ಯಲ್ಲಾಪುರ: ಸವಣಗೇರಿ ಶಾಲೆಗೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಫೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಇದರೊಂದಿಗೆ ಅಪರಾಧ ತಡೆಗೆ ಸಾರ್ವಜನಿಕರ ಪಾತ್ರದ ಬಗ್ಗೆ ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು.
ಶಾಲೆಯಲ್ಲಿ ಹೊಸದಾಗಿ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಟಿವಿ ಪರದೆಯನ್ನು ಬಳಸಿಕೊಂಡು ಇಂಗ್ಲಿಷ್ ಗ್ರಾಮರ್ ಕುರಿತು ಶಿಕ್ಷಕಿ ಪೂರ್ಣಿಮಾ ನಾಯ್ಕ ಈ ವೇಳೆ ವಿವರಿಸಿದರು. ಶಾಲೆ ಎಸ್‌ಡಿಎಂಸಿ ಸದಸ್ಯ ರವಿ ನಾಯಕ, ಪ್ರಮುಖರಾದ ಪರಮೇಶ್ವರ ಭಟ್ಟ ಹಾಜರಿದ್ದರು.
ಮುಖ್ಯ ಶಿಕ್ಷಕ ಸಂಜೀವಕುಮಾರ ಹೊಸಕೇರಿ, ಶಿಕ್ಷಕರಾದ ಗೀತಾ ಪಟಗಾರ, ಪವಿತ್ರ ಆಚಾರಿ ಇತರರು ವಿವಿಧ ವಿಷಯಗಳ ಕುರಿತು ಮಾತನಾಡಿದರು.




