6

ವಕೀಲರಿಂದ ಕಲಾಪ ಬಹಿಷ್ಕಾರ: ಕೋರ್ಟಿನಲ್ಲಿ ಈ ದಿನ ಮೌನ!

ರಾಜ್ಯ ವಕೀಲರ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ರಾಜ್ಯದ ನ್ಯಾಯವಾದಿಗಳು ತೀವೃವಾಗಿ ಖಂಡಿಸಿದ್ದಾರೆ. ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ರವಾನಿಸಿದರು.

2025ರ ಏಪ್ರಿಲ್ 16ರಂದು ಸದಾಶಿವ ರೆಡ್ಡಿ ಅವರು ತಮ್ಮ ಬೆಂಗಳೂರಿನ ಕಚೇರಿಯಲ್ಲಿದ್ದರು. ತಮ್ಮ ಕಿರಿಯ ಸಹೋದ್ಯೋಗಿಗಳ ಜೊತೆ ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ, ಇಬ್ಬರು ಅಪರಿಚಿತರು ಕಚೇರಿಗೆ ಬಂದಿದ್ದು, ಏಕಾಏಕಿ ಸದಾಶಿವ ರೆಡ್ಡಿ ಅವರ ಮೇಲೆ ದಾಳಿ ಮಾಡಿದರು. ಫೈಬರ್ ಪೈಪುಗಳಿಂದ ಹೊಡೆದ ಪರಿಣಾಮ ಸದಾಶಿವ ರೆಡ್ಡಿ ಹಾಗೂ ಅವರ ತಾಯಿ ಸಹ ಗಾಯಗೊಂಡರು. ಮೂಳೆ ಮುರಿತಕ್ಕೆ ಒಳಗಾದ ವಕೀಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಏಪ್ರಿಲ್ 19ರಂದು ವಕೀಲರ ಸಂಘದವರು ಸಭೆ ನಡೆಸಿ ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿದರು. ನ್ಯಾಯವಾದಿಗಳ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಏಪ್ರಿಲ್ 21ರಂದು ರಾಜ್ಯದ ಎಲ್ಲಡೆ ಮೌನ ಪ್ರತಿಭಟನೆ ನಡೆಸಲು ನ್ಯಾಯವಾದಿಗಳು ನಿರ್ಧರಿಸಿದ್ದರು. ಒಟ್ಟು 199 ವಕೀಲ ಸಂಘಟನೆಗಳು ಈ ದಾಳಿಯನ್ನು ಖಂಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಈ ದಿನ ಶಾಂತಿಯುತ ಪ್ರತಿಭಟನೆ ನಡೆದಿದ್ದು, ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲದಿರುವ ಬಗ್ಗೆ ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಇಲ್ಲಿನ ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ ಕಳವಳವ್ಯಕ್ತಪಡಿಸಿದರು.

ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು ಕೆಂಪು ಪಟ್ಟಿ ಧರಿಸಿ ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದರು `ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು’ ಎಂದು ಯಲ್ಲಾಪುರ ವಕೀಲರ ಸಂಘದ ಕಾರ್ಯದರ್ಶಿ ಜಿ ಜಿ ಪಾಠಣಕರ್, ಖಜಾಂಜಿ ಎಂ ಕೆ ಹೆಗಡೆ, ಪ್ಯಾನಲ್ ವಕೀಲರಾದ ಬೀಬಿ ಅಮೀನಾ ಶೇಖ, ಎಂ ಬಿ. ನಾಗರಾಜ್, ವಕೀಲರಾದ ಎನ್ ಕೆ ಭಾಗ್ವತ್, ಆರ್ ಕೆ ಭಟ್, ವಿ ಟಿ ಭಟ್, ಪಿ ಜಿ. ಭಟ್, ಶುಭಾಶ ಭಟ್, ಮಹೇಶ್ ನಾಯ್ಕ ಆಗ್ರಹಿಸಿದರು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page