ಕಾರವಾರದ ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಮಳಿಗೆಯಲ್ಲಿ ಗುಣಮಟ್ಟದ ಬಗ್ಗೆ ಖಾತ್ರಿ ಕೊಡುವ ISI ಚಿಹ್ನೆಯನ್ನು ನಕಲು ಮಾಡಲಾಗಿದೆ. ಈ ಮಳಿಗೆಯ ಪರವಾನಿಗೆ ಸಂಖ್ಯೆ ಸಹ ಅಸಲಿಯಲ್ಲ!
ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಮಳಿಗೆಯಲ್ಲಿ ಪ್ಲೈವುಡ್ ಶೀಟ್ ಜೊತೆ ಶೌಚಾಲಯ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ಮನೆಗೆ ಬಡಿಯುವ ಬಣ್ಣ, ಕಿಟಕಿಗೆ ಹಾಕುವ ಸೊಳ್ಳೆ ಪರದೆ, ವಿದ್ಯುತ್ ಬಲ್ಪ್ ಸೇರಿ ಬಗೆ ಬಗೆಯ ವಸ್ತುಗಳು ಇಲ್ಲಿ ಸಿಗುತ್ತವೆ. ನಕಲಿ ಉತ್ಪನ್ನಗಳಿಗೆ ಪ್ರತಿಷ್ಠಿತ ಕಂಪನಿಯ ಬ್ರಾಂಡಿನ ಹೆಸರು ನಮೂದಿಸಿ ಇಲ್ಲಿ ಗ್ರಾಹಕರನ್ನು ಮೋಸ ಮಾಡಲಾಗುತ್ತಿದೆ. ಕಾರವಾರ ಬಸ್ ನಿಲ್ದಾಣ ಬಳಿಯ ಸುಭಾಷ್ ಸರ್ಕಲ್ ಅಂಚಿನ ದೋಬಿಘಾಟ್ ರಸ್ತೆಯಲ್ಲಿ ಈ ಮೋಸದ ಮಳಿಗೆಯಿದ್ದು, ಹುಬ್ಬಳ್ಳಿಯಿಮದ ಬಂದ BIS ಅಧಿಕಾರಿಗಳು ಇಲ್ಲಿನ ಬಂಡವಾಳವನ್ನು ಬಯಲು ಮಾಡಿದ್ದಾರೆ.
ಬುಧವಾರ ಹುಬ್ಬಳ್ಳಿಯ ಬಿಎಸ್‌ಐ ಶಾಖೆಯ ಉಪನಿರ್ದೇಶಕ ಎಂ ಪ್ರದೀಪಕುಮಾರ್ ಮತ್ತು ಸಹಾಯಕ ನಿರ್ದೇಶಕ ಅಶುತೋಷ್ ಅಗರವಾಲ್ ಕಾರವಾರಕ್ಕೆ ಭೇಟಿ ನೀಡಿದ್ದರು. ಅನುಮಾನದ ಮೇರೆಗೆ ಅವರು ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಮಳಿಗೆಗೆ ತೆರಳಿದರು. ಅಲ್ಲಿನ ವಸ್ತುಗಳನ್ನು ಪರಿಶೀಲಿಸಿದಾಗ ಅವರು ಗುಣಮಟ್ಟದಿಂದ ಕೂಡಿರಲಿಲ್ಲ. ISI ಗುರುತು ಪರಿಶೀಲಿಸಿದಾ ಅದು ಸಹ ಅಸಲಿ ಆಗಿರಲಿಲ್ಲ.
ಪ್ಲೈವುಡ್ ಹಾಳೆಗಳ ಮೇಲೆ ISI ಗುರುತಿನ ಅನಧಿಕೃತವಾಗಿ ಬಳಕೆ ಮಾಡಿರುವುದು ಈ ವೇಳೆ ಗೊತ್ತಾಯಿತು. ನಕಲಿ ISI ಗುರುತು ಮತ್ತು ಪರವಾನಗಿ ಸಂಖ್ಯೆಯನ್ನು ಹೊಂದಿರುವ ಮೆರೈನ್ ಪ್ಲೈವುಡ್’ನ್ನು ಅಧಿಕಾರಿಗಳು ವಶಕ್ಕೆಪಡೆದರು. ಬಿಎಸ್‌ಐ ಪ್ರಮಾಣ ಪತ್ರ ಇಲ್ಲದೇ ನಕಲಿ ಪರವಾನಿಗೆ ಸಂಖ್ಯೆ ಬಳಸಿ ಐಎಸ್‌ಐ ಗುರುತಿನ ಟ್ಯಾಗ್ ನಮೂದಿಸಿದ ಕಾರಣ ಮಳಿಗೆಯವರ ಮೇಲೆ ಕಾನೂನು ಕ್ರಮ ಜರುಗಿಸಿದರು.
`ಐಎಸ್‌ಐ ಚಿಹ್ನೆಯ ದುರುಪಯೋಗಪಡಿಸಿಕೊಂಡಿರುವುದರಿOದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ ಆಕ್ಟ್ (ಭಾರತೀಯ ಮಾನದಂಡಗಳ ಕಾಯ್ದೆ) 2016ರ ನಿಬಂಧನೆಗಳ ಉಲ್ಲಂಘನೆಯಾಗಿದೆ. ದುಷ್ಕೃತ್ಯ ನಡೆಸುವವರ ವಿರುದ್ಧ ಬಿಎಸ್‌ಐ ಕಠಿಣ ಕ್ರಮ ಜರುಗಿಸಲಿದೆ’ ಎಂದು ಬಿಎಸ್‌ಐ ಶಾಖೆಯ ಉಪನಿರ್ದೇಶಕ ಎಂ ಪ್ರದೀಪಕುಮಾರ್ ತಿಳಿಸಿದರು. `ಐಎಸ್‌ಐ ಗುರುತುಗಳ ದುರುಪಯೋಗ ಅಥವಾ ಗುಣಮಟ್ಟದ ಸಮಸ್ಯೆ ಬಗ್ಗೆ ಸಾರ್ವಜನಿರಕರು ದೂರು ಕೊಡಬಹುದು. ಗುಣಮಟ್ಟ ಅರಿಯಲು ಬಿಎಸ್‌ಐ ಕೇರ್ ಎಂಬ ಮೊಬೈಲ್ ಅಪ್ಲಿಕೇಶನ್ ಬಳಸುವುದು ಉತ್ತಮ’ ಎಂದು ಅವರು ಮಾಹಿತಿ ಹಂಚಿಕೊOಡರು.