6
  • Latest

ದಾತ್ರಿ ನಗರ | ನೀರು ಕೊಡಲು ಮತ್ತೆ ಸಮಯ ಕೇಳಿದ ಪ ಪಂ ಅಧಿಕಾರಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಾತ್ರಿ ನಗರ | ನೀರು ಕೊಡಲು ಮತ್ತೆ ಸಮಯ ಕೇಳಿದ ಪ ಪಂ ಅಧಿಕಾರಿ!

AchyutKumar by AchyutKumar
in ಸ್ಥಳೀಯ

ವಸತಿ ನಿವೇಶನಗಳಿಗೆ ನೀರು ಪೂರೈಕೆ ಮಾಡುವ ಬಗ್ಗೆ ಬಡಾವಣೆ ನಿರ್ಮಿಸಿದವರಿಗೆ ಯಲ್ಲಾಪುರ ಪಟ್ಟಣ ಪಂಚಾಯತ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ 15 ದಿನಗಳ ಒಳಗೆ ನೀರು ಪೂರೈಕೆ ಮಾಡಿಕೊಡುವುದಾಗಿ ನೀರಿನ ಹಕ್ಕಿಗಾಗಿ ಹೋರಾಡುತ್ತಿರುವ ಮಂಜುನಾಥ ಹೆಗಡೆ ಅವರಿಗೂ ಪ ಪಂ ಮನವರಿಕೆ ಮಾಡಿದೆ.

ಯಲ್ಲಾಪುರದ ಹಿತ್ಲಕಾರಗದ್ದೆ ಬಳಿ `ದಾತ್ರಿ ನಗರ’ ಎಂದು ನಾಮಫಲಕ ಅಳವಡಿಸಿ ಅಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಆದರೆ, ಅಲ್ಲಿನ ನಿವೇಶನಗಳಿಗೆ ಬಡಾವಣೆ ಅಭಿವೃದ್ಧಿ ಮಾಡಿದವರು ಮೂಲಭೂತ ಸೌಕರ್ಯ ಒದಗಿಸಿರಲಿಲ್ಲ. ಕುಡಿಯುವ ನೀರು ಸೇರಿ ಮೂಲಭೂತ ಸೌಕರ್ಯ ಒದಗಿಸುವುದು ಬಡವಾಣೆ ನಿರ್ಮಿಸಿದವರ ಕರ್ತವ್ಯವಾಗಿದ್ದು, ಅದನ್ನು ಒದಗಿಸದೇ ಬಡಾವಣೆಯನ್ನು ಪಟ್ಟಣ ಪಂಚಾಯತಗೆ ಹಸ್ತಾಂತರ ಮಾಡಿದ್ದರಿಂದ ಮಂಜುನಾಥ ಹೆಗಡೆ ಅವರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದರು.

`ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ’ ಎಂದು ಮಂಜುನಾಥ ಹೆಗಡೆ ಪ್ರತಿಭಟನೆ ನಡೆಸಿದ್ದರು. ಆಗ ಪ ಪಂ ಮುಖ್ಯಾಧಿಕಾರಿ ಒಂದು ವಾರದ ಸಮಯ ಕೇಳಿದ್ದರು. ಆದರೆ, ಪಟ್ಟಣ ಪಂಚಾಯತ ಅನುದಾನದ ಅಡಿ ಖಾಸಗಿ ಲೇಔಟ್’ಗೆ ನೀರು ಪೂರೈಸಲು ಸತೀಶ ನಾಯ್ಕ ಸೇರಿ ವಿವಿಧ ಪ ಪಂ ಸದಸ್ಯರು ವಿರೋಧಿಸಿದ್ದರು. ಅವಧಿ ಮುಗಿದರೂ ನೀರು ಪೂರೈಕೆಯಾಗದ ಕಾರಣ ಗುರುವಾರ ಮಂಜುನಾಥ ಹೆಗಡೆ ಮತ್ತೆ ಪ್ರತಿಭಟನೆಗೆ ಕೂತರು. ಆಗ, ಅಲ್ಲಿ ವಿವಿಧ ಸದಸ್ಯರು ಹಾಗೂ ಅಧಿಕಾರಿಗಳು ಆಗಮಿಸಿ ಮತ್ತೆ 15 ದಿನದ ಸಮಯ ಕೋರಿದರು.

ಇನ್ನೂ ನಿವೇಶನ ಪಡೆದವರಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಬಡಾವಣೆ ನಿರ್ಮಿಸಿದ ಚೈತ್ರಾ ಗಣಪತಿ ಭಟ್ಟ ಅವರಿಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ನೋಟಿಸ್ ನೀಡಿದ್ದಾರೆ. ಆ ನೋಟಿಸ್ ಪ್ರತಿಯನ್ನು ಪ್ರತಿಭಟನಾ ನಿರತ ಮಂಜುನಾಥ ಹೆಗಡೆ ಅವರಿಗೆ ನೀಡಿ ಸಮಾಧಾನ ಮಾಡಿದರು.

 

ShareSendTweetShare
Previous Post

ತಾಳಗುಪ್ಪಾ-ಶಿರಸಿ-ಹುಬ್ಬಳ್ಳಿ: ರೈಲ್ವೆ ವರದಿಗೆ ಖಾಸಗಿ ಕಂಪನಿಯ ಗುತ್ತಿಗೆ!

Next Post

ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!

Next Post

ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!

A student died after being attacked by a warden!

ಮಾಟ ಮಂತ್ರದ ಕಾಟ: ಮದ್ಯರಾತ್ರಿ ಎದ್ದ ಮಹಿಳೆ ನೇಣಿಗೆ ಶರಣು!

ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.