6
  • Latest

ಅನಧಿಕೃತ ಗೈರು-ಕರ್ತವ್ಯದ ವೇಳೆ ಮದ್ಯಪಾನ: ಶಿಕ್ಷಕನಿಗೆ ಅಮಾನತು ಶಿಕ್ಷೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನಧಿಕೃತ ಗೈರು-ಕರ್ತವ್ಯದ ವೇಳೆ ಮದ್ಯಪಾನ: ಶಿಕ್ಷಕನಿಗೆ ಅಮಾನತು ಶಿಕ್ಷೆ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಈ ಹಿಂದೆ ನೌಕರರ ಸಂಘದ ತಾಲೂಕು ಅಧ್ಯಕ್ಷ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸೇರಿ ವಿವಿಧ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದ ಪ್ರಕಾಶ ನಾಯಕ ಅವರನ್ನು ವಿವಿಧ ಕಾರಣ ನೀಡಿ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಕರ್ತವ್ಯದ ಅವಧಿಯಲ್ಲಿ ಮದ್ಯಪಾನ, ಶಾಲೆ ಒಳಗೆ ವ್ಯಸನಿಗಳ ಪ್ರವೇಶಕ್ಕೆ ಅವಕಾಶ, ಅನಧಿಕೃತ ಗೈರು ಹಾಜರಿ ಕಾರಣದಿಂದ ಉಪಳೇಶ್ವರ ಬಳಿಯ ಬಾಳೆಗದ್ದೆ ಶಾಲೆ ಶಿಕ್ಷಕ ಪ್ರಕಾಶ ನಾಯಕ ಅವರು ಸೇವೆಯಿಂದ ಅಮಾನತಾಗಿದ್ದಾರೆ.

ಪ್ರಕಾಶ ನಾಯಕ ಅವರು ಈ ಹಿಂದೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದರು. ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸಹ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ ಅವರು ಎಲ್ಲರ ಜೊತೆ ಅನ್ಯೋನ್ಯವಾಗಿದ್ದರು. ಪ್ರಕಾಶ ನಾಯಕ ಅವರನ್ನು ಉಪಳೇಶ್ವರ ಬಳಿಯ ಬಾಳೆಗದ್ದೆ ಶಾಲೆಗೆ ಶಿಕ್ಷಣ ಇಲಾಖೆ ಕಳುಹಿಸಿತ್ತು. ಆರಂಭದಲ್ಲಿ ಊರಿನವರ ಜೊತೆ ಉತ್ತಮ ಬಾಂದವ್ಯವನ್ನು ಅವರು ಬೆಳಸಿಕೊಂಡಿದ್ದರು. ಆದರೆ, ಕ್ರಮೇಣ ಆ ಅನ್ಯೋನ್ಯತೆ ದೂರವಾಗಿತ್ತು.

ADVERTISEMENT
ADVERTISEMENT

ನಂದೂಳ್ಳಿಯ ಸಮನ್ವಯ ಸಂಪನ್ಮೂಲ ಅಧಿಕಾರಿಗಳು ಮೂರು ಬಾರಿ ಬಾಳೆಗದ್ದೆ ಶಾಲೆಗೆ ಭೇಟಿ ನೀಡಿದಾಗಲೂ ಅಲ್ಲಿ ಶಿಕ್ಷಕ ಪ್ರಕಾಶ ನಾಯಕ ಇರಲಿಲ್ಲ. ಅಧಿಕೃತ ರಜೆಯನ್ನು ಸಹ ಪಡೆದಿರಲಿಲ್ಲ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಸಹ ಪ್ರಕಾಶ ನಾಯಕ ಅವರು `ಮದ್ಯಪಾನ ಮಾಡಿ ಶಾಲೆಗೆ ಬರುತ್ತಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. `ತಮ್ಮೊಂದಿಗೆ ಇತರೆ ಕುಡುಕರನ್ನು ಸಹ ಅವರು ಶಾಲೆಗೆ ಕರೆತರುತ್ತಾರೆ’ ಎಂದು ಆಪಾದಿಸಿದ್ದರು. ಇದರಿಂದ ಶಾಲಾ ವಾತಾವರಣ ಹದಗೆಟ್ಟಿರುವ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಅಡುಗೆ ಸಿಬ್ಬಂದಿ ಹಾಗೂ ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತಿರುವ ಬಗ್ಗೆ ವಿವರಿಸಿದ್ದರು.

Advertisement. Scroll to continue reading.
Advertisement. Scroll to continue reading.

ಶಾಲೆಗೆ ಅನಿರೀಕ್ಷಿತವಾಗಿ ಸಂಪನ್ಮೂಲ ವ್ಯಕ್ತಿ ಭೇಟಿ ನೀಡಿದಾಗ ಹಾಜರಾತಿಯಲ್ಲಿ ಸಹಿ ಹಾಕಿ, ಅನಧಿಕೃತ ಗೈರಾಗಿರುವುದು ಗಮನಕ್ಕೆ ಬಂದಿತ್ತು. ದುಶ್ಚಟಗಳಿಗೆ ದಾಸರಾಗಿರುವ ಶಿಕ್ಷಕರು ಶಾಲೆಗೆ ಬಂದು ಸಹಿ ಮಾಡಿ ಪಾಠ ಮಾಡದೇ ಮರಳುತ್ತಿರುವ ಬಗ್ಗೆ ಸಂಪನ್ಮೂಲ ವ್ಯಕ್ತಿ ಸಹ ವರದಿ ಸಲ್ಲಿಸಿದ್ದರು. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿದ್ದು, ಶಾಲಾ ವಾತಾವರಣವೂ ಹಾಳಾದ ಬಗ್ಗೆ ಊರಿನವರು ಕಳವಳ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಕಾಶ ನಾಯಕ ಅವರಿಗೆ ಶಿಕ್ಷಣಾಧಿಕಾರಿ ಕಚೇರಿಯಿಂದ ಅಗಸ್ಟ 23ರಂದು ನೋಟಿಸ್ ನೀಡಿದ್ದು, ನವೆಂಬರ್ 21ರಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಾರಿ ಬಸವರಾಜ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ನ 21ರಂದೇ ಅಮಾನತು ಆದೇಶವಾಗಿದ್ದರೂ ಈ ವಿಷಯ ಹೊರ ಬಾರದಂತೆ ರಹಸ್ಯ ಕಾಪಾಡಿಕೊಳ್ಳಲಾಗಿತ್ತು.

 

ShareSendTweetShare
ADVERTISEMENT
Previous Post

ಕಾಲು ಎಡವಿ ಬಿದ್ದು ಸಾವನಪ್ಪಿದ ವಿಕಲಚೇತನ

Next Post

ಶೌಚಕ್ಕೆ ಹೋಗುವಾಗ ಹುಷಾರು: ಇಲ್ಲಿ ಹಾವುಗಳಿವೆ!

Next Post

ಶೌಚಕ್ಕೆ ಹೋಗುವಾಗ ಹುಷಾರು: ಇಲ್ಲಿ ಹಾವುಗಳಿವೆ!

ಕುಮಟಾ ಆಸ್ಪತ್ರೆ: ಲಭ್ಯವಿಲ್ಲದ ವೈದ್ಯರ ಪಟ್ಟಿಯೇ ದೊಡ್ಡದು!

ಮನುಷ್ಯನಿಗೆ ಗುದ್ದಿದ ಹಿಟಾಚಿ: ಆ ವ್ಯಕ್ತಿ ಇನ್ನೂ ವಿಕಲಚೇತನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.