂ ಇನ್ನಿತರರು ಸೇರಿ ಸ್ಕ್ರೂ ಡ್ರೈವರ್’ನಿಂದ ಕುತ್ತಿಗೆಗೆ ಚುಚ್ಚಿದ್ದಾರೆ. ಇದರಿಂದ ಗಾಯಗೊಂಡ ಅರ್ಜುನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರಸಿಯ ನಟರಾಜ ರಸ್ತೆಯ ಅರ್ಜುನ ವಿನಾಯಕ ಕಾಂತು ಸೊಸೈಟಿಯೊಂದರ ನೌಕರರು. ವಿವೇಕಾನಂದನಗರದ ಪ್ರಥ್ವಿ ಮನೋಜ ನಾರ್ವೇಕರ್ ಹಾಗೂ ಸಹಚರರು ಅವರ ಮೇಲೆ ದಬ್ಬಾಳಿಕೆ ನಡೆಸಿ ಹಲ್ಲೆ ಮಾಡಿದ್ದಾರೆ.
ಪ್ರಥ್ವಿ ನಾರ್ವೇಕರ್ ಮೊದಲಿನಿಂದಲೂ ಸಣ್ಣಪುಟ್ಟ ವಿಷಯಕ್ಕೆ ಅರ್ಜುನ್ ಕಾಂತು ಅವರನ್ನು ನಿಂದಿಸುತ್ತಿದ್ದರು. ಅಕ್ಟೊಬರ್ 27ರ ಸಂಜೆ 6.45ರ ಆಸುಪಾಸಿಗೆ ಅರ್ಜುನ್ ಅವರು ಐದು ರಸ್ತೆ ಬಳಿ ತಮ್ಮ ಸ್ನೇಹಿತರ ಜೊತೆ ನಿಂತಿದ್ದಾಗ ಅಲ್ಲಿ ಪ್ರಥ್ವಿ ನಾರ್ವೇಕರ್ ತಮ್ಮ ಸಹಚರರ ಜೊತೆ ಆಗಮಿಸಿದ್ದರು. ಆಗ ಅರ್ಜುನ’ರನ್ನು ನೋಡಿ ಹಿಯಾಳಿಸಿದ್ದು, ಹಿಯಾಳಿಸಿದರೂ ಸಿಟ್ಟು ಬಂದಿಲ್ಲವೇ? ಎಂದು ಪ್ರಶ್ನಿಸಿ ಹೊಡೆದಾಟ ನಡೆಸಿದರು.
ಎಲ್ಲರೂ ಸೇರಿ ಅರ್ಜುನನಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ನೋವು ಮಾಡಿದರು. ಅದಾದ ನಂತರ ಪ್ರಥ್ವಿ ನಾರ್ವೇಕರ್ ತಮ್ಮಲ್ಲಿದ್ದ ಸ್ಕೂç ಡ್ರೆöÊವರಿನಿಂದ ಕುತ್ತಿಗೆ ಬಳಿ ಚುಚ್ಚಿ ಗಾಯಗೊಳಿಸಿದರು. ಇದಾದ ನಂತರ ಜೀವ ಬೆದರಿಕೆ ಒಡ್ಡಿ ಅವರು ಅಲ್ಲಿಂದ ಹೋದ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಜುನ ಕಾಂತು ಪೊಲೀಸ್ ದೂರು ನೀಡಿದ್ದಾರೆ




