ಗೋವಾದಿoದ ಮಹಾರಾಷ್ಟ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಸಾಗಿಸುತ್ತಿದ್ದ ಒಂದು ಲಾರಿಯಷ್ಟು ಸರಾಯಿಯನ್ನು ದಾಂಡೇಲಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಆನಮೋಡು ತಪಾಸಣಾ ಕೇಂದ್ರದಲ್ಲಿ ವಿನಾಯಕ ಎಂಟರ್‌ಪ್ರೆöÊಸಸ್’ಗೆ ಸೇರಿದ ಲಾರಿ ಸಿಕ್ಕಿ ಬಿದ್ದಿದೆ.
ಭಾನುವಾರವೂ ಎಂದಿನoತೆ ತಪಾಸಣೆ ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು ಗೋವಾದಿಂದ ಬಂದ ಲಾರಿಗೆ ಅಡ್ಡಲಾಗಿ ಕೈ ಮಾಡಿದರು. ಲಾರಿ ಓಡಿಸುತ್ತಿದ್ದ ಮುಂಬೈನ ಬಿನ್ ಮುರಾಜಿ ಗಾಂಧಿ ವಾಹನ ನಿಲ್ಲಿಸಲು ಅನುಮಾನ ಮಾಡಿದರು. ಅದಾಗಿಯೂ ಅಬಕಾರಿ ಸಿಬ್ಬಂದಿ ಶ್ರೀಕಾಂತ ಜಾಧವ, ದೀಪಕ್ ಬಾರಾಮತಿ, ಮಹಾಂತೇಶ ಹೊನ್ನೂರ ಅವರು ಲಾರಿಗೆ ಅಡ್ಡಲಾಗಿ ಲಾಠಿ ತೋರಿಸಿ ವಾಹನ ನಿಲ್ಲಿಸಿದರು.
`ವಾಹನದ ಒಳಗೆ ಏನಿದೆ?’ ಎಂದು ಪ್ರಶ್ನಿಸಿದಾಗ ಚಾಲಕ ಬಿನ್ ಮುರಾಜಿ ಗಾಂಧಿ ಮಾತನಾಡಲಿಲ್ಲ. ಅಬಕಾರಿ ಸಿಬ್ಬಂದಿ ಶ್ರೀಶೈಲ್ ಹಡಪದ, ಪ್ರವೀಣ ಹೊಸಕೋಟಿ ಸೇರಿ ಲಾರಿ ಒಳಗೆ ಪರಿಶೀಲನೆ ನಡೆಸಿದರು. ಆಗ ಅಲ್ಲಿ ರಾಶಿ ರಾಶಿ ಪ್ರಮಾಣದ ಸರಾಯಿ ಬಾಟಲಿಗಳು ಕಾಣಿಸಿದವು. ರಾಯಲ್ ಗ್ರೀನ್ ವಿಸ್ಕಿಯ 20 ಬಾಕ್ಸು, ಓಕ್ಸಿತ್ ಗೋಲ್ಡ್ ವಿಸ್ಕಿಯ 10 ಬಾಕ್ಸುಗಳನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು.
ಎಲ್ಲವೂ 750 ಎಂ ಎಲ್ ಬಾಟಲಿಯನ್ನು ಹೊಂದಿದ ಬಾಕ್ಸಗಳಾಗಿದ್ದು, ಅದರ ಬೆಲೆ 3.66 ಲಕ್ಷ ಎಂದು ದಾಂಡೇಲಿ ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಹಾಗೂ ಉಪನಿರೀಕ್ಷಕ ಟಿ ಬಿ ಮಲ್ಲಣ್ಣನವರ ಲೆಕ್ಕ ಹಾಕಿದರು. ಕೊನೆಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ 22 ಲಕ್ಷ ರೂ ಮೌಲ್ಯದ ಲಾರಿಯನ್ನು ಜಪ್ತು ಮಾಡಿದರು. ಭಾರೀ ಪ್ರಮಾಣದಲ್ಲಿ ಮದ್ಯ ಸಾಗಾಟವನ್ನು ತಡೆದ ಬಗ್ಗೆ ಅಲ್ಲಿನ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.