ಅಂಕೋಲಾ: ರೈಲ್ವೆ ಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿದ್ದ ಪಯಣಿಗನೊಬ್ಬ ರೈಲಿನಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. ಸಾವನಪ್ಪಿದ ವ್ಯಕ್ತಿಯ ಹೆಸರು, ವಿಳಾಸ ಪೊಲೀಸರಿಗೂ ಗೊತ್ತಾಗಿಲ್ಲ.
ನ 7ರಂದು ಬೆಳಗ್ಗೆ 11.50ಕ್ಕೆ ಟ್ರಾಕ್‌ಮ್ಯಾನ್ ಸುರೇಶ ಪಟಗಾರ ಪುರ್ಲಕ್ಕಿಬೇಣದ ರೈಲ್ವೆ ಹಳಿಯಲ್ಲಿದ್ದ ಶವ ನೋಡಿದ್ದಾರೆ. ಅಂದಾಜು 35 ವರ್ಷದ ಪುರುಷನ ಮೈ-ಮುಖ ಎಲ್ಲವೂ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಕೆಳಗೆ ಬಿದ್ದ ನಂತರ ಇನ್ನೊಂದು ರೈಲಿಗೆ ಡಿಕ್ಕಿಯಾಗಿ ಆತ ಸಾವನಪ್ಪಿರುವ ಅನುಮಾನಗಳಿವೆ.
ಚಲಿಸುತ್ತಿರುವ ರೈಲಿನಲ್ಲಿ ಬಾಗಿಲ ಬಳಿ ನಿಂತಿದ್ದಾಗ ಬಾಗಿಲು ಬಡಿದು ಆತ ಸಾವನಪ್ಪಿರುವ ಸಾಧ್ಯತೆಗಳಿದ್ದು, ಆತನ ಗುರುತು ಪತ್ತೆ ಹಚ್ಚುವಂತೆ ಸುರೇಶ ಪಟಗಾರ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.




