ಹೊನ್ನಾವರ: ಚಂದ್ರಾಣಿ ಬಳಿಯ ಹನುಮಂತ ದೇವಸ್ಥಾನ ಎದುರಿನ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಅಲ್ಲಿ ದಾಸ್ತಾನು ಮಾಡಿದ್ದ ಒಣ ಹುಲ್ಲು ಕರಕಲಾಗಿದೆ.
ರಾಮತೀರ್ಥದ ಸಮೀಪ ಹಾದು ಹೋದ ವಿದ್ಯುತ್ ಲೈನಿನ ಕಿಡಿ ಬೆಂಕಿಗೆ ಮೂಲ ಕಾರಣ. ಏಕಾಏಕಿ ಬೆಂಕಿ ಆವರಿಸಿದ್ದರಿಂದ ಜನ ಕಂಗಾಲಾದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದರು. ಅದಾಗಿಯೂ ಅರಣ್ಯ ಪ್ರದೇಶದಲ್ಲಿನ ಗಿಡ-ಮರಗಳು ಸುಟ್ಟು ಹಾನಿಯಾಗಿದೆ.
ADVERTISEMENT




