6
  • Latest

ಅಡಿಕೆಗೆ ಕಾನ್ಸರ್ ಪ್ರಶಸ್ತಿ: ಸಾವಯವ ಅಡಿಕೆಗೆ ಮಾತ್ರ ಭವಿಷ್ಯ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಅಡಿಕೆಗೆ ಕಾನ್ಸರ್ ಪ್ರಶಸ್ತಿ: ಸಾವಯವ ಅಡಿಕೆಗೆ ಮಾತ್ರ ಭವಿಷ್ಯ!

AchyutKumar by AchyutKumar
in ಲೇಖನ
advt advt advt
ADVERTISEMENT

ಸಾವಯವ ಅಡಿಕೆ ಎಂಬ ಶಬ್ದ ಕೇಳಿದ ಕೂಡಲೇ ಶಿರಸಿ ಮತ್ತು ಮಲೆನಾಡು ಭಾಗದ ರೈತರಿಗೆ ಆಶ್ಚರ್ಯ ಅನ್ನಿಸುತ್ತದೆ. ಸಾವಯವ ಆರ್ಗನಿಕ್ ಶಬ್ದ ಸಾಫ್ಟ್ವೇರ್ ಇಂಜಿನಿಯರ್ ಗಳಲ್ಲಿ ಬೆಂಗಳೂರು ತಲುಪಿದವರಿಗೆ ಅತ್ಯಂತ ಪ್ರಿಯ ಶಬ್ದ. ಅಡಿಕೆಗೂ ಸಾವಯುವ ಬಂತಾ ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ.

ಖಂಡಿತವಾಗಿಯೂ ಸಾವಯವ ಅಡಿಕೆ ಮುಂದೊoದು ದಿನ ಎಲ್ಲ ಬೆಳೆಗಾರರಿಗೂ ಕಣ್ಣು ತೆರೆಸಲಿದೆ. ಸಾಮಾನ್ಯವಾಗಿ ಸಾವಯವ ಅಂದರೆ ಸಾಮಾನ್ಯ ಅರ್ಥದಲ್ಲಿ ರಾಸಾಯನಿಕ ಗಳ ಉಪಯೋಗ ಇಲ್ಲದೆ ಬೆಳೆದಂತಹ ಬೆಳೆ ಎಂದು ಅರ್ಥ. ಇದು ಮುಂದೊAದು ದಿನ ಅಡಿಕೆಗೂ ಬರಲಿದೆ. ಯಾಕೆಂದರೆ ರಾಸಾಯನಿಕಗಳ ಬಳಕೆ ಗರಿಷ್ಠ ತಲುಪಿದಾಗ ಸಾವಯವ ಅಡಿಕೆ ಹೇಳುವಂತಹ ಒಂದು ವಾದ ಬರುತ್ತದೆ. ಅಡಿಕೆಯ ದರ ಈಗ ಗರಿಷ್ಠ ಇದೆ ಎನ್ನಬಹುದು. ಗರಿಷ್ಠ ದರ, ಗರಿಷ್ಠ ಬೆಳೆ, ಕನಿಷ್ಠ ವೇಳೆ, ಬಣ್ಣ ಹೇಳುವಂಥ ವಾದಗಳ ಮಧ್ಯ ಅಡಿಕೆ ತನ್ನ ಮಾನವನ್ನ ಹರಾಜು ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ADVERTISEMENT
ADVERTISEMENT

ಗರಿಷ್ಠ ದರ: ಬಹಳಷ್ಟು ಜನರಿಗೆ ಗರಿಷ್ಠ ದರ ಅಂದರೆ ಏನು ಅಂತ ಪ್ರಶ್ನೆ ಬೀರಬಹುದು ಅಡಿಕೆಯ ಯಾವುದೇ ಭಾಗವೂ ಕೂಡ ದರರಹಿತವಾಗಿ ಮಾರಾಟ ಆಗೋದಿಲ್ಲ, ಉತ್ತಮ ದರ್ಜೆಯ ಅಡಿಕೆಯಿಂದ ಹಿಡಿದು ಕೊಳೆಯಡಿಕೆಯವರೆಗೂ ಎಲ್ಲವೂ ಖರೀದಿದಾರರಿದ್ದಾರೆ ಹಾಗೂ ಮಾರಾಟ ಮಾಡುವವರಿಂದಲೂ ಮಾರಾಟವಾಗುತ್ತದೆ.

ಗರಿಷ್ಠ ಬೆಳೆ: ವರ್ಷದಲ್ಲಿ ಒಂದೇ ಬೆಳೆ ಬರುವ ಅಡಿಕೆ ರೈತನಿಗೆ ಜೀವನಾಡಿಯಾಗಿದೆ ಹಾಗಾಗಿ ಗರಿಷ್ಠ ಬೆಳೆ ಬರಬೇಕೆಂಬ ಹಾಗೂ ಬಂದAತಹ ಬೆಳೆ ಉಳಿಯಬೇಕೆಂಬ ಪ್ರತಿಯೊಂದು ಪ್ರಯತ್ನವನ್ನು ಮಾಡಲು ಅವನು ಹಿಂಜರಿಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಬೋರ್ಡೂ ಮಿಶ್ರಣವನ್ನು ಅಡಿಕೆಗೆ ಸಿಂಪಡಿಸಲಾಗುತ್ತದೆ . ಕೆಲವು ತೋಟಗಾರಿಕಾ ಮತ್ತು ಕೃಷಿ ತಜ್ಞರ ಪ್ರಕಾರ ಇದು 1% ಆಗುವಂತೆ ಸಿಂಪಡಿಸಬೇಕು. 1% -5% ತಲುಪಬಹುದು ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಇನ್ನು ಉತ್ತಮ ದರ್ಜೆಯ ಬೋರ್ಡೂ ಮಿಶ್ರಣವಾದರೆ 45 ದಿನಗಳ ಕಾಲ ಇದರ ಪ್ರಭಾವ ಇರುತ್ತದೆ ಎಂದು ವಾಡಿಕೆಯ ತಿಳುವಳಿಕೆ. ಈ ದರ್ಜೆಯ ಇಳಿಕೆಯಿಂದಾಗಿ ಇದರ ಪ್ರಭಾವದ ದಿನಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಮಾರ್ಚ್ ತಿಂಗಳಲ್ಲಿ ಉಪಯೋಗಿಸುವ ರಾಸಾಯನಿಕಗಳು ಬೇರೆ ಇವೆ.

ಕನಿಷ್ಠ ವೇಳೆ: ಹಸಿ ಅಡಿಕೆಯಿಂದ ಹಿಡಿದು ಪೂರ್ಣ ಪ್ರಮಾಣದಲ್ಲಿ ಪ್ರಕ್ರಿಯೆ ಮಾಡದಂತಹ ಅಡಿಕೆಯ ಖರೀದಿ ಆಗುತ್ತದೆ . ಖರೀದಿಸಿದ ವ್ಯಾಪಾರಸ್ಥರು ಅಡಿಕೆಗೆ ಆದಷ್ಟು ಬೇಗ ಪೇಟೆಗೆ ಪೂರ್ಣ ಪ್ರಮಾಣದಲ್ಲಿ ಮಾರಾಟಕ್ಕೆ ತರಲು ಯಾವ ಯಾವ ಪ್ರಯತ್ನ ಗಳಿವೆಯೋ ಅದನ್ನು ಪೂರ್ಣಗೊಳಿಸಿ ಕನಿಷ್ಠ ವೇಳೆಯಲ್ಲಿ ಪೇಟೆಗೆ ಮಾರಾಟಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಆದಷ್ಟು ಬೇಗನೆ ಒಣಗಲು ಕೆಲವು ಕಳೆನಾಶಕಗಳನ್ನು ಬಳಸುತ್ತಾರೆ ಎಂದು ಸುದ್ದಿ ಇದೆ.

Advertisement. Scroll to continue reading.
Advertisement. Scroll to continue reading.

ಸುಂದರತೆ ಮತ್ತು ಬಣ್ಣ: ಅಡಿಕೆಯನ್ನು ವ್ಯಾಪಾರಸ್ಥರು ಚಲನಚಿತ್ರದ ನಾಯಕ ನಟಿಯಂತೆ ಅಡಿಕೆಯನ್ನು ವರ್ಣಿಸುತ್ತಾರೆ ಯಾವ ಪರಿಸ್ಥಿತಿಗೆ ಯಾವ ದೃಶ್ಯಕ್ಕೆ ಹೇಗೆ ನಾಯಕ ನಟಿಯನ್ನು ರೂಪಿಸಲಾಗುತ್ತಿದೆ, ಅದೇ ರೀತಿ ಯಾವ ಭಾಗದಲ್ಲಿ ಯಾವ ಖರೀದಿದಾರರಿಂದ ಹೇಗೆ ಬೇಡಿಕೆ ಇರುತ್ತದೆ. ಆ ರೀತಿ ಬಣ್ಣಗೊಳಿಸಲಾಗುತ್ತದೆ. ಬಣ್ಣಗೊಳಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕ ಬಣ್ಣಗಳನ್ನು ಕೂಡ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಪಾರಂಪರಿಕವಾಗಿ ಅಡಿಕೆಯ ಜೋಗರು ಅಥವಾ ತೊಗರಿಂದಲೇ ಹೆಚ್ಚಿನ ಬಣ್ಣ ಬರುವಂತೆ ಮಾಡಲಾಗುತ್ತಿತ್ತು ಅಂತಹ ಕೆಲವೇ ಕೆಲವು ವ್ಯಾಪಾರಸ್ಥರು ಈಗ ಇದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಕೊಳೆಯಡಿಕೆಯೆಂದು ಹೇಳಲ್ಪಡುವಂತಹ ಅತ್ಯಂತ ಕೊಳೆ ಅಡಿಕೆಯು ಹೆಚ್ಚಿನ ಮಾನದಲ್ಲಿ ವ್ಯಾಪಾರ ಆಗುತ್ತದೆ. ಅಡಿಕೆ ಬಣ್ಣಕ್ಕೆ ಬಣ್ಣ ಬರುವಂತಹ ರೆಡ್ಡಒಕ್ಸಾಯಿಡನ ಉಪಯೋಗ ನಡೆಯುತ್ತದೆಯೋ ಎಂಬ ಅನುಮಾನ ಹಲವರಿಂದ.

ಮೇಲ್ಕoಡ ವಿಷಯಗಳ ಜೊತೆಗೆ ಪಾರಂಪರಿಕ ಅಡಿಕೆ ಬೆಳೆಗಾರರಿಂದ ಅಡಿಕೆ ಬೆಳೆಯುವ ತೋಟಗಳು ಪಾರಂಪರಿಕ ಅಡಿಕೆ ಬೆಳೆಗಾರರಲ್ಲದವರಿಂದ ಖರೀದಿಯಾಗುತ್ತಿರುವುದು, ಹಣದ ನಿವೇಶಕ್ಕಾಗಿ ಕೃಷಿ ಭೂಮಿ ಖರೀದಿಯಾಗುತ್ತಿರುವುದು ಕಾರಣ. ಅಡಿಕೆ ವ್ಯವಹಾರಕ್ಕೂ ದೇಶ ಮೊದಲು ಎಂಬ ಮಾನಸಿಕತೆಯ ಅವಶ್ಯಕತೆ ಇಂದು ತೀವ್ರವಾಗಿದೆ. ತೆರಿಗೆ ತಪ್ಪಿಸಿ ನಡೆಯುವ ಅಡಿಕೆ ವ್ಯವಹಾರ ನಿಲ್ಲಬೇಕೆಂದು ಕೆಲವು ಪಾರಂಪರಿಕ ಅಡಿಕೆ ವ್ಯಾಪಾರಸ್ಥರು ಮುಖ್ಯವಾಗಿ ನೀಡುವ ಕಾರಣವಾಗಿದೆ. ಇದೇ ರೀತಿ ಮುಂದುವರೆದರೆ ಈಗೀರುವ ದರ ಇರುವಂತಹ ಅಡಿಕೆ ಪಾತಾಳಕ್ಕೆ ಮುಟ್ಟಲು ಬಹಳ ದಿನ ದೂರವಿಲ್ಲ. ಈ ಜಾಗೃತೆಯನ್ನು ಬೆಳೆಗಾರರು, ಖರೀದಿದಾರರು ಗಮನದಲ್ಲಿ ಇರಿಸಿ ಅಡಿಕೆಯ ಮಾನಕ್ಕೆ ಮಾನ ಬರುವಂತೆ ಯೋಚಿಸುವ ಯೋಜಿಸುವ ಅವಶ್ಯಕತೆ ಅಡಿಕೆ ಬೆಳೆಗಾರ ರೈತರು ವ್ಯಾಪಾರಸ್ಥರು ಹಾಗೂ ಅಡಿಕೆಯ ಸಂಬoಧಿತ ಸಂಸ್ಥೆಗಳ ಹೆಗಲ ಮೇಲಿದೆ ಎಂಬ ಅಭಿಪ್ರಾಯ ಕೆಲವು ಬುದ್ಧಿ ಜೀವಿಗಳದ್ದು.

ಈ ಎಲ್ಲಾ ಅಂಶಗಳ ಉಪಯೋಗವನ್ನು ಗರಿಷ್ಠ ಮಿತಿಯಲ್ಲಿ ಮಾಡಿದರೆ ಮೊನ್ನೆ ಮೊನ್ನೆ ವಿಶ್ವಸಂಸ್ಥೆಯಿoದ ಬಂದoತಹ ವರದಿಯಂತೆ ಸತ್ಯವೂ ಆಗಬಹುದು. ಅಂದರೆ ಅಡಿಕೆಯಿಂದ ಕ್ಯಾನ್ಸರ್ ಬರಬಹುದು ಎಂಬ ವರದಿ ಏನಿದೆ? ಅದು ಅಂದರೆ ಪಾರಂಪರಿಕ ಅಡಿಕೆ ಕೃಷಿ, ಪಾರಂಪರಿಕ ಅಡಿಕೆ ರೈತ ಪ್ರದೇಶದ ವನ್ನು ಬಿಟ್ಟು ಆಧುನಿಕ, ಹೊಸ ರಾಸಾಯನಿಕಗಳಿಂದ ಕೂಡಿದ ತಂತ್ರಜ್ಞಾನದ ಮೂಲಕ ಅಡಿಕೆಯ ಕೃಷಿ ಅಡಿಕೆಯ ಮಾನ ಹರಾಜು ಹಾಕುವುದರಲ್ಲಿ ಅನುಮಾನವೇ ಇಲ್ಲ.

ಇನ್ನೂ ಕೆಲವರ ಅಭಿಪ್ರಾಯದಂತೆ ಹಸಿ ಅಡಿಕೆ ಟೆಂಡರ್, ಫಲ ಗುತ್ತಿಗೆ ಖರೀದಿದಾರರು, ಕೆಲವು ರೈತರು ತುರ್ತಾಗಿ ಪೂರ್ಣ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ತರುವ ಮತ್ತು ಬರುವ ಪ್ರಕ್ರಿಯೆ ಪೂರ್ಣಗೊಳಿಸುವ ಗಡಿಬಿಡಿಯಲ್ಲಿ ಈ ಎಲ್ಲಾ ವಾಮ ಮಾರ್ಗದ ಉಪಾಯಗಳನ್ನ ಬಳಸುತ್ತಾರೆ ಎಂಬ ಅನಿಸಿಕೆ ಇನ್ನೂ ಕೆಲವು ಪಾರಂಪರಿಕ ಬೆಳಗಾರರದ್ದು.

ಇನ್ನೂ ಕೆಲವು ರೈತರ ಅಭಿಪ್ರಾಯದಂತೆ ದೋಟಿ ಪ್ರಯೋಗವು ಇದಕ್ಕೆ ಮುಂದೊAದು ದಿನ ಕಾರಣವಾಗಬಹುದು ಎಂದು ಮತ್ತು ದೋಟಿಯಿಂದ ಬೋರ್ಡೋ ಮಿಶ್ರಣವನ್ನು ಸಿಂಪಡಣೆ ಮಾಡುವಾಗ ಗಿಡ ಹಾಗೂ ಗೊನೆಯನ್ನು ಬಿಟ್ಟು ಸಿಂಪಡಣೆಯ ದ್ರಾವಣ ಕೆಳಗೆ ನೆಲಕ್ಕೆ ಬಂದು ಮಣ್ಣಿಗೆ ಸೇರುತ್ತದೆ . ಇದು ಕೂಡ ಮುಂದೊ0ದು ದಿನ ಮಣ್ಣಿನಲ್ಲಿರುವ ಬೋರ್ಡೋ ದ್ರಾವಣದ ಅಂಶವನ್ನು ಹೆಚ್ಚು ಎಂದು ಹೇಳುವಂತೆ ಮಾಡಬಹುದು. ಮುಂದೊ0ದು ದಿನ ಹೊಸ ವಿಶ್ವಸಂಸ್ಥೆಯ ವರದಿಗೆ ಇದು ಕೂಡ ಗ್ರಾಸವಾಗಬಹುದು.

ಪಾರಂಪರಿಕ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಮಾರಾಟದ ಮೊದಲು ಅಡಿಕೆಯ ರಾಸಾಯನಿಕ ವಿಶ್ಲೇಷಣೆ ಮುಂದೊAದು ದಿನ ಕಡ್ಡಾಯವಾಗಬಹುದು. ದೇವರ ಪೂಜೆಯಲ್ಲಿ ಪೂಗಿ ಫಲ ಎಂದು ಹೇಳಲ್ಪಡುವಂತಹ ಅಡಿಕೆಗೆ ಕ್ಯಾನ್ಸರ್‌ಕಾರಕ ಎನ್ನುವ ಪ್ರಶಸ್ತಿಯಿಂದ ಆದಷ್ಟು ಬೇಗನೆ ಮುಕ್ತಗೊಳಿಸುವ ಎಲ್ಲ ಪ್ರಯತ್ನವನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಅಡಿಕೆಯ ಸಹಕಾರಿ ಸಂಸ್ಥೆಗಳು ಪ್ರಯತ್ನಪೂರ್ವಕ ಮಾಡಬೇಕಿದೆ. ಆ ಮೂಲಕ ಪಾರಂಪರಿಕ ಅಡಿಕೆ ಬೆಳೆಗಾರ ರೈತರ ರಕ್ಷಣೆಗೆ ಮುಂದಾಗಬೇಕಿದೆ.

ಕೊನೆಯ ಮಾತು: ಗರಿಷ್ಠ ದರ ,ಗರಿಷ್ಠ ಬೆಳೆ, ಕನಿಷ್ಠ ವೇಳೆ,ಸುಂದರತೆ ಮತ್ತು ಬಣ್ಣ ಇವೆಲ್ಲವುಗಳ ಗಡಿಬಿಡಿ ಮಧ್ಯ ಅಡಿಕೆ ತನ್ನ ಸಾವಯವತೆಯನ್ನು ಕಳೆದುಕೊಳ್ಳುತ್ತಿದೆಯೋ? ಎಂಬ ಅನುಮಾನ ಹಲವರಿಂದ. ಬೋರ್ಡೂ ಮಿಶ್ರಣ, ಕಳೆನಾಶಕ, ರೆಡ್ಡಒಕ್ಸಾಯಿಡ ಇನ್ನಿತರ ರಾಸಾಯನಿಕಗಳಿಂದ ಅಡಿಕೆಯ ಮಾನ ಮುಂದೊ0ದು ದಿನ ಹರಾಜು ಆಗಬಹುದೇ? ಎಂಬ ಪ್ರಶ್ನೆ ಕೆಲವು ಅಡಿಕೆ ಬೆಳೆಗಾರರರದ್ದು.

ಡಾ ರವಿಕಿರಣ ಪಟವರ್ಧನ ಶಿರಸಿ.

ShareSendTweetShare
ADVERTISEMENT
Previous Post

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

Next Post

ಈ ಸರ್ಕಾರಿ ಶಾಲೆ ಇನ್ನಷ್ಟು ಸ್ಮಾರ್ಟ: ಮಕ್ಕಳ ಕಲಿಕೆಗೆ ಇಂಟರ್‌ನೆಟ್ ಸೇವೆ!

Next Post

ಈ ಸರ್ಕಾರಿ ಶಾಲೆ ಇನ್ನಷ್ಟು ಸ್ಮಾರ್ಟ: ಮಕ್ಕಳ ಕಲಿಕೆಗೆ ಇಂಟರ್‌ನೆಟ್ ಸೇವೆ!

ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾ

Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

ಮೂರೇ ತಿಂಗಳಿನಲ್ಲಿ ಮುಕ್ತಾಯಗೊಂಡ ಕೋಟಿ ವೆಚ್ಚದ ದತ್ತ ಮಂದಿರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.