ಗೋಕರ್ಣ ಸಮುದ್ರದಲ್ಲಿ ನೀರಿನ ಅಲೆಗೆ ಕೊಚ್ಚಿ ಹೋಗುತ್ತಿದ್ದವರನ್ನು ಇಲ್ಲಿನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಶನಿವಾರ ಮಧ್ಯಾಹ್ನ ಕುಟ್ಲೆ ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸ್ನೇಹಿತರು ಇದೀಗ ಸುರಕ್ಷತವಾಗಿದ್ದಾರೆ.
ಪಂಜಾಬ್ ಮೂಲದ ದೌಲತ್ ತಮ್ಮ ಮೂವರು ಸ್ನೇಹಿತರ ಜೊತೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದರು. ಮೊದಲು ಬೆಂಗಳೂರು ಸುತ್ತಾಟ ನಡೆಸಿದ ಅವರು ಸಮುದ್ರ ನೋಡುವುದಕ್ಕಾಗಿ ಗೋಕರ್ಣಕ್ಕೆ ಆಗಮಿಸಿದ್ದರು. ಸಮುದ್ರ ನೋಡಿದ ತಕ್ಷಣ ಈಜುವುದಕ್ಕಾಗಿ ನೀರಿಗೆ ಹಾರಿದರು.
ಆದರೆ, ಕುಟ್ಲೆ ಕಡಲತೀರದ ಅಲೆಗಳ ರಭಸಕ್ಕೆ ಅವರೆಲ್ಲರೂ ಕೊಚ್ಚಿ ಹೋದರು. ಅದರಲ್ಲಿಯೂ ದೌಲತ್ ಅತ್ಯಂತ ಅಪಾಯಕ್ಕೆ ಸಿಲುಕಿದರು. ಸ್ನೇಹಿತರ ಕೂಗಾಟ ಆಲಿಸಿದ ಜೀವರಕ್ಷಕ ಸಿಬ್ಬಂದಿ ಮಂಜುನಾಥ್ ಹರಿಕಂತ್ರ ಸಮುದ್ರಕ್ಕೆ ಹಾರಿದರು. ನಾಗೇಂದ್ರ ಕುರ್ಲೆ ಮತ್ತು ಪ್ರದೀಪ ಅಂಬಿಗ ಸಹ ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರನ್ನು ಬದುಕಿಸಿದರು.
ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ನ ಸಿಬ್ಬಂದಿ ಸಹ ಈ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು. ದಡ ತಲುಪಿದ ನಾಲ್ವರು ಪ್ರವಾಸಿರು ಅಲ್ಲಿದ್ದವರಿಗೆ ಕೃತಜ್ಞತೆ ಸಲ್ಲಿಸಿದರು.