ಶಿರಸಿ: ಕೊಡ್ಲಳ್ಳಿ ಕ್ರಾಸಿನಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ಪ್ರಚೋದನೆ ನೀಡಿದ್ದ ಸಂತೋಷ ನಾಯ್ಕರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ನವಿಲಗಾರ ಬಳಿಯ ಕೊಡ್ಲಳ್ಳಿ ಸಂತೋಷ ನಾಯ್ಕ ಡಿ 26ರಂದು ಕೊಡ್ಲಳ್ಳಿ ಕ್ರಾಸಿನ ಬಳಿ ಮದ್ಯ ಮಾರಾಟ ಮಾಡುತ್ತಿದ್ದರು. ಅದಕ್ಕೆ ಅನುಮತಿ ಪಡೆದಿರಲಿಲ್ಲ. ಮದ್ಯ ಖರೀದಿಸಿದವರಿಗೆ ಅಲ್ಲಿಯೇ ಕುಳಿತು ಸೇವಿಸುವಂತೆ ಸೂಚಿಸುತ್ತಿದ್ದರು. ಈ ವೇಳೆ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ದಾಳಿ ನಡೆಸಿದರು.
ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ 320ರೂ ಹಣ ಹಾಗೂ ಮದ್ಯದ ಪ್ಯಾಕೇಟ್’ನ್ನು ಅವರು ವಶಕ್ಕೆ ಪಡೆದರು. ಸಂತೋಷ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.




