ಕಾರವಾರ: ಮುದುಗಾದ ಗೂಡಗಂಡಿಯಲ್ಲಿ ಗೋವಾ ಸರಾಯಿ ಮಾರುತ್ತಿದ್ದ ಗಣಪತಿ ಹರಿಕಂತ್ರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಮುದುಗಾ ಕಾಲೋನಿಯ ಗಣಪತಿ ಹರಿಕಂತ್ರ (65) ಮುದುಗಾದಲ್ಲಿ ಅಂಗಡಿ ಹೊಂದಿದ್ದಾರೆ. ಆಗಾಗ ಗೋವಾಗೆ ಹೋಗುವ ಅವರು ಅಲ್ಲಿ ಅಗ್ಗದ ಬೆಲೆಗೆ ಸಿಗುವ ಸರಾಯಿ ತಂದು ದಾಸ್ತಾನು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ ಆದರೂ ಆ ಬಗ್ಗೆ ಚಿಂತಿಸದೇ ತಮ್ಮ ಆದಾಯ ವೃದ್ಧಿಗಾಗಿ ಅವರು ಸರಾಯಿ ಮಾರಾಟ ಮಾಡುತ್ತಿದ್ದರು. ಗೂಡಂಗಡಿಯಲ್ಲಿ ಸರಾಯಿ ಮಾರಾಟಕ್ಕೆ ಅನುಮತಿಯೂ ಇರಲಿಲ್ಲ.
ಈ ಹಿನ್ನಲೆ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧ್ಯಕ್ಷೆ ಬಿ ಅಶ್ವಿನಿ ಅವರ ಅಂಗಡಿ ಮೇಲೆ ಜನವರಿ 8ರಂದು ದಾಳಿ ಮಾಡಿದರು. ಅಲ್ಲಿದ್ದ ಸರಾಯಿಗೆ ಅಧಿಕೃತ ಪರವಾನಿಗೆ ಪ್ರಶ್ನಿಸಿದರು. ಯಾವುದೇ ದಾಖಲೆ ಇಲ್ಲದ ಕಾರಣ ಅದನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದರು.




