ಯಲ್ಲಾಪುರ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಘಟಕದವರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡುವಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈಯರ್’ಗೆ ಬೆಂಕಿ ಅಂಟಿಸಿ ಆಕ್ರೋಶ ಹೊರಹಾಕಿದರು.
ಪಟ್ಟಣ ಅಂಬೇಡ್ಕರ್ ಸರ್ಕಲ್’ನಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು ನಂತರ ಹಳೆ ಪೆಟ್ರೊಲ್ ಪಂಪ್ ಸರ್ಕಲ್’ವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆಸಿದರು.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ ‘ಪ್ರಧಾನ ನರೇಂದ್ರ ಮೋದಿ ರಾಮಜಪ ಮಾಡಿದರೆ, ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಜೈಕಾರ ಹಾಕುವವರ ಪರ ಇದ್ದಾರೆ. ಸಿದ್ದರಾಮಯ್ಯ ಸರ್ಕಾರ ಇಂಧನ ಬೆಲೆ ಏರಿಸಿದೆ. ವಿದ್ಯಾವಂತರಿಗೆ ಉದ್ಯೋಗ ಇಲ್ಲ. ವಿದ್ಯುತ್ ಉಚಿತ ನೀಡಿ ಕೈಗಾರಿಕೆಗೆ ದುಪ್ಪಟ್ಟು ಹಣ ವಸುಲಿ ಮಾಡುತ್ತಿದೆ’ ಎಂದು ಆರೋಪಿಸಿದರು.
ಈಚೆಗೆ ಕಾಂಗ್ರೆಸ್ ಸೇರಿ ಇದೀಗ ಬಿಜೆಪಿಗೆ ಮರಳಿದ ರಾಘು ಭಟ್ಟ ಮಾತನಾಡಿ ‘ಈಗಿನ ಸರ್ಕಾರ ಬಾಂಡ್ ಪೆಪರ್ ದರ ಏರಿಸಿದೆ. ಈ ಕೂಡಲೇ ಸರ್ಕಾರ ತೆರಿಗೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.
ಉಮೇಶ ಭಾಗ್ವತ್ ಮಾತನಾಡಿ ‘ಬಡವರ ಹಿತ ಕಾಯುವುದಾಗಿ ಹೇಳಿದ ಕಾಂಗ್ರೆಸ್ ಸರ್ಕಾರ ಇಂದನ ಬೆಲೆ ಏರಿಸಿ ಜನರ ಬದುಕನ್ನು ಕಷ್ಟಕ್ಕೆ ದೂಡಿದೆ. ಇಂದನ ಮಾತ್ರವಲ್ಲದೇ, ಎಲ್ಲಾ ವಸ್ತುಗಳ ಬೆಲೆಯನ್ನು ಸರ್ಕಾರ ದುಪ್ಪಟ್ಟು ಮಾಡಿದೆ’ ಎಂದರು.
ಪ್ರಮುಖರಾದ ಸೋಮು ನಾಯ್ಕ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಬಡವರಿಗೆ ಮನೆ ನೀಡುವುದಾಗಿ ಹೇಳಿ ಹಣ ತುಂಬಿಸಿಕೊಂಡು ಸರ್ಕಾರ ಮೋಸ ಮಾಡಿದೆ’ ಎಂದು ದೂರಿದರು. ಪ್ರಮುಖರಾದ ರಾಮು ನಾಯ್ಕ ಮಾತನಾಡಿ
‘ಕಾಂಗ್ರೆಸ್ ಸರ್ಕಾರ ಕೊಲೆಗೆಟುಕ ಸರ್ಕಾರ ಎಂದು ಪ್ರಸಿದ್ಧಿ ಪಡೆದಿತ್ತು. ಇದೀ ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡಿದ್ದು, ಜನರಿಗೆ ದುಬಾರಿಯಾಗಿದೆ’ ಎಂದರು.
ಮುಖಂಡ ವೆಂಕಟ್ರಮಣ ಬೆಳ್ಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ‘ಟಕಾ ಟಕ್ ಟಕಾ ಟಕ್’ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ಕುಂಠಿತವಾಗಿರುವುದನ್ನು ವಿರೋಧಿಸಿದರು.
ಪ್ರಮುಖರಾದ ಗಣಪತಿ ಮುದ್ದೆಪಾಲ್, ನಟರಾಜ ಗೌಡ, ಅಲನ ಶಿವಲಿಂಗಯ್ಯ ಹಿರೇಮಠ, ಸೋಮು ನಾಯ್ಕ, ಶೃತಿ ಹೆಗಡೆ, ಗಣಪತಿ ಬೋಳಗುಡ್ಡೆ, ರವಿ ಕೈಟ್ಕರ್, ಜಿ ಎನ್ ಗಾಂವ್ಕರ್, ಅನಂತ ಸಿದ್ದಿ ಇತರರು ಇದ್ದರು.
Discussion about this post