ಕಾರವಾರ: ದೇವಭಾಗ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ನರೇಂದ್ರ ಗಿರೀಪ ಸಿಕ್ಕಿಬಿದ್ದಿದ್ದು, ಆತ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಎಸ್‌ಐ ಮಹಾಂತೇಶ ವಾಲ್ಮಿಕಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಸದಾಶಿವಗಡದ ದೇವಭಾಗದ ನರೇಂದ್ರ ಗಿರೀಪ ರಿಕ್ಷಾ ಚಾಲಕ. ಬಿಡುವಿನ ವೇಳೆ ಮಟ್ಕಾ ಆಡಿಸುವುದು ಅವರ ಖಯಾಲಿ. ಜನರಿಂದ ಸಂಗ್ರಹಿಸಿದ ಹಣವನ್ನು ತಾವೇ ಇಟ್ಟುಕೊಂಡು ಅವರು ವಂಚಿಸುತ್ತಿದ್ದ ಆರೋಪವೂ ಇದೆ.
ಜನವರಿ 10ರಂದು ದೇವಭಾಗ ಬಸ್ ನಿಲ್ದಾಣದ ಬಳಿ ನರೇಂದ್ರ ಗಿರೀಪ ಮಟ್ಕಾ ಆಡಿಸುತ್ತಿರುವುದನ್ನು ಚಿತ್ತಾಕುಲ ಪಿಎಸ್‌ಐ ಮಹಾಂತೇಶ ವಾಲ್ಮಿಕಿ ಪತ್ತೆ ಮಾಡಿದರು. ನರೇಂದ್ರ ಗಿರೀಪ ಸಂಗ್ರಹಿಸಿದ ಹಣದ ಜೊತೆ ಸಂಖ್ಯೆ ಬರೆಯಲು ಇರಿಸಿಕೊಂಡಿದ್ದ ಪೆನ್ನು-ಪೆಪರನ್ನು ಅವರು ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.




