6
  • Latest

ಸರಾಯಿ ಸಾಗಾಟವೇ ಈತನ ವೃತ್ತಿ: ಅಮಾನತಾದರೂ ಬುದ್ದಿ ಕಲಿಯದ ಪೊಲೀಸಪ್ಪ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಾಯಿ ಸಾಗಾಟವೇ ಈತನ ವೃತ್ತಿ: ಅಮಾನತಾದರೂ ಬುದ್ದಿ ಕಲಿಯದ ಪೊಲೀಸಪ್ಪ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ ಕಡೆ ಮದ್ಯ ಸಾಗಿಸುವಾಗ ಅವರು ಸಿಕ್ಕಿಬಿದ್ದಿದ್ದು, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಇದೀಗ ಮತ್ತೆ ಸಂತೋಷ ಲಮಾಣಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ!

ಸಂತೋಷ ಲಮಾಣಿ 2024ರಲ್ಲಿ ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿದ್ದರು. ಜೂನ್ 12ರಂದು ಗೋವಾದಿಂದ ಸರಾಯಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದರು. ಈ ಹಿನ್ನಲೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತೋಷ ಲಮಾಣಿ ಅವರ ಅಮಾನತು ಆದೇಶ ಹಿಂಪಡೆದು, ಅವರ ಮೇಲಿನ ತನಿಖೆ ಬಾಕಿಯಿರಿಸಿ ಅವರನ್ನು 2024ರ ಡಿಸೆಂಬರ್ 9ರಂದು ಹಳಿಯಾಳ ಪೊಲೀಸ್ ಠಾಣೆಗೆ ಮರುನಿಯೋಜನೆ ಮಾಡಲಾಗಿತ್ತು. ಈ ನಡುವೆ ಫೆ 6ರಂದು ಕಾರವಾರದ ನ್ಯಾಯಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹಳಿಯಾಳದಿಂದ ಹೊರಟಿದ್ದ ಸಂತೋಷ ಲಮಾಣಿ ಅಕ್ರಮ ಸರಾಯಿ ಮಾರಾಟ ಮಾಡುವವರಿಗೆ ನೆರವು ನೀಡಿ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಆ ದಿನ ಕಾರವಾರದಿಂದ ಅಂಕೋಲಾ ಕಡೆ ಬರುತ್ತಿದ್ದ ಕಾರು ತಪಾಸಣೆ ನಡೆಸಿದ ಅಂಕೋಲಾ ಪೊಲೀಸರು ಅಕ್ರಮ ಸರಾಯಿ ಮಾರಾಟಗಾರರನ್ನು ತಡೆದಿದ್ದರು. ಕಾರಿನಲ್ಲಿದ್ದ ಆರೋಪಿಗಳು ಆಗ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಹೆಸರು ಬಾಯ್ಬಿಟ್ಟಿದ್ದರು. ಇದಕ್ಕೆ ಸಾಕ್ಷಿಯಾಗಿ ಆತನಿಗೆ ಮಾಡಿದ ಫೋನು-ಮೆಸೆಜ್’ನ್ನು ಕಾಣಿಸಿದ್ದರು. ಹೀಗಾಗಿ ಕಾರವಾರದ ಮೂಡಗೇರಿ ಬಳಿ ಪೊಲೀಸರು ಸಂತೋಷ ಲಮಾಣಿಯನ್ನು ವಶಕ್ಕೆ ಪಡೆದರು. 80 ಸಾವಿರ ರೂ ಮೌಲ್ಯದ ಗೋವಾ ಸರಾಯಿಯನ್ನು ಸಂತೋಷ ಲಮಾಣಿ ತನ್ನ ಪ್ರಭಾವ ಬೀರಿ ಕರ್ನಾಟಕದ ಗಡಿ ದಾಡಿಸಿರುವುದು ಬೆಳಕಿಗೆ ಬಂದಿದೆ.

Advertisement. Scroll to continue reading.

ಫೆ 6ರಂದು ಕೋರ್ಟಿನ ಟಪಾಲು ಹಿಡಿದು ಕಾರವಾರಕ್ಕೆ ಹೋಗುವುದಾಗಿ ಹೇಳಿದ್ದ ಸಂತೋಷ ಲಮಾಣಿ ಸಮಯಕ್ಕೆ ಸರಿಯಾಗಿ ಕೋರ್ಟಿಗೆ ಹೋಗಿರಲಿಲ್ಲ. ನ್ಯಾಯಾಲಯಕ್ಕೆ ನೀಡಬೇಕಾದ ಟಪಾಲನ್ನು ನೀಡದೇ ಕರ್ತವ್ಯಲೋಪ ಎಸಗಿದ ಬಗ್ಗೆ ಹಳಿಯಾಳ ಪೊಲೀಸ್ ನಿರೀಕ್ಷಕರು ಸಹ ವರದಿ ಸಲ್ಲಿಸಿದ್ದರು. ಇದರೊಂದಿಗೆ ವ್ಯಕ್ತಿಯೊಬ್ಬರಿಂದಲೂ ಸಂತೋಷ ಲಮಾಣಿ ಹಣ ಪಡೆದು ಅದನ್ನು ಮರುಪಾವತಿಸದೇ ವಂಚಿಸಿದ ಬಗ್ಗೆಯೂ ದೂರು ದಾಖಲಾಗಿತ್ತು. ಹಣ ಕೊಟ್ಟವರ ಕಾರನ್ನು ದುರುಪಯೋಗಪಡಿಸಿಕೊಂಡು ಅದರಲ್ಲಿಯೇ ಅಕ್ರಮ ಮದ್ಯ ಸಾಗಾಟ ನಡೆಸಿದ ಬಗ್ಗೆಯೂ ದೂರಲಾಗಿತ್ತು.

ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸಂತೋಷ ಲಮಾಣಿ ಅವರನ್ನು ಮತ್ತೊಮ್ಮೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ShareSendTweetShare
ADVERTISEMENT
Previous Post

ಅಂದರ್-ಬಾಹರ್ ಆಡುತ್ತಿದ್ದವರು ಅಂದರ್!

Next Post

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

Next Post

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

Gambling in the name of Friends Club: 17 people sentenced to prison!

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.