ಕಂಡ ಕಂಡಲ್ಲಿ ಗುಂಡಿ ತೆಗೆಯುವ ಅರಣ್ಯ ಇಲಾಖೆ ಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಾಗಾರರ ವೇದಿಕೆ ಪ್ರಶ್ನಿಸಿದೆ. ಹೊನ್ನಾವರದ ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ಅವರಿಗೆ ಸ್ಪಷ್ಠೀಕರಣಬಯಸಿ ಸೋಮವಾರ ಹೋರಾಟಗಾರರ ಪತ್ರ ನೀಡಿದ್ದಾರೆ.
ಈಚೆಗೆ ಅರಣ್ಯ ಸಿಬ್ಬಂದಿ 1988ರ ಪೂರ್ವದ ಮಂಜೂರಿ ಕ್ಷೇತ್ರದಲ್ಲಿಯೂ ಗುಂಡಿ ತೆಗೆಯುತ್ತಿದ್ದಾರೆ. ಆ ಮೂಲಕ ಅರಣ್ಯವಾಸಿಗಳಿಗೆ ಆತಂಕ ಮಾಡುತ್ತಿದ್ದು, ಪದೇ ಪದೇ ಕಾನೂನು ಉಲ್ಲಂಗಿಸುತ್ತಿದ್ದಾರೆ. ಈ ಹಿನ್ನಲೆ ಸ್ಪಷ್ಠನೆ ಕೋರಿ ಈ ಪತ್ರ ನೀಡಲಾಗಿದೆ.
`ಅರಣ್ಯ ಭೂಮಿ ಸಾಗುವಳಿ ವಿಷಯದಲ್ಲಿ ಅರಣ್ಯಾಧಿಕಾರಿಗಳಿಗೆ ಅನೇಕ ಗೊಂದಲವಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅಧಿಭೋಗ ಮತ್ತು ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು ಅವಕಾಶವಿಲ್ಲ. ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪೂರ್ವದಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಕಲಂ 64ಎ ಪ್ರಕ್ರೀಯೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಪತ್ರ ಒದಗಿಸಲಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ.
`ಅರಣ್ಯವಾಸಿಗಳ ಮೇಲೆ ದೈಹಿಕ ಹಿಂಸೆ, ಅವಾಚ್ಯ ಶಬ್ದ ಬಳಸುವುದು ಹಾಗೂ ಮಾನಸಿಕ ಕಿರುಕುಳ ನೀಡುವ ಬಗ್ಗೆ ಪ್ರಶ್ನಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆ ಸೆ 4(5) ಅಡಿಯಲ್ಲಿ ಉಲ್ಲೇಖಿಸಿದಂತೆ ಅರಣ್ಯವಾಸಿಯ ಅರ್ಜಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯು ಪೂರ್ಣ ಆಗುವವರೆಗೆ ಅವನ ಅದಿಭೋಗದಲ್ಲಿರುವ ಅರಣ್ಯ ಜಮೀನಿಂದ ಅವನನ್ನು ಒಕ್ಕಲೇಬ್ಬಿಸತಕ್ಕದ್ದಲ್ಲ ಎಂಬ ವಿಷಯದ ಬಗ್ಗೆಯೂ ತಿಳಿಸಲಾಗಿದೆ. ಈ ವಿಷಯವಾಗಿ ಅರಣ್ಯ ಸಿಬ್ಬಂದಿ ಅನುಸರಿಸುವ ವಿಧಾನದ ಬಗ್ಗೆ ಕಾನೂನಾತ್ಮಕ ಮಾಹಿತಿಯನ್ನು ಪ್ರಶ್ನಿಸಲಾಗಿದೆ’ ಎಂದವರು ವಿವರಿಸಿದ್ದಾರೆ.
ಈ ವೇಳೆ ಸಂಘಟನೆ ಜಿಲ್ಲಾ ಸಂಚಾಲಕ ರಾಮ ಮರಾಠಿ ಯಲಕೊಟಗಿ, ಮಹೇಶ್ ನಾಯ್ಕ ಕಾನಕ್ಕಿ, ವಿನೋದ ನಾಯ್ಕ, ಸುರೇಶ ನಾಯ್ಕ ನಗರಬಸ್ತಿಕೇರಿ, ಸಂಥೋನ ಅಥೋನ್ ಪಿಂಟೊ ಕಾಸರಕೊಡ್, ವಾಸು ದೇಶಭಂಡಾರಿ, ಗಜಾನನ ನಾಯ್ಕ ಕಾಸರಕೊಡ, ಮಹಾದೇವ ಮರಾಠಿ ಸಾಲ್ಕೋಡ, ಹೇಮಲತಾ ನಾಯ್ಕ ಸಾಲ್ಕೋಡ, ಚಂದ್ರಹಾಸ ನಾಯ್ಕ ಬೈಲುರು, ಅನಿತಾ ಲೋಫಿಸ್, ಮಾರುತಿ ನಾಯ್ಕ ಹಡಿನಬಾಳ, ಜೋನ್ ಮಾಗೋಡ, ಥೋಮಸ್ ಲೋಬೋ ಮಾಗೋಡ, ಜನಾಧÀðನ ನಾಯ್ಕ ಚಂದಾವರ, ದಾವೂದ್ ಪ್ರಭಾತನಗರ ಇದ್ದರು.