6
  • Latest

24 ಸಾವಿರ ಕದ್ದವನಿಗೆ 3 ಸಾವಿರ ರೂ ದಂಡ.. ಜೊತೆಗೆ ಜೈಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

24 ಸಾವಿರ ಕದ್ದವನಿಗೆ 3 ಸಾವಿರ ರೂ ದಂಡ.. ಜೊತೆಗೆ ಜೈಲು!

AchyutKumar by AchyutKumar
in ಸ್ಥಳೀಯ

ಕುಮಟಾ: ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ ಹಣವನ್ನು ದುರುಪಯೋಗ ಮಾಡಿದ ಅಂಚೆ ಇಲಾಖೆ ನೌಕರ ಚಂದ್ರು ಹಮ್ಮು ಗೌಡ (37) ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2012ರ ಅವಧಿಯಲ್ಲಿ ಸೊಪ್ಪಿನಳ್ಳಿ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದ ಚಂದ್ರು ಗೌಡ ಗ್ರಾಹಕರು ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಒಟ್ಟು 24647ರೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಜನರ ಪಾಸ್ಬುಕ್’ನಲ್ಲಿ ಹಣ ಜಮಾ ಆಗಿರುವುದನ್ನು ನಮೂದಿಸಿ ಮೊಹರು ಹಾಕಿದ್ದರು. ಆದರೆ, ಆ ಹಣವನ್ನು ಅಂಚೆ ಕಚೇರಿ ದಾಖಲೆಗಳಲ್ಲಿ ಕಾಣಿಸಿರಲಿಲ್ಲ.

ಸರ್ಕಾರಕ್ಕೆ ಜಮಾ ಮಾಡಬೇಕಾದ ಹಣವನ್ನು ಜಮಾ ಮಾಡದೇ ವಂಚಿಸಿದ ಬಗ್ಗೆ ಈ ಬಗ್ಗೆ ಅಂಚೆ ನಿರೀಕ್ಷಕ ದೀಪಕ ಎಚ್ ಟಿ ಪೊಲೀಸ್ ದೂರು ನೀಡಿದ್ದರು. ಅಂದಿನ ಪಿಎಸ್‌ಐ ವಸಂತ ಬಂಡೇಗಾರ್ ಹಾಗೂ ರೇವತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಮಂಜುನಾಥ ಬೋರ್ಕರ್ ಅಂಚೆ ಗ್ರಾಹಕರ ಪರವಾಗಿ ವಾದ ಮಂಡಿಸಿದ್ದರು. ಕುಮಟಾದ ಜೆ ಎಂ ಎಫ್ ಸಿ ನ್ಯಾಯಾಲಯ 17 ಸಾಕ್ಷಿಗಳ ವಿಚಾರಣೆ ನಡೆಸಿ 28 ದಾಖಲೆಗಳನ್ನು ಪರಿಶೀಲಿಸಿತು.

ನವೆಂಬರ್ 5ರಂದು `ಚಂದ್ರು ಹಮ್ಮು ಗೌಡ ತಪ್ಪು ಮಾಡಿರುವುದು ಸತ್ಯ’ ಎಂದು ನ್ಯಾಯಾಲಯ ಘೋಷಿಸಿತು. ಈ ವೇಳೆ `ತನ್ನ ದುಡಿಮೆಯೇ ಮೇಲೆ ಕುಟುಂಬದ ಎಲ್ಲರೂ ಜೀವನ ನಡೆಸುತ್ತಿದ್ದಾರೆ’ ಎಂದು ಚಂದ್ರು ಗೌಡ ಅಳಲು ತೋಡಿಕೊಂಡರು. `ತಪ್ಪು ತಿದ್ದಿಕೊಂಡು ಜೀವನ ನಡೆಸುವೆ’ ಎಂದು ಬೇಡಿಕೊಂಡರು. ಹೀಗಾಗಿ ನ್ಯಾಯಾಲಯ ಆರೋಪಿಗೆ 6 ತಿಂಗಳ ಶಿಕ್ಷೆ ಜೊತೆ 3 ಸಾವಿರ ರೂ ದಂಡ ಪಾವತಿಸುವಂತೆ ಆದೇಶಿಸಿತು.

ದಂಡ ಪಾವತಿಸಲು ವಿಫಲನಾದಲ್ಲಿ ಮತ್ತೆ ಒಂದುವರೆ ತಿಂಗಳ ಕಾಲ ಜೈಲು ಶಿಕ್ಷೆ ಮುಂದುವರೆಸುವ ಬಗ್ಗೆಯೂ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ

 

 

ShareSendTweetShare
Previous Post

LIC ಕೇಳುವ ನೆಪ: ನೀರು ಕೊಟ್ಟ ಮಹಿಳೆಯ ಶಾಪ | ಸಿದ್ದಾಪುರದಲ್ಲಿ ನಿರ್ದೋಷಿ.. ಶಿರಸಿಯಲ್ಲಿ ಅಪರಾಧಿ!

Next Post

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

Next Post

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.