ಮಳೆ ಮುಂದುವರೆದ ಕಾರಣ ಮೇ 29ರಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಆದರೆ, ಶಾಲೆಗಳಿಗೆ ಈ ರಜೆ ಇಲ್ಲ. ಅದಾಗಿಯೂ ಮಕ್ಕಳು ಶಾಲೆಗೆ ಬರಬೇಕಾಗಿಲ್ಲ!
ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಣೆಯಾಗಿದೆ. ಈ ಹಿನ್ನಲೆ ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಆದರೆ, ಮೇ 29ರಿಂದ ಶಾಲೆಗಳು ಶುರುವಾಗಲಿದ್ದು, ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾ? ಬೇಡವಾ? ಎಂಬ ಗೊಂದಲ ಪಾಲಕರನ್ನು ಕಾಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾರವಾರ ಹಾಗೂ ಶಿರಸಿಯ ಶಿಕ್ಷಣ ಇಲಾಖೆ ಉಪನಿರ್ದೇಶಕರು `ಮೇ 29ರಿಂದ ಶಾಲೆ ಶುರುವಾಗುವುದು ಸತ್ಯವಾದರೂ ಆ ದಿನ ಶಿಕ್ಷಕರಿಗೆ ಮಾತ್ರ ಬರಲು ಸೂಚಿಸಲಾಗಿದೆ. ಮಕ್ಕಳು ಬರುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶಿಕ್ಷಕರು-ಮುಖ್ಯ ಶಿಕ್ಷಕರು ಹಾಗೂ ಶಾಲಾ ಎಸ್‌ಡಿಎಂಸಿಯವರು ಮೇ 29ರಂದು ಆಗಮಿಸಿ ಶಾಲೆ ಶುರುವಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಮೇ 30ರಂದು ಮಳೆ ರಜೆ ಘೋಷಣೆ ಆಗದೇ ಇದ್ದರೆ ಅಂದಿನಿ0ದ ಪ್ರಾಥಮಿಕ ಶಾಲೆಗಳು ಶುರುವಾಗಲಿದೆ.