ಸಿದ್ದಾಪುರ: ಹೂವಿನ ವ್ಯಾಪಾರಕ್ಕಾಗಿ ಸಿದ್ದಾಪುರಕ್ಕೆ ಬಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಸಿಕ್ಕಿದೆ. ರವಿ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮಿಳುನಾಡಿನ ರವಿ ಶೆಟ್ಟಿ ಸಿದ್ದಾಪುರಕ್ಕೆ ಹೂವಿನ ವ್ಯಾಪಾರಕ್ಕೆ ಬಂದಿದ್ದರು. ಜನವರಿ 3ರಂದು ರವಿ ಶೆಟ್ಟಿ ಬೈಕ್ ರಿಪೇರಿಗೆ ತೆರಳಿದ್ದ ಅವರು ಕಾಣೆಯಾಗಿದ್ದರು. `ಬೈಕಿನ ಆಯ್ಲ್ ಬದಲಾಯಿಸಿಕೊಂಡು ಬರುವೆ’ ಎಂದು ಹೋಗಿದ್ದ ಅವರು ನಂತರ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಸಿದ್ದಾಪುರದ ವಿವಿಧ ಗ್ಯಾರೇಜ್’ಗಳಲ್ಲಿ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಗದ ಕಾರಣ ಪೊಲೀಸ್ ಪ್ರಕರಣ ದಾಖಲಾಗಿತ್ತು.
ಜನವರಿ 11ರಂದು ಜೋಗ ರಸ್ತೆಯ ಪಡವನ ಬೈಲಿನ ಬಳಿ ಗಬ್ಬು ವಾಸನೆ ಬಂದಿದ್ದು, ಅದನ್ನು ಹುಡುಕಿ ಹೊರಟವರಿಗೆ ಶವ ಸಿಕ್ಕಿದೆ. ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರವಿ ಶೆಟ್ಟಿಯ ಬೈಕ್ ಸಹ ರಸ್ತೆ ಅಂಚಿನಲ್ಲಿ ಸಿಕ್ಕಿದ್ದು, ಅವರ ಅಣ್ಣ ಗೋವಿಂದರಾಜು ಬಂದು ಶವ ಗುರುತಿಸಿದ್ದಾರೆ. ವ್ಯಾಪಾರ ಸರಿಯಾಗಿ ಆಗದಿರುವ ಕಾರಣ ಬೇಸರದಿಂದ ರವಿ ಶೆಟ್ಟಿ ಆತ್ಮಹತ್ಯೆಗೆ ಶರಣಾದ ಅನುಮಾನಗಳಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





