ಶಿರಸಿ: ಅದೃಷ್ಟದ ಆಟ ಎಂಬ ಹೆಸರಿನಲ್ಲಿ ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಶಿರಸಿ ವಿವೇಕಾನಂದ ನಗರದ ಗಣಪತಿ ಶಾಂತಾರಾಮ ನಾಯ್ಕ ಬಸ್ ಡಿಪೋ ಮುಂದಿನ ಶಿರಸಿ-ಹುಬ್ಬಳ್ಳಿ ರಸ್ತೆಗೆ ಹೊಂದಿಕೊoಡು ಪಾನ್ ಅಂಗಡಿ ನಡೆಸುತ್ತಿದ್ದರು. ಅಲ್ಲಿ ಬರುವ ಜನರನ್ನು ಕೈ ಸನ್ನೆ ಮೂಲಕ ಕರೆದು ಮಟ್ಕಾ ಆಡುವಂತೆ ಪ್ರೇರೇಪಿಸುತ್ತಿದ್ದರು. `1 ರೂಪಾಯಿಗೆ 80 ರೂ ನೀಡುವೆ’ ಎಂಬ ಆಮೀಷ ಒಡ್ಡಿ ಹಣ ಪಡೆಯುತ್ತಿದ್ದರು.
ನ 29ರ ರಾತ್ರಿ ಇದನ್ನು ಗಮನಿಸಿದ ಪಿಎಸ್‌ಐ ರತ್ನಾ ಕುರಿ ದಾಳಿ ನಡೆಸಿದರು. ಆಗ ಜನರಿಂದ ಸಂಗ್ರಹಿಸಿದ್ದ 1050ರೂ ಹಣದ ಜೊತೆ ಮಟ್ಕಾ ಸಾಮಗ್ರಿಗಳನ್ನು ಅವರು ವಶಕ್ಕೆ ಪಡೆದರು.




