ಕುಮಟಾ: ರಸ್ತೆ ಅಂಚಿನಲ್ಲಿ ನಿಂತು ಮಾತಾಡುತ್ತಿದ್ದ ಮೂವರ ಮೇಲೆ ಮಣಿಕಂಠ ಅಂಬಿಗ ಬೈಕ್ ಹಾರಿಸಿದ್ದು, ಆತನೂ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಮಾಸೂರಿನ ಕಲಭಾವಿಯ ವಿಶ್ವನಾಥ ಗಣಪು ನಾಯ್ಕ ಜೊತೆ ಅವರ ಸ್ನೇಹಿತರಾದ ರಾಜೀವ ನಾಯ್ಕ, ಆನಂದ ಅಂಬಿಗ ಉಪ್ಪಿನಪಟ್ಟಣ ಸೇತುವೆ ಬಳಿ ನಿಂತು ಮಾತನಾಡುತ್ತಿದ್ದರು. ನ 8ರ ರಾತ್ರಿ 12.30ರ ವೇಳೆಗೆ ಮಾಸೂರು ಕಡೆಯಿಂದ ಕಲಭಾವಿ ಕಡೆಗೆ ಬೈಕ್ ಓಡಿಸಿಕೊಂಡು ಬಂದ ಕತಗಾಲ ಬಳಿಯ ಮಣಿಕಂಠ ನಾರಾಯಣ ಅಂಬಿಗ ಆ ಮೂವರಿಗೂ ಬೈಕ್ ಗುದ್ದಿ ನೆಲಕ್ಕೆ ಬಿದ್ದಿದ್ದಾರೆ.
ಈ ಅಪಘಾತದ ಪರಿಣಾಮ ವಿಶ್ವನಾಥರ ಬಲಗೈ ಮುರಿದಿದೆ. ಬಲಕಾಲಿನ ಮೊಣಗಂಟಿಗೆ ಗಾಯವಾಗಿದೆ. ರಾಜೀವರ ಕಾಲಿನ ಹೆಬ್ಬರಳು ಮುರಿದಿದ್ದು, ಕೈಗೆ ಸಹ ಗಾಯವಾಗಿದೆ. ಆನಂದರ ಮೊಣಗಂಟಿಗೆ ಗಾಯವಾಗಿದ್ದಲ್ಲದೇ ಎಡಗಾಲು ಹಿಮ್ಮಡಿಗೆ ಪೆಟ್ಟಾಗಿದೆ. ಬೈಕ್ ಸವಾರ ಆನಂದ ಅಂಬಿಗರ ತಲೆಗೂ ಗಾಯವಾಗಿದೆ.
ಈ ಬಗ್ಗೆ ಪೊಲೀಸ್ ದೂರು ನೀಡಿದ ವಿಶ್ವನಾಥ ನಾಯ್ಕ ಅವರು ಹೊಟೇಲ್ ಕಾರ್ಮಿಕ. ಅಪಘಾತಕ್ಕೆ ಕಾರಣರಾದ ಮಣಿಕಂಠ ಅಂಬಿಗ ಬೇಕರಿ ಕೆಲಸದಾಳು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.




