ಕುಮಟಾದ ಬಾಡ ಸಮುದ್ರದಲ್ಲಿ ವಿಚಿತ್ರ ವಸ್ತುವೊಂದು ಕಾಣಿಸಿದೆ. ವಿದೇಶಿ ಹಡಗಿನ ಅವಶೇಷ ಅದಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕೇರಳದ ಕೊಚ್ಚಿ ಅರಬ್ಬಿ ಸಮುದ್ರದಲ್ಲಿ ಈಚೆಗೆ ಲೈಬಿರಿಯನ್ ಧ್ವಜ ಹೊಂದ ಎಂಎಸ್ಸಿಎಲಾ-3 ಎಂಬ ಹಡಗು ಮುಳುಗಿದ್ದು, ಅದರ ಅವಶೇಷಗಳಾಗಿರುವ ಸಾಧ್ಯತೆ ಹೆಚ್ಚಿದೆ. ಕೆಂಪು ಬಣ್ಣದ ಲೈಪ್ ರಾಪ್ಟ್ (ತೆಪ್ಪದ ಮಾದರಿ) ಸಮುದ್ರ ದಡದ ಬಳಿ ಬಂದಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಆತಂಕದಿoದಲೇ ಈ ಬಗ್ಗೆ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಅದರ ಪರಿಶೀಲನೆ ನಡೆಸಿದ್ದು, `ಇದೊಂದು ರಕ್ಷಣಾ ಸಾಧನ’ ಎಂದು ಖಚಿತಪಡಿಸಿದ್ದಾರೆ. `ಗೂಡಿನ ಆಕಾರದಲ್ಲಿರುವ ಈ ರಾಫ್ಟ್ ತುರ್ತು ಪರಿಸ್ಥಿತಿಯಲ್ಲಿ ಬಳಸಲಾಗುತ್ತದೆ. ಗಾಳಿ ತುಂಬಿಕೊoಡು ನೀರಿನಲ್ಲಿ ತೇಲುತ್ತದೆ. ಆಕಸ್ಮಿಕ ಅವಘಡದ ವೇಳೆ ಇದು ಜನರನ್ನು ರಕ್ಷಿಸಲು ನೆರವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.