ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಸೋಮವಾರ ಭಾರೀ ಪ್ರಮಾಣದ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ಬರೀ ಮಳೆಯಲ್ಲ.. ಗುಡುಗು, ಸಿಡಿಲಿನ ಜೊತೆ ಭಾರೀ ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುವ ಲಕ್ಷಣಗಳಿವೆ.
ಹವಾಮಾನ ಇಲಾಖೆ ಹಾಗೂ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ಮಾಹಿತಿ ಪ್ರಕಾರ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಹೀಗಾಗಿ ಮುನ್ನಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲಾಡಳಿತ ತುರ್ತು ಸಹಾಯವಾಣಿ ಕೇಂದ್ರ ತೆರೆದಿದೆ. ಅಪಾಯದ ಪರಿಸ್ಥಿತಿಯ ವೇಳೆ ಸಹಾಯವಾಣಿಗೆ ಫೋನ್ ಮಾಡುವಂತೆ ಸೂಚಿಸಲಾಗಿದೆ.
`ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಹಾಗೂ ಸಮುದ್ರದ ಕಡೆ ಸಾರ್ವಜನಿಕರು ಹೋಗಬಾರದು. ಮುಖ್ಯವಾಗಿ ಮಕ್ಕಳ ಬಗ್ಗೆಯೂ ಪ್ರತಿಯೊಬ್ಬರು ಜಾಗೃತಿವಹಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಮನವಿ ಮಾಡಿದ್ದಾರೆ. `ಕೃಷಿ ಚಟುವಟಿಕೆ ನಡೆಸುವ ವೇಳೆಯಲ್ಲಿಯೂ ಅಪಾಯದ ಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಯಿಂದ ಊರ ಉಳಿಯುವುದು ಉತ್ತಮ’ ಎಂದವರು ಹೇಳಿದ್ದಾರೆ.
`ಮಳೆ ಬರುವ ವೇಳೆ ಅನಗತ್ಯ ತಿರುಗಾಟ ಬೇಡ. ಅಪಾಯಕಾರಿ ಮರ, ವಿದ್ಯುತ್ ಕಂಬ, ತುಂಡಾದ ವಿದ್ಯುತ್ ತಂತಿಗಳಿAದ ದೂರವಿರುವುದು ಒಳಿತು. ಹಳೆಯ ಕಟ್ಟಡಗಳಲ್ಲಿ ಆಶ್ರಯಪಡೆಯುವುದು ಸಹ ಅಪಾಯಕಾರಿ’ ಎಂಬ ವಿಷಯವನ್ನು ಜಿಲ್ಲಾಧಿಕಾರಿ ನೆನಪು ಮಾಡಿದ್ದಾರೆ. `ಸಾರ್ವಜನಿಕರಿಗಾಗಿ ಸರ್ಕಾರ ಕಾಳಜಿ ಕೇಂದ್ರ ತೆರೆದಿದೆ. ಅಲ್ಲಿ ಆಶ್ರಯಪಡೆಯಲು ಅವಕಾಶವಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
`ಕಾಲು ಸೇತುವೆ, ಕಿರು ಸೇತುವೆ ದಾಡುವ ಸನ್ನಿವೇಶಗಳಲ್ಲಿ ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದ್ದಾರೆ. ಯಾವುದೇ ಸಹಾಯಕ್ಕೆ 08382-229857 ಹಾಗೂ 9483511015ಗೆ ಫೋನ್ ಮಾಡಬಹುದು ಎಂದವರು ಹೇಳಿದ್ದಾರೆ.