ಅಂಕೋಲಾದ ಅವರ್ಸಾದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದು, ಅದರ ಅರಿವಿಲ್ಲದೇ ತಂತಿ ತುಳಿದ ಎರಡು ಜೀವಗಳು ಸಾವನಪ್ಪಿದೆ.
ಮಹಾರಾಷ್ಟದಲ್ಲಿ ಕೆಲಸ ಮಾಡಿಕೊಂಡಿದ್ದ ಅವರ್ಸಾ ದಂಡೇಭಾಗದ ಮಹಾಂತೇಶ ಭಾನಾವಳಿಕರ್ (25) ಮೊನ್ನೆ ಊರಿಗೆ ಬಂದಿದ್ದರು. ಗುರುವಾರ ಸಮೀಪದ ಅಂಗಡಿಗೆ ಹೋಗಿದ್ದ ಅವರು ಮನೆಗೆ ಮರಳುತ್ತಿದ್ದರು. ಆ ವೇಳೆ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿ ಬಿದ್ದಿದ್ದು, ಅದನ್ನು ಮಹಾಂತೇಶ್ ಗಮನಿಸದೇ ಕಾಲಿನಿಂದ ಮೆಟ್ಟಿದರು. ವಿದ್ಯುತ್ ಆಘಾತಕ್ಕೆ ಒಳಗಾಗಿ ಅಲ್ಲಿಯೇ ಅವರು ಕೊನೆಯುಸಿರೆಳೆದರು.
ಅಂಕೋಲಾ ಆಸ್ಪತ್ರೆಯ ವೈದ್ಯರು ಮಹಾಂತೇಶ ಭಾನಾವಳಿಕರ್ ಅವರ ಸಾವನ್ನು ಖಚಿತಪಡಿಸಿದರು. ಅದೇ ಮಾರ್ಗವಾಗಿ ತೆರಳುತ್ತಿದ್ದ ಜಾನುವಾರು ಸಹ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿರುವುದು ನಂತರ ಗೊತ್ತಾಯಿತು. ಹೆಸ್ಕಾಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.