6
  • Latest

ಪ್ರವೇಶವಿಲ್ಲದ ಗರ್ಭಗುಡಿಯೊಳಗೆ ಕಳ್ಳರ ಪ್ರವೇಶ: ಬೀಗದ ಬಂಧನದಲ್ಲಿದ್ದ ಮೂರ್ತಿಗಳು ಕಳ್ಳರ ಪಾಲು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರವೇಶವಿಲ್ಲದ ಗರ್ಭಗುಡಿಯೊಳಗೆ ಕಳ್ಳರ ಪ್ರವೇಶ: ಬೀಗದ ಬಂಧನದಲ್ಲಿದ್ದ ಮೂರ್ತಿಗಳು ಕಳ್ಳರ ಪಾಲು!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಅಪಾರ ದೈವಭಕ್ತರಾಗಿರುವ ಗ್ರಾ ಪಂ ಅಧಿಕಾರಿ ವಿಠ್ಠಲ ಬಾಂದಿ ಅವರ ಮನೆಯಲ್ಲಿನ ದೇವರ ಮೂರ್ತಿಗಳು ಕಳ್ಳತನವಾಗಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ಅಳವಡಿಸಿದ ಬೀಗ ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಅಲ್ಲಿನ ಅಪರೂಪದ ವಿಗ್ರಹಗಳನ್ನು ದೋಚಿದ್ದಾರೆ.

ಕಳೆದ ಒಂದು ವರ್ಷದಿಂದ ವಿಠ್ಠಲ ಬಾಂದಿ ಅವರು ಅಚವೆ ಗ್ರಾಮ ಪಂಚಾಯತದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹಿಲ್ಲೂರಿನ ತಿಂಗಳಬೈಲಿನಲ್ಲಿ ಮನೆ ಮಾಡಿರುವ ಅವರು ನಿತ್ಯ ಅಲ್ಲಿಂದಲೇ ಕಚೇರಿ ಓಡಾಟ ಮಾಡುತ್ತಾರೆ. ಅವರ ಮನೆಯಲ್ಲಿ ನೂರಾರು ಬಗೆಯ ದೇವರ ವಿಗ್ರಹಗಳಿದ್ದು, ಆ ಪೈಕಿ ಹಲವು ವಿಗ್ರಹಗಳು ಕಾಣೆಯಾಗಿವೆ.

ಭಾನುವಾರ ರಾತ್ರಿ ವಿಠ್ಠಲ ಬಾಂದಿ ಸೇರಿ ಕುಟುಂಬದವರೆಲ್ಲರೂ ಮನೆಯಲ್ಲಿರುವಾಗಲೇ ಈ ಕಳ್ಳತನ ನಡೆದಿದೆ. ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅಂದಾಜಿನ ಪ್ರಕಾರ ಸೋಮವಾರ ನಸುಕಿನ 2.30ರ ಆಸುಪಾಸಿನಲ್ಲಿ ಕಳ್ಳತನ ನಡೆದಿರುವ ಸಾಧ್ಯತೆಗಳಿವೆ. ದೇವರ ಮನೆ ಬೀಗ ಒಡೆದು ಹಲವು ಬಗೆಯ ದೇವರ ಮೂರ್ತಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಎಲ್ಲಾ ದೇವರ ಮೂರ್ತಿ ಕದ್ದಿಲ್ಲ. ಮರುದಿನದ ಪೂಜೆಗೆ ಅಗತ್ಯವಿರುವ ಮೂರ್ತಿಗಳನ್ನು ಗರ್ಭಗುಡಿಯೊಳಗೆ ಬಿಟ್ಟು ಹೋಗಿದ್ದಾರೆ.

ಇನ್ನೂ ಕಳ್ಳರು ಗರ್ಭಗುಡಿ ಪ್ರವೇಶಿಸುವುದು ಸುಲಭವಾಗಿರಲಿಲ್ಲ. ಮನೆಯವರೆಲ್ಲರೂ ಮಲಗಿದ್ದರೂ ಅವರಿಗೆ ಎಚ್ಚರವಾಗದಂತೆ ಬಂದು ಕೈ ಚಳಕ ಪ್ರದರ್ಶಿಸಿದ್ದಾರೆ. 1.30 ಲಕ್ಷ ರೂ ಮೌಲ್ಯದ ಹಿತ್ತಾಳೆಯ ವಿಗ್ರಹ, ಐದು ಕಪೀಲ ಕಲ್ಲುಗುಂಡಿನ ಜೊತೆ ಹಳೆಯ ನೌಕಿಯಾ ಮೊಬೈಲನ್ನು ಕಳ್ಳರು ಅಪಹರಿಸಿದ್ದಾರೆ. ದೇವರ ಮನೆಯಲ್ಲಿನ ಚಿಲ್ಲರೆ ಕಾಸಿಗೆ ಆ ಕಳ್ಳರು ಆಸೆ ಪಟ್ಟಿಲ್ಲ!

ಕಳ್ಳತನದ ಬಗ್ಗೆ ವಿಠ್ಠಲ ಬಾಂದಿ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.

ShareSendTweetShare
Previous Post

ಅರಣ್ಯ ಹಕ್ಕು | ಅರ್ಜಿ ವಿಲೇವಾರಿಗೆ ಸರ್ಕಾರದ ಅರ್ಜಂಟು!

Next Post

ಪುಂಡ ಪೋಕರಿಗಳ ಮೇಲೆ ಪೊಲೀಸರ ನಿಗಾ: ದಂಡ ತುಂಬುವ ಬದಲು ಇನ್ಸುರೆನ್ಸ ಮಾಡಿಸಿ!

Next Post

ಪುಂಡ ಪೋಕರಿಗಳ ಮೇಲೆ ಪೊಲೀಸರ ನಿಗಾ: ದಂಡ ತುಂಬುವ ಬದಲು ಇನ್ಸುರೆನ್ಸ ಮಾಡಿಸಿ!

ಜಯ ಕರ್ನಾಟಕ | ಅಕ್ರಮ ಕಟ್ಟಡದ ವಿರುದ್ಧ ಜನಪರ ವೇದಿಕೆ ಹೋರಾಟ

ಕೈಗಾ | ನಿವೃತ್ತ ಸಂಪರ್ಕಾಧಿಕಾರಿಗೆ ದೆಹಲಿಯಲ್ಲಿ ಗೌರವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.