ಅಂಕೋಲಾ: ಪೆಟ್ರೊಲ್ ಬಂಕಿಗೆ ಇಂಧನ ಸಾಗಿಸುತ್ತಿದ್ದ ಲಾರಿ ಹಟ್ಟಿಗೇರಿ ಬಳಿ ಅಪಘಾತವಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಪೆಟ್ರೋಲ್ ಮೋರಿ ಪಾಲಾಗಿದೆ.
ಅಂಕೋಲಾದಿoದ ಕಾರವಾರಕ್ಕೆ ಸಂಚರಿಸುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಚಲಿಸುತ್ತಿತ್ತು. ಈ ಟ್ಯಾಂಕರನ್ನು ಪುತ್ತೂರಿನ ರಕ್ಷಿತ ಆಚಾರ್ಯ ಓಡಿಸುತ್ತಿದ್ದರು. ಚೇತನ್ ಎಂಬಾತರು ಈ ಟ್ಯಾಂಕರಿನಲ್ಲಿ ಕ್ಲೀನರ್ ಆಗಿದ್ದರು.
ಹಟ್ಟಿಕೇರಿ ಟೋಲ್ ಗೇಟ್ ಬಳಿ ಹೆದ್ದಾರಿ ಎಡಬದಿ ನಿಂತಿದ್ದ ಲಾರಿಗೆ ಪೆಟ್ರೋಲ್ ತುಂಬಿದ ಟ್ಯಾಂಕರ್ ಗುದ್ದಿತು. ಆ ಲಾರಿಯಲ್ಲಿದ್ದ ಚಾಲಕ ಮಹಮದ್ ಗೌಸ್ ಲಾರಿಯಿಂದ ಹಾರಿ ಜೀವ ಉಳಿಸಿಕೊಂಡರು. ಗುದ್ದಿದ ರಭಸಕ್ಕೆ ಟ್ಯಾಂಕರ್ ಪಲ್ಟಿಯಾಗಿದ್ದು, ಒಳಗಿದ್ದ ಪೆಟ್ರೋಲ್ ಗಟಾರದ ಪಾಲಾಯಿತು.
ಮಂಗಳೂರಿನ ಕುಮಾರ ಎಜನ್ಸಿಸ್ ಲೆಕ್ಕಾಧಿಕಾರಿ ರಾಜೇಂದ್ರ ಪೂಜಾರಿ ಅಪಘಾತಕ್ಕೆ ಕಾರಣನಾದ ರಕ್ಷಿತ ಆಚಾರ್ಯ ವಿರುದ್ಧ ಪೊಲೀಸ್ ದೂರು ನೀಡಿದರು.




