ಬೈಕ್ ಅಪಘಾತದಿಂದ ಆಸ್ಪತ್ರೆ ಸೇರಿದ್ದ ಸಿದ್ದಾಪುರದ ಲಕ್ಷ್ಮಣ ನಾಯ್ಕ 10 ದಿನದ ನರಳಾಟ ಅನುಭವಿಸಿ ಸಾವನಪ್ಪಿದ್ದಾರೆ. ಲಕ್ಷ್ಮಣ ನಾಯ್ಕ ಜೊತೆಗೆ ಬೈಕಿನಲ್ಲಿದ್ದ ಈಶ್ವರ ನಾಯ್ಕ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಸಿದ್ದಾಪುರದ ಉಂಚಳ್ಳಿಯ ಲಕ್ಷ್ಮಣ ನಾಯ್ಕ (51) ಅವರು ಮಾರ್ಚ 17ರ ಬೆಳಗ್ಗೆ ಸಿದ್ದಾಪುರದ ಕಡಗೇರಿ ಕಾನಳ್ಳಿ ದೇವಸ್ಥಾನಕ್ಕೆ ಹೋಗಿದ್ದರು. ಮರಳಿ ಊರಕಡೆ ಬರುವಾಗ ಅವರಿಗೆ ತಮ್ಮದೇ ಊರಿನ ಈಶ್ವರ ನಾಯ್ಕರು ಸಿಕ್ಕರು. ಬೈಕಿನ ಹಿಂದೆ ಈಶ್ವರ ನಾಯ್ಕರನ್ನು ಕೂರಿಸಿಕೊಂಡು ಅವರು ಉಂಚಳ್ಳಿ ಕಡೆ ವೇಗವಾಗಿ ಬರುತ್ತಿದ್ದರು.
ಕಾನಳ್ಳಿಯಿಂದ ಅವರೆಗೊಪ್ಪ ಕಡೆ ಬರುವಾಗ ಲಕ್ಷ್ಮಣ ನಾಯ್ಕ ಅವರ ಬೈಕು ಅಪಘಾತವಾಯಿತು. ಅವರೆಕೊಪ್ಪ ಡಿಪ್ಲೋಮಾ ಕಾಲೇಜಿನ ಬಳಿಯ ತಿರುವಿನಲ್ಲಿ ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದರು. ಈಶ್ವರ ನಾಯ್ಕ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಲಕ್ಷ್ಮಣ ನಾಯ್ಕರಿಗೂ ಗಾಯವಾಗಿದ್ದರಿಂದ ಅವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಯಿತು.
ಅದಾದ ನಂತರ ಲಕ್ಷö್ಮಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಮಂಗಳೂರು ಕೆ ಎಸ್ ಹೆಗಡೆ ಆಸ್ಪತ್ರೆಗೆ ಸೇರಿಸಲಯಿತು. ಆದರೂ, ಯಾವ ಪ್ರಯೋಜನವೂ ಆಗಲಿಲ್ಲ. ಮಾರ್ಚ 28ರಂದು ಸಾವು ಲಕ್ಷ್ಮಣ ನಾಯ್ಕ ಅವರು ಕೊನೆ ಉಸಿರೆಳೆದರು.
ಶಿರಸಿ ಕಾನಗೋಡಿನ ವೆಂಕಟೇಶ ನಾಯ್ಕ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.